ಯುವತಿ ಅಪಹರಣ, ಅರ್ಧಗಂಟೆಯಲ್ಲೇ ರಕ್ಷಿಸಿದ ಯಶವಂತಪುರ ಪೊಲೀಸ್

Posted By: Gururaj
Subscribe to Oneindia Kannada

ಬೆಂಗಳೂರು, ಅ.11 : ಯುವತಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಅರ್ಧಗಂಟೆಯಲ್ಲಿಯೇ ಬಂಧಿಸಿದ್ದಾರೆ. ಯಶವಂತಪುರ ಪೊಲೀಸರ ಈ ಕಾರ್ಯಾಚರಣೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಟಿ. ಸುನೀಲ್ ಕುಮಾರ್ ನೇಮಕ

ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಅಣ್ಣಮ ಜೊತೆ ತೆರಳಿತ್ತಿದ್ದ ಯುವತಿಯನ್ನು ಅಪಹರಿಸಿದ್ದ ಮೂವರ ಗುಂಪು. ಗೋಡಾನ್ ವೊಂದಕ್ಕೆ ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಲು ಪ್ರಯತ್ನ ನಡೆಸಿದ್ದರು. ಆಟೋ ಡ್ರೈವರ್ ಸೂಕ್ತ ಸಮಯದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ, ಆರೋಪಿಗಳನ್ನು ಬಂಧಿಸಲಾಗಿದೆ.

Yeshwanthpur police rescued women in half an hour kidnapper held

ಚಿತ್ರದುರ್ಗ ಮೂಲದ ಯುವತಿ ದೊಡ್ಡಪ್ಪನ ಮಗನ ಜೊತೆ ಹೊಸೂರು ರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಆದರೆ, ಅವರು ಸಿಗದ ಕಾರಣ ಊರಿಗೆ ವಾಪಸ್ ಹೊರಟಿದ್ದರು. ರಾತ್ರಿ 1.30ರ ಸುಮಾರಿಗೆ ಇಬ್ಬರು ಯಶವಂತಪುರ ರೈಲು ನಿಲ್ದಾಣಕ್ಕೆ ಹೊರಟಿದ್ದರು.

ಬೆಂಗಳೂರು ಪೊಲೀಸರ ಮಾನ 'ಪರಪ್ಪನ ಅಗ್ರಹಾರ'ದಲ್ಲಿ ಹರಾಜು!

ಈ ಸಂದರ್ಭದಲ್ಲಿ ಅಂಡರ್ ಪಾಸ್ ಬಳಿ ಮೂವರು ಯುವಕರು ಯುವತಿ ಅಣ್ಣನ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ಅಪಹರಣ ಮಾಡಿದರು. ಇದನ್ನು ನೋಡಿದ ಆಟೋ ಚಾಲಕ ತಕ್ಷಣ ಯಶವಂತಪುರ ಪೊಲೀಸರಿಗೆ ಮಾಹಿತಿ ನೀಡಿದರು.

ಮೂವರು ಯುವತಿಯನ್ನು ಸಮೀಪದ ಗೋಡಾನ್ ಒಂದಕ್ಕೆ ಎಳೆದುಕೊಂಡು ಹೋಗಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಅರ್ಧಗಂಟೆಯಲ್ಲಿಯೇ ಯುವತಿಯನ್ನು ರಕ್ಷಿಸಿ, ಒಬ್ಬ ಆರೋಪಿ ಫಯಾಜ್ ನನ್ನು ಬಂಧಿಸಿದ್ದಾರೆ. ಝುಬೇರ್, ಬಾಬು ಎಂಬುವವರಿಗಾಗಿ ಹುಡುಕಾಟ ನಡೆಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Yeshwanthpur police rescued Chitradurga based women in half an hour who was kidnapped by three people gang on August 10, 2017 late night.
Please Wait while comments are loading...