ಫೈಸಲ್ ಆದ ಕೇಸುಗಳ ಬಗ್ಗೆ ಯಡಿಯೂರಪ್ಪ ವಿರುದ್ಧ ಮತ್ತೆ ಆರೋಪ: ಬಿಜೆಪಿ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 6 : ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಹಾಗೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಲಂಚ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರು ಶುಕ್ರವಾರ ಮಾಡಿದ್ದ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ.

"ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಉಗ್ರಪ್ಪನವರು ಆರೋಪ ಮಾಡಿದ್ದಾರೆ. ಇದೇ ರೀತಿಯ ಆರೋಪಗಳನ್ನು ಹಿಂದೆ ಕೂಡ ಮಾಡಲಾಗಿತ್ತು. ಈ ಕುರಿತು ಖಾಸಗಿ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ 'ಬಿ' ರಿಪೋರ್ಟ್ ಅನ್ನು ಸಲ್ಲಿಸಿದ್ದಾರೆ".

ಬಿಎಸ್ ವೈ ಮೇಲೆ 4 ಕೋಟಿ ಲಂಚ ಆರೋಪ: ಕಾಂಗ್ರೆಸ್ ನಿಂದ ದಾಖಲೆ ಬಿಡುಗಡೆ

"ಲೋಕಾಯುಕ್ತ ಪೊಲೀಸರು ದಾಖಲು ಮಾಡಿದ ಎಫ್ ಐಆರ್ ಅನ್ನು ಬಿ.ಎಸ್. ಯಡಿಯೂರಪ್ಪನವರು ಕರ್ನಾಟಕ ಹೈ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಉಚ್ಚ ನ್ಯಾಯಾಲಯವು ವಿಚಾರಣೆ ನಡೆಸಿ ಎಫ್.ಐ.ಆರ್. ಅನ್ನು ವಜಾ ಮಾಡಿದೆ" ಎಂದು ತಿಳಿಸಲಾಗಿದೆ.

Yeddyurappa already got clean chit for allegations of Congress

ಇನ್ನು ಆದಾಯ ತೆರಿಗೆ ಇಲಾಖೆ ನೀಡಿದ ನೋಟಿಸ್ ಗೆ ಸಂಬಂಧಿಸಿದಂತೆ, ಈ ವ್ಯವಹಾರಕ್ಕೂ ಬಿ.ಎಸ್. ಯಡಿಯೂರಪ್ಪನವರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಈಗಾಗಲೇ ಇದರ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಸ್ಪಷ್ಟೀಕರಣ ನೀಡಲಾಗಿದೆ ಎಂದು ಕೂಡ ತಿಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP state president BS Yeddyurappa already got clean chit for corruption allegations of Congress leaders VS Ugrappa and others made on Friday in KPCC office Bengaluru, clarification by BJP.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ