ಚುಂಬಿಸಿ, ನಾಲಿಗೆ ಕಚ್ಚಿ ಪರಾರಿಯಾದ ವಿಕೃತಕಾಮಿ

Posted By:
Subscribe to Oneindia Kannada

ಬೆಂಗಳೂರು.ಜನವರಿ 6: ಕಮ್ಮನಹಳ್ಳಿ ಪ್ರಕರಣ ನಡೆದು ಕೆಲವು ದಿನ ಕಳೆದಿಲ್ಲ ಆಗಲೇ ಶುಕ್ರವಾರ ಬೆಳ್ಳಂಬೆಳಗ್ಗೆ ಮತ್ತೊಬ್ಬ ಕಾಮುಕನ ಅಟ್ಟಹಾಸ ಕೆ.ಜಿ.ಹಳ್ಳಿ ವ್ಯಾಪ್ತಿಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೆ.ಜಿ.ಹಳ್ಳಿ ವ್ಯಾಪ್ತಿ ಬೆಳ್ಳಂಬೆಳಗ್ಗೆ 6.30ರ ವೇಳೆಯಲ್ಲಿ ಮನೆಯೊಂದರ ಮುಂದೆ ಯುವತಿ ಹಾದು ಹೋಗುವಾಗ ಹಿಂದಿನಿಂದ ಓಡಿ ಬಂದ ಯುವಕ ಆಕೆಯನ್ನು ಚುಂಬಿಸಿ, ನಾಲಿಗೆಯನ್ನು ಕಚ್ಚಿದ್ದಾನೆ. ಮನೆಯ ಬಳಿ ನಾಯಿ ಬೊಗಳಿದ್ದರಿಂದ, ಜನ ಸೇರುವರೆಂಬ ಭಯದಿಂದ ಪರಾರಿಯಾಗಿದ್ದಾನೆ. ಆದರೆ ಇದು ಆ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಯುವತಿಗೆ ಕೈ ಹೆಬ್ಬೆರಳು ಮತ್ತು ಕಾಲಿಗೂ ಗಾಯವಾಗಿದೆ ಎಂದು ಹೇಳಲಾಗಿದೆ.[ಕಮ್ಮನಹಳ್ಳಿ ಕಾಮುಕರ ವಿರುದ್ಧ ಸಂತ್ರಸ್ತೆ ನುಡಿದಿದ್ದೇನು?]

Yet another case of molestation in Bengaluru

ಹೊಸ ವರ್ಷದ ಮಧ್ಯರಾತ್ರಿಯಲ್ಲಿ ಕಮ್ಮನಹಳ್ಳಿಯಲ್ಲಿ ಇಬ್ಬರು ಕಾಮುಕತನದಿಂದ ವಿಕೃತವಾಗಿ ವರ್ತಿಸಿ ಮಹಿಳೆಯನ್ನು ಚುಂಬಿಸಿ, ದಾರಿಯಲ್ಲಿ ಎಳೆದಾಡಿ ನಾಲ್ವರು ಪೊಲೀಸರ ಸೆರೆಯಾಗಿರುವ ಹೊತ್ತಿನಲ್ಲಿಯೇ ಮತ್ತೊಂದು ಪ್ರಕರಣ ಬಯಲಾಗಿರುವುದು ನಗರದ ಕುಟುಂಬಗಳಲ್ಲಿ ಭೀತಿ ಮೂಡಿಸಿದೆ.[ಒಂದು ಹಗ್, ಕಿಸ್ ಗಾಗಿ ನಡೆದಿತ್ತಾ ಕಮ್ಮನಹಳ್ಳಿ ಕಿರುಕುಳ?]

ಇನ್ನು ಗೃಹ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರನ್ನು ಅಪಪ್ರಚಾರ ಆಗುವಂತೆ ಬಿಂಬಿಸಬಾರದು ಎನ್ನುತ್ತಾರೆ. ಆದರೆ ಇರುವ ಹುಣ್ಣನ್ನು ಯಾವ ಕನ್ನಡಿಯಲ್ಲಿ ನೋಡಬೇಕು ಎನ್ನುವುದೇ ತಿಳಿಯದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Even before Bengaluru recovers from new year's eve molestation shame yet another incident of molestation has been reported from K G Halli locality of the city. The incident of molestation is said to have taken place on Friday morning at around 6.30. The victim had filed a complaint with the local police.
Please Wait while comments are loading...