ಕ್ಯಾನ್ಯರ್ ಗೆದ್ದ ದೀಪಿಕಾಳ ಬಾಳು ಬೆಳಗಲು ನಿಮ್ಮ ಸಹಾಯ ಹಸ್ತವಿರಲಿ

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,23: ಮೂಳೆ ಕ್ಯಾನ್ಸರಿಗೆ ತುತ್ತಾಗಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ ಕೇವಲ ನಾಲ್ಕು ವರ್ಷದ ಪುಟಾಣಿ ದೀಪಿಕಾ ಶಸ್ತ್ರ ಚಿಕಿತ್ಸೆ ನಂತರ ನೋವಿದ್ದರೂ ಹೂವಿನಂತೆ ನಗುಬೀರುತ್ತಿದ್ದಾಳೆ. ಹಾಗೆಂದ ಮಾತ್ರಕ್ಕೆ ಆಕೆಯ ಕಷ್ಟವೆಲ್ಲಾ ತೀರಿತು ಎಂದೇನೂ ಇಲ್ಲ. ಅವಳ ಬದುಕು ಇನ್ನಷ್ಟು ಹಸನಾಗಬೇಕಾದರೆ ನಮ್ಮೆಲ್ಲರ ಸಹಕಾರ ಆಕೆಯ ಕುಟುಂಬಕ್ಕೆ ಬೇಕಾಗಿದೆ.

ದೀಪಿಕಾ ಪುತ್ತುರಾಜು ಮತ್ತು ಶೋಭಾ ದಂಪತಿಯ ಮಗಳು. ತಂದೆ ಎಲೆಕ್ಟ್ರೀಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಗೃಹಿಣಿ. ಇವರು ಬೆಂಗಳೂರಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಗುವಿನ ಶಸ್ತ್ರ ಚಿಕಿತ್ಸೆ ನಂತರ ಆಕೆಯ ಔಷಧಿಯ ಖರ್ಚನ್ನು ನಿಭಾಯಿಸಲು ಕಷ್ಟಪಡುತ್ತಿದ್ದಾರೆ. ಇದೀಗ ಇವರಿಗೆ ದಾನಿಗಗಳ ನೆರವು ಬೇಕಾಗಿದೆ.[ಕ್ಯಾನ್ಸರ್ ಕಥೆ ಹೇಳಿಸಿದ ಲಾಲ್ ಬಾಗ್ ಹಣ್ಣಿನ ಮೇಳ]

Your help to saves 4 year old girl life From Cancer in Bengaluru

ಸಾವನ್ನು ಗೆದ್ದ ದೀಪಿಕಾಳ ಕಥೆ:

ದೀಪಿಕಾ ಕಳೆದ ವರ್ಷ ತನ್ನ ಮನೆಯ ಹತ್ತಿರ ಆಟವಾಡುತ್ತಾ ಬಿದ್ದಿದ್ದಾಳೆ. ಆಗ ಆಕೆಯ ಕೈಗೆ ತೀವ್ರ ಪೆಟ್ಟು ಬಿದ್ದು ನೋವಿನಿಂದ ಕಿರುಚುತ್ತಿದ್ದಳು. ಇದರಿಂದ ಭಯಭೀತಳಾದ ಆಕೆಯ ಅಮ್ಮ ಶೋಭಾ ಮಗುವಿನ ಕೈ ಮುರಿದಿದೆಯೋ ಏನೋ ಎಂದು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಕ್ಯಾನ್ಸರಿನ ಗುಣಲಕ್ಷಣಗಳನ್ನು ಅರಿತುಕೊಳ್ಳದೇ ಆಕೆಗೆ ಸಣ್ಣ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.

ಆದರೆ ಶಸ್ತ್ರ ಚಿಕಿತ್ಸೆಯ ನಂತರವೂ ಮಗು ದೀಪಿಕಾಳ ನೋವಿನ ನರಳಾಟ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಅಲ್ಲದೇ ಶಸ್ತ್ರ ಚಿಕಿತ್ಸೆ ನಡೆದ ಭುಜದ ಭಾಗದಲ್ಲಿ ರಕ್ತ ಸುರಿಯಲಾರಂಭಿಸಿತು. ಮಗು ಮಾತ್ರ ನೋವಿಗೆ ತತ್ತರಿಸಿ ಊಟ, ನಿದ್ದೆ ಎಲ್ಲವನ್ನೂ ಬಿಟ್ಟಿತ್ತು. ದಿನೇ ದಿನೇ ಪುಟಾಣಿಯ ಪರಿಸ್ಥಿತಿ ಮಾತ್ರ ಗಂಭೀರವಾಗುತ್ತಲೇ ಹೋಯಿತು.[ಕ್ಯಾನ್ಸರ್ ಪೀಡಿತ ಬಾಲಕನಿಗೆ ಪೊಲೀಸ್ ಸಮವಸ್ತ್ರದ ಪುಳಕ]

ತಾಯಿ ಶೋಭಾ ಮಗುವಿನ ಸ್ಥಿತಿಯನ್ನು ಕಂಡು ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಈ ಮಗುವಿನ ಬಾಳಿನ ಬೆಳಕಾಗಿ ಬಂದವರೇ ಡಾ|| ಪ್ರಮೋದ್ ಚಿಂದಾರ್. ಅವರು ತಕ್ಷಣ ಮಗುವನ್ನು ನಾನಾ ಪರೀಕ್ಷೆಗಳಿಗೆ ಒಳಪಡಿಸಿದಾಗ ಮಗು ಮೂಳೆ ಕ್ಯಾನ್ಸರಿಗೆ ಒಳಗಾಗಿರುವುದು ತಿಳಿದಿದೆ.

Your help to saves 4 year old girl life From Cancer in Bengaluru

ಈ ವಿಚಾರ ತಿಳಿದ ವೈದ್ಯರು ದೀಪಿಕಾಳ ತಂದೆ ತಾಯಿಯನ್ನು ಕರೆಯಿಸಿ ಮಗುವಿನ ಸ್ಥಿತಿಯನ್ನು ವಿವರಿಸಿ ಶಸ್ತ್ರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ ಎಂದಿದ್ದಾರೆ. ಮಗುವಿನ ಸ್ಥಿತಿಯಿಂದ ಕಂಗಾಲಾದ ತಂದೆ ತಾಯಿಗೆ ಸಿಡಿಲು ಬಡಿದಂತಾಯಿತು. ದಿಕ್ಕು ತೋಚದಂತಾಯಿತು. ವೈದ್ಯರು ಕೊಟ್ಟ ಪರೀಕ್ಷೆಯ ದಾಖಲೆ ನೋಡಿ ಕುಳಿತಲ್ಲಿಯೇ ತಂದೆ ತಾಯಿ ರೋದಿಸ ತೊಡಗಿದರು. ಇವರ ಕಣ್ಣೀರಿನ ನೋವಿನ ತೀವ್ರತೆ ಎಷ್ಟಿತ್ತೆಂದರೆ ಎದುರಿಗಿನ ವೈದ್ಯರ ಕಣ್ಣಲ್ಲಿ ನೀರು ಚಿಮುಕಿತು.[ನೀವು ಸಿಗರೇಟು ಯಾಕೆ ಬಿಡಬೇಕು, ಇಲ್ಲಿವೆ 10 ಕಾರಣಗಳು]

ಕೊನೆಗೆ ಅನುಕೂಲಸ್ಥರಲ್ಲದ ದೀಪಿಕಾಳ ತಂದೆ ತಾಯಿಯ ನೆರವಿಗೆ ನಿಂತ ಡಾ ಪ್ರಮೋದ್ ತನ್ನ ಸಂಬಂಧಿಕರ ಹಾಗೂ ಆಸ್ಪತ್ರೆಯ ಇನ್ನಿತರ ವೈದ್ಯರನ್ನು ಸಂಪರ್ಕಿಸಿ ಹಣ ಸಂಗ್ರಹಿಸಿದರು. ತಂದೆ ತಾಯಿ ತಮ್ಮ ಪರಿಚಯಸ್ಥರನ್ನು ಕಾಡಿ ಬೇಡಿ ಸ್ವಲ್ಪ ಹಣ ಸಂಗ್ರಹಿಸಿದರು. ಹಣ ಸಾಲದೇ ಹೋದಾಗ ಇದ್ದ ಒಂದು ಸಣ್ಣ ಸ್ವಂತ ಮನೆಯನ್ನು ಮಾರಿದರು. ಹಾಗೂ ಹೀಗೂ ಹೇಗೋ ಹಣ ಸಂಗ್ರಹಣೆ ಏನೋ ಆಯಿತು. ಮುಂದೆ ಉಳಿದದ್ದು ಮಗುವಿನ ಶಸ್ತ್ರ ಚಿಕಿತ್ಸೆ. ಇದು ವೈದ್ಯರಿಗೆ ದೊಡ್ಡ ಸವಾಲಾಯಿತು.

ವೈದ್ಯರಿಗೆ ಎದುರಾದ ಸವಾಲೇನು? ಎಷ್ಟು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಯಿತು?

ದೀಪಿಕಾ ನಾಲ್ಕು ವರ್ಷದವಳು. ಇದು ಸಾಮಾನ್ಯವಾದ ಶಸ್ತ್ರ ಚಿಕಿತ್ಸೆಯಲ್ಲ. ಇದುವರೆಗೆ ಇಡೀ ಭಾರತದಲ್ಲಿ ಕೇವಲ 9,500 ಮಂದಿ ಮಾತ್ರ ಈ ಮೂಳೆ ಕ್ಯಾನ್ಸರ್ ಗೆ ತುತ್ತಾಗಿದ್ದಾರೆ. ಕಾನ್ಸರ್ ನಿಂದಾಗಿ ಈಕೆಯ ಮೂಳೆ ಶೇ. 80ರಷ್ಟು ಹಾಳಾಗಿದೆ. ಮಗುವಿನ ಮೂಳೆಯನ್ನು ಬದಲಾಯಿಸಲೇ ಬೇಕು. ಇದಕ್ಕೆ ಸಾಕಷ್ಟು ಗಂಟೆಗಳು ಹಿಡಿಯುತ್ತದೆ ಎಂದು ಹೇಳಿ ಪೋಷಕರನ್ನು ಸಮಾಧಾನಿಸಿ ಧೈರ್ಯ ತಂದುಕೊಳ್ಳಿ ಎಂದು ಹೇಳಿ ಶಸ್ತ್ರ ಚಿಕಿತ್ಸೆ ಕೊಠಡಿಗೆ ತೆರಳಿದರು.[ಕ್ಯಾನ್ಸರ್, ಹೃದಯ ಸಂಬಂಧಿ ಔಷಧಿಗಳು ಕೆಡಿಮೆ ಬೆಲೆಯಲ್ಲಿ ಲಭ್ಯ]

Your help to saves 4 year old girl life From Cancer in Bengaluru

ಡಾ. ಪ್ರಮೋದ್ ತನ್ನ ತಂಡದ ಸಹಕಾರದೊಂದಿಗೆ ಸತತ 13 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಕೈಗೊಂಡಿದ್ದಾರೆ. ಆ ಸಂದರ್ಭದಲ್ಲಿ ಮಗುವಿನ ಪೋಷಕರು ಕ್ಷಣಕ್ಷಣಕ್ಕೂ ಸತ್ತು ಬದುಕುತ್ತಿದ್ದರು. ಕಂಡ ಕಂಡ ದೇವರಲ್ಲಿ ಹರಕೆ ಹೊತ್ತರು. ರಾತ್ರಿ ಇಡೀ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಯಶಸ್ಸಿನೊಂದಿಗೆ ಬೆಳಿಗ್ಗೆ 7.30ಕ್ಕೆ ಹೊರಬಂದರು. ವೈದ್ಯಲೋಕದಲ್ಲಿ ಒಂದು ಪವಾಡವೇ ನಡೆದು ಹೋಯಿತು. ಆಗ ಮಗುವಿನ ಜೊತೆಗೆ ತಂದೆ ತಾಯಿಗೂ ಮರುಜೀವ ಸಿಕ್ಕಿತು. ಅವರ ಆನಂದ ಭಾಷ್ಪಕ್ಕೆ ಪಾರವೇ ಇಲ್ಲಂದಾಯಿತು. ಇದೀಗ ದೀಪಿಕಾ ವೈದ್ಯರ, ಇತರರ ಸಹಾಯದಿಂದ ಪೋಷಕರೊಂದಿಗೆ ಖುಷಿಯಲ್ಲಿದ್ದಾಳೆ.

ದಾನಿಗಳೇ ದೀಪಿಕಾಳಿಗೆ ನೆರವಾಗಿ:

ದೀಪಿಕಾ ಕ್ಷಣ ಕ್ಷಣಕ್ಕೂ ಚೇತರಿಸಿಕೊಳ್ಳುತ್ತಿದ್ದಾಳೆ. ಆದರೆ ಆಕೆಗೆ ಮತ್ತು ಕುಟುಂಬದವರಿಗೆ ನಿಮ್ಮ ಸಹಾಯದ ಅವಶ್ಯಕತೆ ಇದೆ. ನೀವು ನೀಡುವ ಹಣದಿಂದ ಪೋಷಕರು ಆಕೆಯ ಔಷಧಿ ಖರ್ಚನ್ನು ಭರಿಸಲಿದ್ದಾರೆ. ಈಗಾಗಲೇ ಬೆಂಗಳೂರಿನ ಸಂಪಂಗಿರಾಮ ನಗರದಲ್ಲಿರುವ ಎಚ್ ಸಿಜಿ ಆಸ್ಪತ್ರೆ ಹಣ ಸಂಗ್ರಹಿಸಿ ನೀಡಿದೆ. ನಿಮ್ಮ ಒಂದು ರೂ ಹಣವೂ ಮಗುವಿನ ಬದುಕಿಗೆ ನೆರವಾಗಲಿದೆ. ಹೆಚ್ಚಿನ ಮಾಹಿತಿಗಾಗಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Your help to saves 4 year old girl Deepika's life From Cancer in Bengaluru.
Please Wait while comments are loading...