ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉದ್ಯಮಿಗಳನ್ನು ಮಂಚಕ್ಕೆ ಕರೆದು ಹನಿಟ್ರ್ಯಾಪ್ ಮಾಡುತ್ತಿದ್ದ ಯುವತಿ ಬಲೆಗೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಹನಿಟ್ರ್ಯಾಪ್ ಮಾಡಿ ಉದ್ಯಮಿಯೊಬ್ಬರ ಬಳಿ ಸುಮಾರು 11.62 ಲಕ್ಷ ಕಸಿದಿದ್ದ ಯುವತಿಯನ್ನು ಬಂಧಿಸಲಾಗಿದೆ.

ನಾಗರಬಾವಿ ನಿವಾಸಿ ವಿನುತಾ ಗೌಡ ಬಂಧಿತ ಮಹಿಳೆ, ಆಕೆಯ ಪ್ರಿಯಕರ ಸೀನು ಎಂಬಾತ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 1ರಂದು ವಿನುತಾ ಹೆಸರು ಹೇಳಿಕೊಂಡು ಉದ್ಯಮಿಗೆ ಸೀನು ಎಂಬಾತ ಕರೆ ಮಾಡಿದ್ದ, ವಿನುತಾ ಅವರಿಗೆ ಹಣ ನೀಡದಿದ್ದರೆ ನಿಮ್ಮ ಮನೆಗೆ ಬಂದು ವಿಷಯ ತಿಳಿಸುವುದಾಗಿ ಬೆದರಿಕೆ ಹಾಕಿದ್ದ, ನಾಗರಬಾವಿ ನಿವಾಸಿ ಕುಬೇರ ಎಂಬುವವರನ್ನು ಹನಿಟ್ರ್ಯಾಪ್ ಮಾಡಿದ್ದರು.

Young lady arrested for Honeytrap case

ಹಾನಿಟ್ರ್ಯಾಪ್ ಹೇಗೆ: ಶ್ರೀಮಂತ ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಮೊದಲು ಅವರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಿದ್ದರು.

ಬಳಿಕ ಆರೋಪಿ ವಿನುತಾ ಉದ್ಯಮಿಗಳೊಂದಿಗೆ ಸಲುಗೆ ಬೆಳೆಸಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದಳು. ಬಳಿಕ ತಮ್ಮ ಬಳಿ ಫೋಟೋ ಹಾಗೂ ವಿಡಿಯೋ ಇದೆ ಎಂದು ಹೇಳಿ ಬ್ಲಾಕ್ ಮೇಲ್ ಮಾಡುತ್ತಿದ್ದರು. ಅಲ್ಲದೇ ಹಣ ನೀಡದಿದ್ದರೆ ಫೋಟೋ ಹಾಗೂ ವಿಡಿಯೋವನ್ನ ಕುಟುಂಬದವರಿಗೆ ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದರು.

ಮೊಬೈಲ್ ಸಂಖ್ಯೆ ಪಡೆದುಕೊಂಡು ಉದ್ಯಮಿಗಳ ಜೊತೆ ಮೊಬೈಲ್‌ನಲ್ಲಿ ಮೊದಲು ಸಂಭಾಷಣೆ ಆರಂಭಿಸಿ ಕ್ರಮೇಣವಾಗಿ ಬಲೆಗೆ ಬೀಳಿಸಿಕೊಂಡು ಲಕ್ಷ ಲಕ್ಷ ದೋಚುತ್ತಿದ್ದಳು.

English summary
Young lady vinuta has been arrested for honeytrap and blackmailing businessman for 11 lakh rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X