ಮಂಗಳಮುಖಿಯರಿಂದ ಯುವಕನ ಮೇಲೆ ಬ್ಯಾಟ್ ನಿಂದ ಹಲ್ಲೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 7: ಕೇಳಿದ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಾಯಂಡಹಳ್ಳಿ ಸಮೀಪದ ಟೋಟಲ್ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ನಡೆದಿದೆ. ಇದೇ ವೇಳೆ ಆತನ ಬಳಿ ಇದ್ದ ಸರ, ಮೊಬೈಲ್ ಫೋನ್ ನ ಸಹ ದೋಚಿದ್ದಾರೆ.

ಸ್ವಾಮಿ ಹಲ್ಲೆಗೊಳಗಾದ ಯುವಕ. ಬ್ಯಾಟರಾಯನ ಪುರ ಪೊಲೀಸರು ಸ್ಥಳಕ್ಕೆ ಬಂದು, ಮಂಗಳಮುಖಿಯರು ಹಾಗೂ ಗಾಯಾಳುವನ್ನು ಪೊಲೀಸ್ ಠಾಣೆ ಬಳಿಗೆ ಕರೆದೊಯ್ದರು. ಆದರೆ ಹಲ್ಲೆ ವಿಚಾರವನ್ನು ನಿರಾಕರಿಸಿರುವ ಪೊಲೀಸರು, ಯುವಕ ಬಿದ್ದು ಗಾಯಗೊಂಡಿದ್ದಾನೆ ಎಂದು, ಮಂಗಳಮುಖಿಯರನ್ನು ಬಿಟ್ಟು ಕಳಿಸಿದ್ದಾರೆ.[ಬೆಂಗಳೂರು: ಟೆಕ್ಕಿಯನ್ನು ದೋಚಿದ ಮಂಗಳಮುಖಿಯರು]

crime

ನಾಯಂಡಹಳ್ಳಿ ಬಳಿ ಮರಳು ಲಾರಿಗಳನ್ನು ನಿಲ್ಲಿಸುವ ಸಾಲಿನಲ್ಲಿ ಮಲಗಲು ಆ ಯುವಕ ತೆರಳಿದ್ದ ವೇಳೆ, ಮಂಗಳಮುಖಿಯರು ಬಂದು ಹಣ ನೀಡುವಂತೆ ಕೇಳಿದ್ದಾರೆ. ಅದಕ್ಕೆ ಆ ಯುವಕ ತಿರಸ್ಕರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಮಂಗಳಮುಖಿಯರು, ಬ್ಯಾಟ್ ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.[ಸಿಲಿಕಾನ್ ಸಿಟಿ ಬೆಂಗಳೂರು ಪುರುಷರಿಗೂ ಸೇಫ್ ಅಲ್ಲ]

ಆತನನ್ನು ಕಾಪಾಡಲು ಮುಂದಾದ ಸಾರ್ವಜನಿಕರ ಮೇಲೆ ಕೂಡ ಹಲ್ಲೆಗೆ ಮುಂದಾಗಿದ್ದಾರೆ. ಆ ನಂತರ ಸ್ಥಳಕ್ಕೆ ಬಂದ ಬ್ಯಾಟರಾಯನ ಪುರ ಪೊಲೀಸರು ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ, ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.ಈ ಪ್ರಕರಣ ಬಗ್ಗೆ ದೂರು ದಾಖಲಾಗಿದೆಯಾ ಎಂಬುದು ಖಚಿತವಾಗಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Swami, Young man beaten by transgenders in Bengaluru on Tuesday night. They asked for money, he refused to give. After that they beat Swami by bat.
Please Wait while comments are loading...