ಗಿನ್ನಿಸ್ ದಾಖಲೆಗಾಗಿ ವಿಧಾನಸೌಧದ ಮುಂದೆ ಶೀರ್ಷಾಸನ!

Posted By:
Subscribe to Oneindia Kannada

ಬೆಂಗಳೂರು, ಜೂನ್ 16 : ವಿಶ್ವ ಯೋಗ ದಿನಾಚರಣೆ(ಜೂನ್ 21) ಗೂ ಮುನ್ನ ಕರ್ನಾಟಕದ ಯೋಗಿಗಳು ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಲು ಸಜ್ಜಾಗುತ್ತಿದ್ದಾರೆ.

ವಿಶ್ವ ಯೋಗ ದಿನ: ರಾಜಪಥ್ ಹಿಂದಿಕ್ಕಿ ಗಿನ್ನೆಸ್ ದಾಖಲೆಗೆ ಮೈಸೂರು ಸಜ್ಜು

ಜೂನ್ 18ರಂದು 3000 ಯೋಗಿಗಳು 30 ಸೆಕೆಂಡುಗಳ ಕಾಲ ಶೀರ್ಷಾಸನ ಮಾಡಲು ವಿಧಾನಸೌಧ ವೇದಿಕೆಯಾಗಲಿದೆ. ಈ ವಿಶೇಷ ಸಂದರ್ಭದದ ಬಗ್ಗೆ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

Yoga Day : 3000 yogis doing Sheershasna for 30 seconds Guinness book of world records attempt

ಯೋಗ ದಿನದ ಅಂಗವಾಗಿ ಸಕಲ ಸಿದ್ಧತೆ ನಡೆದಿದ್ದು, ಆಯುಷ್ ಇಲಾಖೆ, ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯ, ಆರ್ಟ್ ಆಫ್ ಲಿವಿಂಗ್, ಪತಂಜಲಿ ಮುಂತಾದ ಸಂಸ್ಥೆಗಳನ್ನು ಒಂದೆಡೆ ಸೇರಿಸಲಾಗಿದೆ ಎಂದು ಕಾರ್ಯಕ್ರಮ ಪೂರ್ವ ಸಭೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಜೂನ್ 18 ರಂದು 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ 3000 ಯೋಗಪಟುಗಳಿಂದ 30 ಸೆಕೆಂಡುಗಳ ಶೀರ್ಷಾಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಿಧಾನಸೌಧದ ಮುಂಭಾಗ ಬೆಳಗ್ಗೆ 6.30 ರಿಂದ 8.30ರ ಅವಧಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ವಿವರಗಳಿಗೆ, ನೋಂದಣಿಗಾಗಿ ಸಂಪರ್ಕಿಸಿ 88846 46108
ಸೂಚನೆ: ಯೋಗ ಮ್ಯಾಟ್ ನೀವೇ ತರತಕ್ಕದ್ದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : www.yogagangotri.org (ಯೋಗ ಗಂಗ್ರೋತಿ.ಕಾಂ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka is ready to make Guinness book of world records with 3000 yogis doing Sheershasna for 30 seconds in Vidhan Souda on 18th morning -tweets Shalini Rajneesh,Principal Secretary ,Backward Classes and welfare Department at GoK
Please Wait while comments are loading...