2016: ಒನ್ಇಂಡಿಯಾ ಯೂಟ್ಯೂಬ್ ವಿಡಿಯೋ ಟಾಪ್ 10

Posted By:
Subscribe to Oneindia Kannada

ಸುದ್ದಿ ಸ್ವಾರಸ್ಯಗಳ ಜತೆಗೆ ವೈವಿಧ್ಯಮಯ ವಿಡಿಯೋಗಳ ಮೂಲಕ ಓದುಗರನ್ನು ತಲುಪುವ ಸಾಧ್ಯತೆಯನ್ನು ಒನ್ ಇಂಡಿಯಾ ಕನ್ನಡ ಮೈಗೂಡಿಸಿಕೊಂಡಿದೆ. ದೃಶ್ಯ-ಶ್ರವ್ಯ ಪ್ರಪಂಚದಲ್ಲಿ ಇನ್ನೂ ಪುಟ್ಟ ಹೆಜ್ಜೆ ಇಡುತ್ತಿರುವ ಒನ್ಇಂಡಿಯಾ ಕನ್ನಡದ ಯೂಟ್ಯೂಬ್ ಚಾನೆಲ್ ನಲ್ಲಿ 2016ರಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳ ಮೆಲುಕು ಇಲ್ಲಿದೆ.

2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡು ಸುದ್ದಿ ಹಾಗೂ ಸಿನಿಮಾ ಜಗತ್ತಿನ ಆಗು ಹೋಗುಗಳನ್ನು ನಿಮ್ಮ ಮುಂದಿಡುತ್ತಾ ಸಾಮಾಜಿಕ ಜಾಲ ತಾಣಗಳಲ್ಲಿ ಒನ್ಇಂಡಿಯಾ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಾ ಬಂದಿದೆ.

ಒನ್ಇಂಡಿಯಾ ಯೂಟ್ಯೂಬ್ ಚಾನೆಲ್ ಗೆ ಚಂದಾದಾರರಾಗುವುದು ಹೇಗೆ
* ನಿಮ್ಮ ಬ್ರೌಸರ್ ನಲ್ಲಿ(ಡೆಸ್ಕ್ ಟಾಪ್ ಅಥವಾ ಮೊಬೈಲ್) ಗೂಗಲ್ ಸರ್ಚ್ ಓಪನ್ ಮಾಡಿ
* oneindia kannada youtube channel ಎಂದು ಟೈಪಿಸಿ
* ಮೊದಲಿಗೆ ಬರುವ oneindia kannada- youtube ಲಿಂಕ್ ಕ್ಲಿಕ್ ಮಾಡಿ
* ನಿಮ್ಮ ಮುಂದೆ ಕಾಣುವ ಪುಟದ ಬಲತುದಿಯಲ್ಲಿರುವ ಕೆಂಪು ಬಣ್ಣದ Subscribe ಬಟನ್ ಒತ್ತಿ.
* ಅಂದ ಹಾಗೆ, ನೀವು ಚಂದಾದಾರರಾಗಲು ಯಾವುದೇ ಒಂದು ಜೀಮೇಲ್ ಐಡಿಯಿಂದ ಲಾಗಿನ್ ಆಗಿದ್ದರೆ ಸಾಕು.
* ಒನ್ಇಂಡಿಯಾ ಕನ್ನಡ ಯೂಟ್ಯೂಬ್ ಚಾನೆಲ್ ನೇರ ಲಿಂಕ್ ಇಲ್ಲಿದೆ (ಒನ್ ಇಂಡಿಯಾ ಸುದ್ದಿ)

ಮಿಕ್ಕಿದ್ದು ಮುಂದೆ ನೋಡಿ

ಮಿಕ್ಕಿದ್ದು ಮುಂದೆ ನೋಡಿ

#1 ಭಾರತೀಯ ಸೇನೆಯ ಯೋಧನ ಮೇಲೆ ಹಲ್ಲೆ
#2 ಭಗ್ನ ಪ್ರೇಮಿಯೊಬ್ಬನ ಕೊನೆ ಕ್ಷಣದ ವಿಡಿಯೋ
#3 ಮೃಗಾಲಯದಿಂದ ಪರಾರಿಯಾದ ಚಿಂಪಾಂಜಿ ಮಾಡಿದ ಕಿತಾಪತಿ
#4 ಡಿವೈಎಸ್ಪಿ ಎಂಕೆ ಗಣಪತಿ ಅವರ ಕೊನೆ ಸಂದರ್ಶನ
#5 ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ದುರಂತದ ವಿಡಿಯೋ.. ಮಿಕ್ಕಿದ್ದು ಮುಂದೆ ನೋಡಿ

ಭಾರತೀಯ ಸೇನೆಯ ಯೋಧನ ಮೇಲೆ ಹಲ್ಲೆ

ಕಾಶ್ಮೀರದಲ್ಲಿ ದೊಂಬಿ ಜಗಳದ ನಡುವೆ ಸಿಲುಕಿಕೊಂಡ ಸಿಆರ್ ಪಿಎಫ್ ಯೋಧನ ಮೇಲೆ ಸಾರ್ವಜನಿಕರು ಹಲ್ಲೆ ಮಾಡಿದ ವಿಡಿಯೋ ಸಾಕಷ್ಟು ಚರ್ಚೆಗೊಳಲ್ಪಟ್ಟಿತು. ಇಲ್ಲಿ ತನಕ 1,98,940 ಬಾರಿ ವೀಕ್ಷಣೆ ಪಡೆದುಕೊಂಡಿದೆ. Video Link

ಭಗ್ನ ಪ್ರೇಮಿಯೊಬ್ಬನ ಕೊನೆ ಕ್ಷಣದ ವಿಡಿಯೋ

ಬೆಂಗಳೂರಿನ ಹುಳಿಮಾವಿನ ಭಗ್ನ ಪ್ರೇಮಿ ಅರುಣ್ ಕುಮಾರ್ ಎಂಬಾತ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ತನ್ನ ಪ್ರೇಮಿಯನ್ನು ಕುರಿತು ಎರಡು ವಿಡಿಯೋಗಳನ್ನು ಫೇಸ್ ಬುಕ್ ನಲ್ಲಿ ಹಾಕಿದ್ದು ಭಾರಿ ಸುದ್ದಿಯಾಯಿತು. ಅರುಣ್ ಕಣ್ಣೀರಿಡುತ್ತಾ ತನ್ನ ಪ್ರೀತಿಯ ಕಥೆಯನ್ನು ಜನರ ಮುಂದಿಡುತ್ತಾ, ಪ್ರೀತಿ ಪ್ರೇಮದ ಬಗ್ಗೆ ನೀಡಿದ ಸುದೀರ್ಘ ಮಾತುಗಳು ಜನರನ್ನು ತುಂಬಾ ಕಾಡಿತ್ತು. 21,085 ಬಾರಿ ವೀಕ್ಷಣೆ. Video Link

ಮೃಗಾಲಯದಿಂದ ಪರಾರಿಯಾದ ಚಿಂಪಾಂಜಿ

ಜಪಾನಿನ ಸೆಂಡೈನ ಪ್ರಾಣಿಸಂಗ್ರಹಾಲಯದಿಂದ ತಪ್ಪಿಸಿಕೊಂಡ ಚಿಂಪಾಂಜಿಯೊಂದು ಎಲೆಕ್ಟ್ರಿಸಿಟಿ ಕಂಬ ಹತ್ತಿ ಮಾಡಿದ ಕಿತಾಪತಿ ವಿಡಿಯೋ ಇಲ್ಲಿದೆ. 28,258 ವೀಕ್ಷಣೆ. Video Link

ಡಿವೈಎಸ್ಪಿ ಎಂಕೆ ಗಣಪತಿ ಅವರ ಕೊನೆ ಸಂದರ್ಶನ

ಮಂಗಳೂರಿನ ಡಿವೈಎಸ್ಪಿಯಾಗಿದ್ದ ಎಂಕೆ ಗಣಪತಿ(51) ಅವರು ಜುಲೈ 7, 2016ರಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮಡಿಕೇರಿಯ ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದ ವಿಡಿಯೋ ಇಲ್ಲಿದೆ 14,675 ವೀಕ್ಷಣೆ Video Link :

ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ದುರಂತದ ವಿಡಿಯೋ

ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣ ಸಂದರ್ಭದಲ್ಲಿ ನಟ ಉದಯ್ ಹಾಗೂ ಅನಿಲ್ ಅವರು ಹೆಲಿಕಾಪ್ಟರ್ ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರುವ ದೃಶ್ಯದ ವಿಡಿಯೋ ನೋಡಿದ ಸಿನಿಪ್ರೇಮಿಗಳ ಮನಕಲುಕುತ್ತದೆ. 29,996 ವೀಕ್ಷಣೆ, Video Link

ಪಿವಿ ಸಿಂಧು ಮನೆಯಂಗಳದಲ್ಲಿ ಬಾಡ್ಮಿಂಟನ್ ಆಟ

ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಅವರು ಹೈದರಾಬಾದಿನ ತಮ್ಮ ಮನೆಯಂಗಳದಲ್ಲಿ ಮಕ್ಕಳ ಜತೆ ಬಾಡ್ಮಿಂಟನ್ ಅಡುವ ವಿಡಿಯೋ ಎಲ್ಲರ ಗಮನ ಸೆಳೆದಿತ್ತು.

ಮಾಸ್ತಿಗುಡಿ ಚಿತ್ರದ ದುರಂತ

ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣ ಸಂದರ್ಭದಲ್ಲಿ ದುರಂತ ಸಾವಿಗೀಡಾದ ನಟ ಉದಯ್ ಹಾಗೂ ಅನಿಲ್ ಅವರ ಅಂತಿಮ ಸಂಸ್ಕಾರಕ್ಕೆ ಅಪಾರ ಪ್ರಮಾಣದಲ್ಲಿ ಜನಸ್ತೋಮ ನೆರೆದಿತ್ತು.

ನಮ್ಮ ಮೆಟ್ರೋ ಸುರಂಗ ಮಾರ್ಗದಲ್ಲಿ ಸಂಚಾರ

ನಮ್ಮ ಮೆಟ್ರೋ ಸುರಂಗ ಮಾರ್ಗದ ಬಗ್ಗೆ ಭಾರಿ ಕುತೂಹಲ ಉಂಟಾಗಿತ್ತು. ಬೆಂಗಳೂರಿನ ಕಬ್ಬನ್ ಪಾರ್ಕ್ ಸ್ಟೇಷನ್ ನಿಂದ ಮಾಗಡಿ ರಸ್ತೆ ತನಕದ ಸುರಂಗ ಮಾರ್ಗದ ಪ್ರಾಯೋಗಿಕ ಸಂಚಾರದ ವಿಡಿಯೋ ಇಲ್ಲಿದೆ

ಖಾರಾ ಪೊಂಗಲ್ ಅಥವಾ ಹುಗ್ಗಿ ಮಾಡುವುದು ಹೇಗೆ?

ಒನ್ ಇಂಡಿಯಾ ಕನ್ನಡದ ಸಂಪಾದಕ ಎಸ್ಕೆ ಶಾಮ ಸುಂದರ ಅವರು ತಮ್ಮ ಪಾಕ ಕೈಚಳಕ ತೋರಿಸಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂಥಿಂಗ್ ವಿಥ್ ಶಾಮ್ ಎಪಿಸೋಡ್ ನಲ್ಲಿ ಖಾರಾ ಪೊಂಗಲ್ ಅಥವಾ ಹುಗ್ಗಿ ಮಾಡುವುದು ಹೇಗೆ? ಎಂಬುದನ್ನು ತೋರಿಸಿಕೊಟ್ಟರು.

ಉಕ್ಕಿನ ಸೇತುವೆ ಬಗ್ಗೆ 3ಡಿ ಅನಿಮೇಷನ್ ವಿಡಿಯೋ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 3ಡಿ ವಿಡಿಯೋ ಬಿಡುಗಡೆ ಮಾಡಿ ಉಕ್ಕಿನ ಸೇತುವೆ ಯೋಜನೆ ನಿರ್ಮಾಣವನ್ನು ಸಮರ್ಥಿಸಿಕೊಂಡಿತ್ತು. ಬಸವೇಶ್ವರ ವೃತ್ತದಿಂದ ಹೆಬ್ಬಾಳದ ತನಕದ ಈ ಪ್ರಸ್ತಾವಿತ ಯೋಜನೆ ಬಗ್ಗೆ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Year End special article: Here is a list Top viewed videos in 2016 on Oneindia Kannada Youtube channel.
Please Wait while comments are loading...