2015 ಬೆಂಗಳೂರ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾದ ವರ್ಷ

Subscribe to Oneindia Kannada

ಬೆಂಗಳೂರು, ಡಿಸೆಂಬರ್,28: ಆತ ಎಲೆಕ್ಟ್ರಾನಿಕ್ ಸಿಟಿಯಿಂದ ಹೊರಟಾಗ ಮೋದಿ ರಷ್ಯಾದಲ್ಲಿದ್ದರು, ಮೋದಿ ಕಾಬೂಲ್ ತಲುಪಿದಾಗ ಆತ ಸಿಲ್ಕ್ ಬೋರ್ಡ್ ನಲ್ಲಿದ್ದ, ಮೋದಿ ಲಾಹೋರ್ ನಲ್ಲಿ ಊಟ ಮಾಡುವಾಗ ಆತ ಬನಶಂಕರಿಯಲ್ಲಿದ್ದ. ಮೋದಿ ನವದೆಹಲಿ ತಲುಪಿದ್ದರೂ ಆತ ಇನ್ನು ಮನೆ ಸೇರಿರಲಿಲ್ಲ! ಈ ಒಂದು ಸಂದೇಶ ಇಡೀ ಬೆಂಗಳೂರಿನ ವ್ಯಥೆಯನ್ನು ಬಿಚ್ಚಿಡುತ್ತದೆ.

2015 ಬೆಂಗಳೂರ ಮಾನ-ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ ವರ್ಷ. ಬೆಳ್ಳಂದೂರು ಮತ್ತು ವರ್ತೂರು ಕೆರೆಯಲ್ಲಿ ತುಂಬಿರುವ ರಾಸಾಯನಿಕ ನೊರೆ ಬೆಂಗಳೂರಿಗೆ ಮಾಲಿನ್ಯದ ನಗರಿಗಳಲ್ಲಿ ಸ್ಥಾನ ಕಲ್ಪಿಸಿದ್ದನ್ನು ಒಪ್ಪಿಕೊಳ್ಳಬೇಕು.[2015ರಲ್ಲಿ ಕರ್ನಾಟಕ ರಾಜಕಾರಣದಲ್ಲಾದ ಬದಲಾವಣೆಗಳು]

ಐಟಿ ಸಿಟಿ, ಗಾರ್ಡನ್ ಸಿಟಿ ಗಾರ್ಬೆಜ್ ಸಿಟಿಯಾಗಿದೆ. ವರ್ಷದ ಆರಂಭದಿಂದಲೂ ಬೆಂಗಳೂರಿಗೆ ಮೆತ್ತಿದ್ದ ಕಸದ ಅಂಟು ವರ್ಷವಾದರೂ ತೊಳೆಯಲೇ ಇಲ್ಲ. ಕಸ, ಚರಂಡಿ, ರಸ್ತೆ, ಪ್ರತಿದಿನದ ಸಮಸ್ಯೆ, ಇದರೊಂದಿಗೆ ನೀರು, ವಿದ್ಯುತ್ ಸಮಸ್ಯೆಯೂ ನಾಗರಿಕರನ್ನು ಪೀಡಿಸಿತು. ಟ್ರಾಫಿಕ್ ಸಮಸ್ಯೆ ಯನ್ನು ಪ್ರತಿದಿನ ಬೈದುಕೊಳ್ಳುತ್ತಲೇ ಅನುಭವಿಸುತ್ತಿದ್ದೇವೆ.

ರಸ್ತೆ ದುರಸ್ತಿ ಮಾಡಿ ಎಂದು ನಡೆದ ಪ್ರತಿಭಟನೆಗಳಿಗೆ ಲೆಕ್ಕ ಇಲ್ಲ. ಕೊಳಚೆ ಪ್ರದೇಶದ ನಾಗರಿಕರ ಗೋಳು ಕೇಳೋರಿಲ್ಲ. ಕೊನೆಗೆ ಬೇಸತ್ತ್ ಐಟಿ ಬಿಟಿ ಜನರು ಪ್ರತಿಭಟನೆ ಹಾದಿ ಹಿಡಿದರು. ಇನ್ನು ರಸ್ತೆ ಗುಂಡಿ ಗಳ ಕತೆ ಕೇಳೋದೆ ಬೇಡ. ಅದೆಷ್ಟೋ ಜೀವಗಳು ರಸ್ತೆ ಗುಂಡಿ ಎಂಬ ಮೃತ್ಯುಕೂಪಕ್ಕೆ ಬಲಿಯಾಗಿ ಹೋದವು.[ಗೂಗಲ್ ಮ್ಯಾಪ್ ನಲ್ಲಿ ಬೆಳ್ಳಂದೂರು ಲೇಕ್ ಹುಡುಕಬೇಡಿ]

ತೆರೆದೇ ಇರುವ ಮಾಂಸದಂಗಡಿಗಳು,ಮ್ಯಾನ್ ಹೋಲ್ ಗಳು, ಕಟ್ಟಿದ ಚರಂಡಿ, ಮೆಟ್ರೋ ಕಾಮಗಾರಿ ಧೂಳು, ಅವೈಜ್ಞಾನಿಕ ಟೆಂಡರ್ ಶ್ಯೂರ್ ಕಾಮಗಾರಿ, ಇಲಾಖೆಗಳ ನಡುವಿನ ಗೊಂದಲಕ್ಕೆ ಬಲಿಯಾಗುತ್ತಿರುವ ರಸ್ತೆ.... ಹೀಗೆ ಪಟ್ಟಿಯನ್ನು ಉದ್ದಕ್ಕೆ ಬೆಳೆಸಬಹುದು. ಬೆಂಗಳೂರು ಒಂದು ವರ್ಷದ ಅವಧಿಯಲ್ಲಿ ಅನುಭವಿಸಿದ ಪ್ರಮುಖ ಸಮಸ್ಯೆಗಳ ಮೇಲೆ ಒಂದು ರೌಂಡಪ್ ಇಲ್ಲಿದೆ.

ಬಿಡದ ಟ್ರಾಫಿಕ್ ಭೂತ

ಬಿಡದ ಟ್ರಾಫಿಕ್ ಭೂತ

ದೆಹಲಿಯಲ್ಲಿ ಜಾರಿಗೆ ತರಲು ಆಲೋಚಿಸಿರುವ ಸಮ-ಬೆಸ ವಾಹನ ಸಂಚಾರ ಪದ್ಧತಿ ಜಾರಿಗೂ ರಾಜ್ಯ ಸರ್ಕಾರ ಚಿಂತನೆ ಮಾಡುತ್ತಿದ್ದೇನೆ ಎಂದು ಹೇಳಿದೆ. ಬೆಂಗಳೂರಲ್ಲಿನ 58 ಲಕ್ಷ ವಾಹನಗಳಿವೆ. ಇದರಲ್ಲಿ 34 ಲಕ್ಷ ದ್ವಿಚಕ್ರ ವಾಹನಗಳು. ಇವೆಲ್ಲಗವನ್ನು ಸರಿದೂಗಿಸಿಕೊಂಡು ಹೋಗಲು ಹೊಸ ಸೂತ್ರದಿಂದ ಸಾಧ್ಯವೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ.

ಕೆಟ್ಟು ಹೋದ ರಸ್ತೆ

ಕೆಟ್ಟು ಹೋದ ರಸ್ತೆ

ಬೆಂಗಳೂರ ರಸ್ತೆಗಳು ಬಗ್ಗೆ ಹೇಳುವುದು ಎನೂ ಉಳಿದಿಲ್ಲ. ಸ್ವತಃ ಬೆಂಗಳೂರು ಅಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ರಾತ್ರಿಯೆಲ್ಲಾ ನಗರ ಸಂಚಾರ ಮಾಡಿ ರಸ್ತೆ ಗುಂಡಿ ಮುಚ್ಚಿಸುವ ಕೆಲಸ ಮಾಡಿದ್ದಾರೆ. ವರ್ಷಾಂತ್ಯಕ್ಕೆ ಬೆಂಗಳೂರು ಅಭಿವೃದ್ಧಿ ಎಂಬುದಕ್ಕೆ ಹೊಸ ಸಚಿವ ಸ್ಥಾನವೂ ಸಿಕ್ಕಿದೆ. ಆದರೆ ವರ್ಷವಿಡೀ ಬೆಂಗಳೂರು ನಾಗರಿಕರು ರಸ್ತೆ ಸಮಸ್ಯೆಯನ್ನು ಅನುಭವಿಸಲೇಬೇಕಾಯಿತು.

ಮೃತ್ಯುಕೂಪ

ಮೃತ್ಯುಕೂಪ

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮೃತ್ಯೂಕೂಪಗಳೆಂದೇ ಕರೆಯಬಹುದು. ಸೆಪ್ಟೆಂಬರ್ ತಿಂಗಳಲ್ಲಿ ಟೆಕ್ಕಿ ಸ್ತುತಿ ಪಾಂಡೆ ಎಂಬುವರು ಗಣೇಶ ಹಬ್ಬಕ್ಕೆ ಸ್ನೇಹಿತರ ಮನೆಗೆ ತೆರಳಿ ಹಿಂದಕ್ಕೆ ಬರುತ್ತಿದ್ದಾಗ ರಸ್ತೆ ಗುಂಡಿಗೆ ಬಲಿಯಾಗಿದ್ದರು. ಗುಂಡಿ ತಪ್ಪಿಸು ಹೋದ ಆಕೆಯ ಪತಿ ಮತ್ತು ಪಾಂಡೆ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಸ್ತುತಿ ಪಾಂಡೆ ಸಾವನ್ನಪ್ಪಿದ್ದರು.

ರಾಸಾಯನಿಕ ತುಂಬಿದ ಕೆರೆ

ರಾಸಾಯನಿಕ ತುಂಬಿದ ಕೆರೆ

ಬೆಳ್ಳಂದೂರು ಮತ್ತು ವರ್ತೂರು ಕೆರೆ ನೊರೆ ವರ್ಷವಿಡೀ ಸುದ್ದಿ ಮಾಡಿತು. ತಪಾಸಣೆ ನಡೆಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಕರೆ ಸಂಪೂರ್ಣ ಶುದ್ಧ ಮಾಡಲು ಇನ್ನು ನಾಲ್ಕು ವರ್ಷ ಹಿಡಿಯುತ್ತಿದೆ ಎಂದು ಹೇಳಿದೆ. ಆನ್ ಲೈನ್ ಸಹಿ ಸಂಗ್ರಹ ಸಹ ಆರಂಭವಾಗಿದೆ. ಏನೇ ಆದರೂ ಸದ್ಯಕ್ಕಂತೂ ಬೆಳ್ಳಂದೂರು ಜನರಿಗೆ ರಾಸಾಯನಿಕ ಮುಕ್ತ ಪರಿಸರ ಸಿಗುವ ಸಾಧ್ಯತೆ ಇಲ್ಲ.

ಕಸ ಕಸ ಕಸ

ಕಸ ಕಸ ಕಸ

2015 ಬೆಂಗಳೂರು ಕಸದ ಮೂಟೆ ಹೊದ್ದು ಮಲುಗಿದ ವರ್ಷ. ಆಡಳಿತ ಬದಲಾದರೂ ಕಸದ ಸಮಸ್ಯೆ ಮಾತ್ರ ಹಾಗೇ ಉಳಿದುಕೊಂಡಿತು. ವರ್ಷದ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಸಮಸ್ಯೆ ವರ್ಷಾಂತ್ಯಕ್ಕೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಒಣ ಕಸ, ಹಸಿ ಕಸ ಕಡ್ಡಾಯ ಎಂಬ ಪದ್ಧತಿ ಜಾರಿಯವೆರಗೆ ಕಸ ಸಮಸ್ಯೆ ಕಾಲಿರಿಸಿದೆ

ಮಳೆ ಆವಾಂತರ

ಮಳೆ ಆವಾಂತರ

2015ರ ಮಳೆಗಾಲ ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯನ್ನು ಕಣ್ಣ ಮುಂದೆ ಇಟ್ಟಿತು. ನಿರಂತರವಾಗಿ ಮಳೆ ಬಿದ್ದ ಪ್ರತಿದಿನವೂ ವಾಹನ ಸವಾರರಿಗೆ ಗೋಳು ತಪ್ಪಲಿಲ್ಲ. ತಮಿಳುನಾಡು ಮೂಲದ ಬಾಲಕಿ ಚರಂಡಿಯಲ್ಲಿ ಕೊಚ್ಚಿಹೋದ ದುರ್ಘಟನೆಗೂ ಬೆಂಗಳೂರು ಸಾಕ್ಷಿಯಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Year end special : What are the major civic problems Bengaluru faced in 2015. Grievances and issues related to public utility agencies such as Bruhat Bangaluru Mahanagara Palike (BBMP), Bengaluru Water Supply and Sewerage Board (BWSSB), Bengaluru Metropolitan Transport Corporation (BMTC) and Bengaluru Electricity Supply Company Limited (Bescom) would be highlighted in Major aspects.
Please Wait while comments are loading...