ಬಿಜೆಪಿಯ ಬೆನ್ನು ಬಿಡದೆ ಕಾಡುತ್ತಿದೆ ಅನಂತ್‌ಕುಮಾರ್ ಹೆಗ್ಡೆಯ ಆ ಹೇಳಿಕೆ

Posted By:
Subscribe to Oneindia Kannada

ಬಿಜೆಪಿಯ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗ್ಡೆ ಅವರ 'ಸಂವೀಧಾನ ಬದಲಿಕೆ' ಹೇಳಿಕೆಯು ಬಿಜೆಪಿಯ ಬೆನ್ನು ಬಿಡದಂತೆ ಕಾಡುತ್ತಿರುವಂತಿದೆ.

ಬಿಜೆಪಿ ದಲಿತ ಸಂವಾದದಲ್ಲಿ ಪ್ರತಿಭಟನೆ, ಅಮಿತ್ ಶಾಗೆ ಧಿಕ್ಕಾರ

ಬಿಜೆಪಿಗರು ದಲಿತ ಸಮಾವೇಶ ಮಾಡಲಿ, ದಲಿತ ಸಂವಾದ ಮಾಡಲಿ, ಅಂಬೇಡ್ಕರ್ ಜಯಂತಿ ಮಾಡಲಿ ಅನಂತ್‌ಕುಮಾರ್ ಹೆಗ್ಡೆ ಹೇಳಿಕೆ ಬಗ್ಗೆ ಮತ್ತೆ ಮತ್ತೆ ಪ್ರಶ್ನೆಗಳು ಏಳುತ್ತಲೇ ಇವೆ. ಬಿಜೆಪಿ ನಾಯಕರು ಮುಜುಗರಕ್ಕೆ ಒಳಗಾಗುತ್ತಲೇ ಇದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಕೆಲ ತಿಂಗಳುಗಳ ಹಿಂದೆ 'ಸಂವಿಧಾನ ಬದಲಿಸಲೆಂದೇ ನಾವು (ಬಿಜೆಪಿ) ಅಧಿಕಾರಕ್ಕೆ ಬಂದಿರುವುದು' ಎಂದು ಸಚಿವ ಅನಂತಕುಮಾರ್‌ ಹೆಗ್ಡೆ ಅವರು ಹೇಳಿದ್ದರು. ಇದಕ್ಕೆ ದಲಿತ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು, ಹಲವು ಪ್ರತಿಭಟನೆಗಳು ಆಗಿತ್ತು, ಬಿಜೆಪಿಯು ದಲಿತ ವಿರೋಧಿ ಎಂಬ ಚರ್ಚೆ ರಾಜ್ಯಾದ್ಯಂತ ಹರಡಿತ್ತು. ಅದು ಹಾಗೇ ಮುಂದುವರೆದಂತೆ ಕಾಣುತ್ತಿದೆ.

Yeddyurappa questions by dalits about Ananthkumar Hegdes statement

ಇಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಮತ್ತೆ ಅನಂತ್‌ಕುಮಾರ್ ಹೆಗ್ಡೆ ಅವರ 'ಸಂವಿಧಾನ ಬದಲಾವಣೆ' ಹೇಳಿಕೆ ಎದುರಾಯಿತು.

ಅಂಬೇಡ್ಕರ್ ಜಯಂತಿ ಅಂಗವಾಗಿ ದಲಿತರ ಮನೆಯಲ್ಲಿ ಬಿಎಸ್ ವೈ ಉಪಹಾರ

ದಲಿತ ಮುಖಂಡರು ಕೆಲವರು 'ಅನಂತ್‌ಕುಮಾರ್ ಹೆಗ್ಡೆ ಅವರು ಸಂವಿಧಾನ ಬದಲಿಸಲೆಂದೇ ನಾವು ಅಧಿಕಾರಕ್ಕೆ ಬಂದಿರುವುದು ಎಂದಿದ್ದಾರೆ ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ' ಎಂದು ನೇರವಾಗಿ ಪ್ರಶ್ನೆ ಮಾಡಿದರು.

ಅಮಿತ್ ಶಾ ಗೆ ಪ್ರಶ್ನೆ ಕೇಳಿದ್ದಕ್ಕೆ ಮೈಕ್ ಕಸಿದುಕೊಂಡರು

ದಲಿತ ಮುಖಂಡರ ಪ್ರಶ್ನೆಯಿಂದ ಮುಜುಗರಕ್ಕೆ ಒಳಗಾದ ಯಡಿಯೂರಪ್ಪ ಅವರು 'ಮೋದಿ ಅವರು ಅನಂತ್‌ಕುಮಾರ್ ಹೆಗ್ಡೆಗೆ ಕ್ಷಮೆ ಕೇಳಲು ಸೂಚಿಸಿದ್ದಾರೆ' ಎಂದು ಸಂದರ್ಭಕ್ಕೆ ತಕ್ಕ ಉತ್ತರ ನೀಡಿ ಜಾಗ ಖಾಲಿ ಮಾಡಿದರು.

ಕೆಲವು ದಿನಗಳ ಮುಂಚೆ ಮೈಸೂರಿನಲ್ಲಿ ಸಹ ಇದೇ ರೀತಿ ಆಗಿತ್ತು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮುಂದೆಯೇ ದಲಿತ ಮುಖಂಡರು ಅನಂತ್‌ಕುಮಾರ್ ಹೆಗ್ಡೆ ಅವರ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಮತ್ತು ಅಮಿತ್ ಶಾಗೆ ಧಿಕ್ಕಾರ ಕೂಗಿದ್ದರು.

'ಅನಂತ್‌ಕುಮಾರ್ ಹೆಗ್ಡೆ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ' ಎಂದು ಹೇಳಿದ್ದ ಅಮಿತ್ ಶಾ ಡ್ಯಾಮೆಜ್ ರಿಕವರಿ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP president BS Yeddyurappa questioned by dalit leaders in Ambedkar Jayanthi function about BJP minister Ananthkumar Hegde's controversial statement about 'changing constitution'.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ