ಹೆಸರು 'ಕಾವೇರಿ ಇನ್ಸ್ಟಿಟ್ಯೂಟ್' ಆದರೆ ನಡೀತಿದ್ದಿದ್ದು ಅಂದರ್ ಬಾಹರ್

Posted By:
Subscribe to Oneindia Kannada

ಯಲಹಂಕ, ನವೆಂಬರ್ 24 : ಇಟ್ಟುಕೊಂಡಿರುವ ಹೆಸರಿಗೂ ಮಾಡುವ ದಂಧೆಗೂ ತಾಳೆಯೇ ಇಲ್ಲ. ಯಲಹಂಕದ 5ನೇ ಹಂತದ 'ಕಾವೇರಿ ರಿಕ್ರಿಯೇಷನ್ ಕ್ಲಬ್' ಹೆಸರಿಗೆ ಮಾತ್ರ ರಿಕ್ರಿಯೇಷನ್ ಕ್ಲಬ್ ಆದರೆ ಒಳಗೆ ನಡೆಯುತ್ತಿದ್ದುದು ಅಂದರ್ ಬಾಹರ್ ಆಟ.

ಕಾವೇರಿ ರಿಕ್ರಿಯೇಷನ್ ಕ್ಲಬ್ ನಲ್ಲಿ ಇಸ್ಪೀಟು ಆಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಯಲಹಂಕ ಪೊಲೀಸರು ಗುರುವಾರ ರಾತ್ರಿ ದಾಳಿ ನಡೆಸಿ ಜೂಜಿನಲ್ಲಿ ತೊಡಗಿದ್ದ 18 ಜನರನ್ನು ವಶಕ್ಕೆ ಪಡೆದಿದ್ದಾರೆ.

Yelahanka police raids Kaveri club and arrests 17 gamblers

ಜೂಜು ಅಡ್ಡೆಯಲ್ಲಿ 48,645 ರೂಪಾಯಿ ನಗದು ಹಾಗೂ 5 ರಿಂದ 2000 ಮೌಲ್ಯದ ಟೋಕನ್ ಗಳು, ಇವುಗಳ ಒಟ್ಟು ಮೌಲ್ಯ 9,19,095 ಇದರೊಟ್ಟಿಗೆ 2 ಕಾರು ಹಾಗೂ 19 ಬೈಕ್ ಗಳು ಹಾಗೂ ಒಂದು ಹಣ ಎಣಿಸುವ ಮಷಿನ್ ಅನ್ನು ವಶಪಡಿಸಿಕೊಂಡಿದ್ದಾರೆ.

ರಾಮಕೃಷ್ಣ ರೆಡ್ಡಿ, ಮುನೇಗೌಡ, ನಾರಾಯಣಪ್ಪ, ಗಂಗಲಿಂಗಯ್ಯ, ಕೃಷ್ಣಪ್ಪ, ಸಹದೇವರಾಜು, ಮಹಮದ್ ಜಾವೀದ್, ಕೆ.ಆರ್.ಗೋಪಾಲ್, ಎನ್.ಸುರೇಶ್, ವೆಂಕಟೇಗೌಡ, ವೆಂಕಟೇಶ್, ಈಶ್ವರಪ್ಪ, ಭೈರಾರೆಡ್ಡಿ, ಗೋಪಾಲಕೃಷ್ಣ, ಎಂ.ರಮೇಶ್, ರಂಗಸ್ವಾಮಿ, ರವೀಂದ್ರ ಕುಮಾರ ಎಂಬುವವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Yelahanka police raids on Kaveri recreation club and arrests 17 gamblers who were engage in money gambling.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ