ಐಪಿಎಲ್ ಫೈನಲ್ : ನೀವು ಪಡೆದ ಟಿಕೆಟ್ ಅಸಲಿಯೇ?

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಮೇ 28 : ಐಪಿಎಲ್ 9ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗುತ್ತಿದೆ. ಮತ್ತೊಂದು ಕಡೆ ನಕಲಿ ಟಿಕೆಟ್ ಮಾರಾಟ ದಂಧೆ ಜೋರಾಗಿ ನಡೆದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್‌ ಪ್ರವೇಶಿಸಿರುವುದರಿಂದ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಟಿಕೆಟ್ ಖರೀದಿಸಲು ಮುಗಿಬಿದ್ದಿದ್ದಾರೆ. ಈಗಾಗಲೇ ಟಿಕೆಟ್‌ಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಆದರೆ, ಅಭಿಮಾನಿಗಳು ಬ್ಲಾಕ್‌ನಲ್ಲಿ ಟಿಕೆಟ್ ಖರೀದಿಸುತ್ತಿದ್ದಾರೆ. [ಹೈದರಾಬಾದ್‌ ತಂಡವನ್ನು ಫೈನಲ್‌ಗೆ ತಂದ ವಾರ್ನರ್!]

ipl 9

ಬ್ಲಾಕ್‌ನಲ್ಲಿ ಐದು ಪಟ್ಟು ಹೆಚ್ಚು ಹಣ ಕೊಟ್ಟು ಟಿಕೆಟ್ ಖರೀದಿ ಮಾಡಬೇಕಿದೆ. ಆದರೆ, ಹೀಗೆ ಪಡೆಯುತ್ತಿರುವ ಟಿಕೆಟ್‌ಗಳು ನಕಲಿ ಎಂಬ ಅತಂಕಕಾರಿ ಸುದ್ದಿ ಬಹಿರಂಗವಾಗಿದೆ. ನಕಲಿ ಟಿಕೆಟ್ ಮಾರಾಟ ಮಾಡುವವರನ್ನು ಪತ್ತೆ ಹಚ್ಚಲು ಪೋಲಿಸ್ ಇಲಾಖೆ ತಂಡವೊಂದನ್ನು ರಚನೆ ಮಾಡಿದೆ. [ಕ್ರಿಕೆಟ್ ಬೆಟ್ಟಿಂಗ್ : ಶ್ರೀರಾಮಪುರದಲ್ಲಿ ಸುರೇಶ್ ಬಂಧನ]

ಅಸಲಿ ಟಿಕೆಟ್‌ನಂತೆ ನಕಲಿ ಟಿಕೆಟ್ ಮುದ್ರಿಸಿ ಮಾರಾಟ ಮಾಡುತ್ತಿದ್ದು, 700 ರೂ. ಟಿಕೆಟ್ 5 ಸಾವಿರ ರೂ.ಗೆ ಬ್ಲಾಕ್‌ನಲ್ಲಿ ಮಾರಾಟವಾಗುತ್ತಿದೆ. ಈ ಟಿಕೆಟ್‌ಗಳಲ್ಲಿ ಬಹುತೇಕ ನಕಲಿಯಾಗಿದ್ದು, ಅಭಿಮಾನಿಗಳು ಟಿಕೆಟ್ ಪಡೆಯುವಾಗ ಎಚ್ಚರ ವಹಿಸಬೇಕಾಗುತ್ತದೆ. [ಫೈನಲ್ ಪ್ರವೇಶಿಸಿದ ಜೋಶ್ ನಲ್ಲಿ ಆರ್ ಸಿಬಿ ಹುಡ್ಗರ ಡಾನ್ಸ್]

ಮೇ 29ರ ಭಾನುವಾರ ರಾತ್ರಿ 8 ಗಂಟೆಗೆ ಆರ್‌ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ನಿಮ್ಮ ಕೈಯಲ್ಲಿ ಫೈನಲ್ ಪಂದ್ಯದ ಟಿಕೆಟ್ ಇದ್ದರೆ ಅದು ಅಸಲಿಯೇ?, ನಕಲಿಯೇ ಒಮ್ಮೆ ಪರೀಕ್ಷಿಸಿಕೊಳ್ಳಿ. [ಪಿಟಿಐ ಚಿತ್ರ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With demand of tickets for the IPL-9 final hitting crescendo in Bengaluru. Some fake tickets reportedly made their way into the black market. Final match scheduled on May 29, 2016 between Royal Challengers Bangalore (RCB) and Sunrisers Hyderabad (SRH)at Bengaluru.
Please Wait while comments are loading...