ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.ಕೆ.ಶಿವಕುಮಾರ್‌ಗೆ ಯಡಿಯೂರಪ್ಪ ನೀಡಿದ ಎಚ್ಚರಿಕೆ ಏನು?

By Manjunatha
|
Google Oneindia Kannada News

Recommended Video

ಡಿ ಕೆ ಶಿವಕುಮಾರ್ ಗೆ ಎಚ್ಚರಿಕೆ ಕೊಟ್ಟ ಬಿ ಎಸ್ ಯಡಿಯೂರಪ್ಪ | Oneindia Kannada

ಬೆಂಗಳೂರು, ಮೇ 25: ಇಂದಿನ ವಿಶೇಷ ಅಧಿವೇಶನದಲ್ಲಿ ಗಮನ ಸೆಳೆದಿದ್ದು ಯಡಿಯೂರಪ್ಪ ಅವರ ಭಾಷಣ. ನೇರ ವಾಗ್ದಾಳಿ, ಕಾಲೆಳೆತ, ಪ್ರೀತಿ, ರಾಜ್ಯದ ಅಭಿವೃದ್ಧಿ ಚಿಂತನೆ ಎಲ್ಲವೂ ಭಾಷಣದಲ್ಲಿ ಅಡಕವಾಗಿತ್ತು.

ಯಡಿಯೂರಪ್ಪ ಅವರ ಭಾಷಣದಲ್ಲಿ ಹೆಚ್ಚು ವಿಶೇಷವಾಗಿದ್ದುದೆಂದರೆ ಡಿ.ಕೆ.ಶಿವಕುಮಾರ್‌ಗೆ ಅವರು ನೀಡಿದ ಎಚ್ಚರಿಕೆ. ಹೌದು, ಯಡಿಯೂರಪ್ಪ ಅವರು ಡಿ.ಕೆ.ಶಿವಕುಮಾರ್‌ಗೆ ಸದನದಲ್ಲಿ ಎಚ್ಚರಿಕೆ ನೀಡಿದರು ಆದರೆ ವ್ಯಂಗ್ಯವಾಗಿ.

ಕುಮಾರಸ್ವಾಮಿ ಊಸರವಳ್ಳಿ, ಇದು ದಿನಗೂಲಿ ಸರಕಾರ : ಬಿಎಸ್ವೈ ವಾಗ್ದಾಳಿಕುಮಾರಸ್ವಾಮಿ ಊಸರವಳ್ಳಿ, ಇದು ದಿನಗೂಲಿ ಸರಕಾರ : ಬಿಎಸ್ವೈ ವಾಗ್ದಾಳಿ

ಯಡಿಯೂರಪ್ಪ ಅವರು ಮಾತನಾಡುತ್ತಾ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ಖಳನಾಯಕ ಪ್ರವೃತ್ತಿ ಪ್ರದರ್ಶಿಸಿದ್ದಾರೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್ ಅವರು 'ನನ್ನ ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ, ಖಳನಾಯಕ ಪಟ್ಟ ಹೊರಲು ತಯಾರಿಲ್ಲ' ಎಂದರು.

ಇದಕ್ಕೆ ಯಡಿಯೂರಪ್ಪ ಅವರು, 'ಶಿವಕುಮಾರ್ ನೀವು ಕುತ್ಕೊಳ್ಳಿ, ಆ ಮಾತನ್ನು ನಾವು ವಾಪಸ್ ಬೇಕಾದರೆ ಪಡೆಯುತ್ತೇವೆ, ನೀನು ಮುಖ್ಯಮಂತ್ರಿ ಆಗಬೇಕು ಅನ್ನೋ ಕನಸು ಇಟ್ಕೊಂಡಿರೋನು, ನಾನು ಯಾಕೆ ನಿನ್ನನ್ನ ವಿಲನ್ ಅನ್ಲಿ' ಎಂದರು.

ಯಡಿಯೂರಪ್ಪ ಅವರ ಮಾತಿಗೆ ಸದನದಲ್ಲಿರುವುವರೆಲ್ಲಾ ಜೋರಾಗಿ ನಕ್ಕರು. ಮತ್ತೆ ಮಾತು ಮುಂದುವರೆಸಿದ ಯಡಿಯೂರಪ್ಪ, 'ಶಿಕುಮಾರ್ ಅವರೇ ನೀವು ಅಲ್ಲಿದ್ದುಕೊಂಡು ಮುಖ್ಯಮಂತ್ರಿ ಆಗುವ ಕಸನು ಕಾಣುತ್ತಿದ್ದೀರಾ, ಅದು ಕಷ್ಟ ಬಿಡಿ' ಎಂದರು.

ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್: ಯಡಿಯೂರಪ್ಪಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್: ಯಡಿಯೂರಪ್ಪ

ಮತ್ತೂ ಮುಂದುವರೆದು 'ಅಲ್ಲಿದ್ದರೆ ಅಪ್ಪ ಮಕ್ಕಳು ಸೇರಿ ಇನ್ನು ಎರಡೇ ವರ್ಷದಲ್ಲಿ ಕಾಂಗ್ರೆಸ್‌ ಸೇರಿದಂತೆ ನಿಮ್ಮನ್ನು ಮುಳುಗಿಸಿಬಿಡುತ್ತಾರೆ ಎಚ್ಚರಿಕೆ, ಹಾಗಾಗಲಿಲ್ಲ ಎಂದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ' ಎಂದು ಸವಾಲು ಹಾಕಿದರು.

ಯಡಿಯೂರಪ್ಪ ಅವರ ಮಾತಿಗೆ ಸುಮ್ಮನೆ ನಗುತ್ತಿದ್ದ ಡಿ.ಕೆ.ಶಿವಕುಮಾರ್ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ.

English summary
BS Yeddyurappa today warns congress leader DK Shivakumar to be aware of Deve Gowda family. He said 'They will ruin DK Shivakumar and Congress in less than two years'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X