ಬೆಂಗಳೂರಿನಲ್ಲಿ ಮದುವೆ ನಿಶ್ಚಯವಾಗಿದ್ದ ಯುವಕನ ಅಪಹರಣ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 26: ಮದುವೆ ನಿಶ್ಚಯವಾಗಿದ್ದ ಯುವಕನ ಮೇಲೆ ಹಲ್ಲೆ ಮಾಡಿ, ಅಪಹರಣ ನಡೆಸಿದ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ರಾಜು ಅಪಹರಣವಾದ ಯುವಕ. ತನ್ನ ಮನೆಯ ಸಮೀಪ ಮದುವೆ ನಿಶ್ಚಯವಾಗಿದ್ದ ಹುಡುಗಿಯೊಂದಿಗೆ ಮಾತನಾಡುವಾಗ ಈ ಘಟನೆ ಸಂಭವಿಸಿದೆ.

ಅಪಹರಣವಾದ ಸ್ಥಳದಲ್ಲಿ ರಕ್ತದ ಕಲೆ ಕಂಡುಬಂದಿದೆ. ಡಿಸೆಂಬರ್ 10, 11ರಂದು ರಾಜು ಅವರ ಮದುವೆ ನಿಶ್ಚಯವಾಗಿತ್ತು. ಮೈಸೂರು ರಸ್ತೆಯ ಬಳಿ ರಾಜು ಅವರ ಮನೆ ಇದೆ. ಶುಕ್ರವಾರ ರಾತ್ರಿ ವೇಳೆ ಮದುವೆ ನಿಗದಿಯಾಗಿದ್ದ ಹುಡುಗಿಯ ಜೊತೆಗೆ ಮಾತನಾಡುತ್ತಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ, ಅಪಹರಿಸಿದ್ದಾರೆ.[ಕೆಆರ್ ಪುರಂನಲ್ಲಿ ಬೆಳ್ಳಂಬೆಳಗ್ಗೆ 10 ವರ್ಷದ ಬಾಲಕ ಕಿಡ್ನಾಪ್]

raju

ಅಪಹರಣಕ್ಕೆ ಸಂಬಂಧಿಸಿದಂತೆ ನಾನಾ ಅನುಮಾನಗಳು ಮೂಡಿದ್ದು, ಹಣ ಕಾಸು, ಪ್ರೇಮ ವಿಚಾರ ಸೇರಿದಂತೆ ನಾನಾ ಆಯಾಮಗಳಿಂದ ತನಿಖೆ ನಡೆಯುತ್ತಿದೆ. ಮದುವೆಗೆ ಸಿದ್ಧತೆ ನಡೆಯುತ್ತಿದ್ದ ವೇಳೆ ಹೀಗೆ ಅಪಹರಣ ಕೃತ್ಯ ನಡೆದಿರುವುದರಿಂದ ರಾಜು ಕುಟುಂಬದವರು ಯರ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೋ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುವ ಸಾಧ್ಯತೆ ಇದೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Raju, 32 year old, whose marriage fixed on December, kidnapped in Bengaluru on Friday night.
Please Wait while comments are loading...