ಕನ್ನಡಿಗರಿಗೆ ಕಹಿ, ಅರ್ಜಿಗೆ ನೀವು ಕನ್ನಡದಲ್ಲಿ ಮಾಡಿದರೆ ಸಹಿ

Written By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 09 : ಕನ್ನಡ ಪ್ರೇಮಿಗಳ ಅಭಿಮಾನಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ. ಕನ್ನಡಿಗರೇ, ಕನ್ನಡಾಭಿಮಾನ ಮೆರೆದು ನೀವು ಕನ್ನಡದಲ್ಲೇ ಸಹಿ ಮಾಡಿದ್ದಲ್ಲಿ ನಿಮ್ಮ ಅರ್ಜಿ ತಿರಸ್ಕರಿಸಲಾಗುತ್ತದೆ!

ರೇಲ್ವೆ ನೇಮಕಾತಿ ಮಂಡಳಿ 26 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿದೆ. ಅರ್ಜಿ ಸಲ್ಲಿಸಲು ಮಾರ್ಚ್ 5 ಕೊನೆಯ ದಿನಾಂಕ. ಆದರೆ, ನೀವು ಅರ್ಜಿಯಲ್ಲಿ ಕನ್ನಡದಲ್ಲಿ ಸಹಿ ಹಾಕಿದಲ್ಲಿ ಅರ್ಜಿ ಕಸದ ಬುಟ್ಟಿ ಸೇರಲಿದೆ.

26 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ

ಅರ್ಜಿ ಪತ್ರದ 1.8 ನಿಯಮದಡಿಯಲ್ಲಿ ಹೇಗೆ ಸಹಿ ಹಾಕಬೇಕೆಂದು ನಿರ್ದೇಶನ ನೀಡಲಾಗಿದೆ. ಅದರ ಪ್ರಕಾರ, ಎಲ್ಲ ಕಡೆಗಳಲ್ಲಿ ಸಹಿ ಒಂದೇ ತೆರನಾಗಿರಬೇಕು ಮತ್ತು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಇರಬೇಕು. ದಪ್ಪಕ್ಷರಗಳಲ್ಲಿ, ಬೇರೆಬೇರೆ ರೀತಿಯಲ್ಲಿ ಮತ್ತು ಇತರೆ ಭಾಷೆಗಳಲ್ಲಿ ಇರಬಾರದು. ಇದ್ದರೆ ರೈಲು ಹತ್ತಬೇಕಾಗುತ್ತದೆ.

You cannot sign in Kannada on RRB application

ಸಹಿ ಹಿಂದಿಯಲ್ಲಿ ಇರಬಹುದು, ಆದರೆ ಕನ್ನಡದಲ್ಲಿ ಇರಬಾರದು! ಇದು ಹಿಂದಿ ಹೇರಿಕೆ ಅಲ್ಲದೆ ಇನ್ನೇನು ಎಂದು ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ. ನಾವು ಇದೇನು ಸ್ವತಂತ್ರ ಭಾರತದಲ್ಲಿ ಇದ್ದೇವೆಯೋ ಅಥವಾ ನಮ್ಮ ಮೇಲೆ ತುರ್ತು ಪರಿಸ್ಥಿತಿ ಹೇರಲಾಗಿದೆಯೋ ಎಂದು ರುದ್ರಣ್ಣ ಹರ್ತಿಕೋಟೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಹಿ ಎಂಬುದು ಆಯಾ ವ್ಯಕ್ತಿಯ ಹೆಗ್ಗುರುತಷ್ಟೇ. ಅದು ಹೀಗೇ ಇರಬೇಕು, ಇಂಥದೇ ಭಾಷೆಯಲ್ಲಿರಬೇಕು ಎಂದು ಹೇಳಲು ಇವರ್ಯಾರು? ಇದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ಸಾಧ್ಯವೆ? ಇದರಲ್ಲಿ ಯಾವುದೇ ಲಾಜಿಕ್ ಇಲ್ಲ. ಬೇರೆ ತರಹ ಸಹಿ ಬರೆದು ಜನರು ಮೋಸ ಮಾಡಬೇಕೆ? ಎಂದು ಹಲವರು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಉತ್ತರ ನೀಡುವವರು ಯಾರು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Your application will be straight away rejected if you sign on Railway Recruitment Board (RRB) application in Kannada or any other language, other than English or Hindi. Is this not impostition of Hindi on Kannadigas?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ