ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ಹೆಚ್ಚಳದಿಂದ ತಗ್ಗಿದ ರಸ್ತೆ ಅಪಘಾತಗಳ ಸಂಖ್ಯೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 19: ಬೆಂಗಳೂರಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಉಲ್ಬಣವಾಗುತ್ತಿದೆ ಆದರೆ ಅದರಿಂದ ನೂರಾರು ಮಂದಿ ಪ್ರಾಣ ಉಳಿಯುತ್ತಿದೆ ಎನ್ನುತ್ತಾರೆ ಟ್ರಾಫಿಕ್ ಪೊಲೀಸರು.

ಹೌದು ಟ್ರಾಫಿಕ್ ಇರುವ ಕಾರಣ ನೀವು ನಿಧಾನವಾಗಿ ಸಂಚರಿಸುತ್ತೀರ ಅದರಿಂದ ರಸ್ತೆ ಅಪಘಾತಗಳ ಸಂಖ್ಯೆಯೂ ಕ್ಷೀಣಿಸಿದೆ. ಕಳೆದ ಐದಾರು ವರ್ಷಗಳಿಗೆ ಹೋಲಿಸಿದರೆ ರಸ್ತೆ ಅಪಘಾತ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ.

ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್ ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್

2009ರಲ್ಲಿ ವರ್ಷಕ್ಕೆ 6,875 ರಸ್ತೆ ಅಪಘಾತಗಳು ಸಂಭವಿಸಿದ್ದವು, 2017ರಲ್ಲಿ 5,064 ಅಪಘಾತಗಳಾಗಿದ್ದವು, 2018ರಲ್ಲಿ ಕೇವಲ 4,172 ರಸ್ತೆ ಅಪಘಾತಗಳಾಗಿವೆ. ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯೂ ಕೂಡ ಕಡಿಮೆಯಾಗಿದೆ. 2009ರಲ್ಲಿ 761 ಮಂದಿ ಮೃತಪಟ್ಟಿದ್ದರೆ, 2017ರಲ್ಲಿ 642, 2018ರ ನವೆಂಬರ್ ವರೆಗೆ 611 ಮಂದಿ ಮೃತಪಟ್ಟಿದ್ದಾರೆ.

You are safe because Bengaluru traffic crawls

ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ

2009ರಲ್ಲಿ ಬೆಂಗಳೂರಲ್ಲಿ 34 ಲಕ್ಷ ವಾಹನಗಳಿದ್ದವು.2018ರಲ್ಲಿ 78 ಲಕ್ಷ ವಾಹನಗಳಾಗಿವೆ, ವಾಹನಗಳ ವೇಗವು ಕೂಡ ಕಡಿಮೆಯಾಗಿದೆ. ಅತಿ ವೇಗವೇ ಅಪಾಯಕ್ಕೆ ಕಾರಣವಾಗುತ್ತಿತ್ತು, ಆದರೆ ಸಂಚಾರ ದಟ್ಟಣೆ ಹೆಚ್ಚಳದಿಂದ ಅಪಘಾತ ಕಡಿಮೆಯಾಗಿದೆ ಎಂದು ಸಾರಿಗೆ ತಜ್ಞ ಎಂಎನ್ ಶ್ರೀಹರಿ ತಿಳಿಸಿದ್ದಾರೆ.

English summary
You may be moving slowly on Bengaluru’s notorious roads, but you’re at least safe. City traffic police say roads are safe because of their efficient traffic management, but none can discount another equally key factor , slow movement of vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X