ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮಾನುಜಾಚಾರ್ಯರ ಸಹಸ್ರ ಸಂಭ್ರಮಕ್ಕೆ ಅದ್ಧೂರಿ ತೆರೆ

ಶ್ರೀ ರಾಮಾನುಜಾಚಾರ್ಯ(1017-1137)ರ 1000ನೇ ವರ್ಷಾಚರಣೆಯ ಸಮಾರಂಭದಲ್ಲಿ ಮಾತನಾಡಿದ ಆರ್ಟ್ ಆಫ್ ಲಿವಿಂಗ್‍ನ ಶ್ರೀ ರವಿಶಂಕರ್ ಗುರೂಜಿ ಅವರು, ಆಚಾರ್ಯ ಶ್ರೀ ರಾಮಾನುಜ ಅವರ ತತ್ತ್ವಾದರ್ಶಗಳನ್ನು ಪಾಲಿಸಬೇಕೆಂದು'' ತವೃಂದಕ್ಕೆ ಕರೆ ನೀಡಿದರು.

By Prasad
|
Google Oneindia Kannada News

ಬೆಂಗಳೂರು, ಮೇ 15 : ತ್ರಿಮತಾಚಾರ್ಯರಲ್ಲಿ ಒಬ್ಬರಾದ ಯದುಗಿರಿ ಯತಿರಾಜ ಮಠ ಭಾನುವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 'ರಾಮಾನುಜ ಸಹಸ್ರ ಸಂಭ್ರಮ-2017'ರ ಸಮಾರೋಪ ಸಮಾರಂಭದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಶ್ರೀ ರಾಮಾನುಜಾಚಾರ್ಯ(1017-1137)ರ 1000ನೇ ವರ್ಷಾಚರಣೆಯ ಈ ಸುಂದರ ಸಮಾರಂಭದಲ್ಲಿ ಮಾತನಾಡಿದ ಆರ್ಟ್ ಆಫ್ ಲಿವಿಂಗ್‍ನ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರೂಜಿ ಅವರು, ಆಚಾರ್ಯ ಶ್ರೀ ರಾಮಾನುಜ ಅವರ ತತ್ತ್ವಾದರ್ಶಗಳನ್ನು ಪಾಲಿಸಬೇಕೆಂದು'' ಭಕ್ತವೃಂದಕ್ಕೆ ಕರೆ ನೀಡಿದರು.

Yathiraja deemed university inaugurated in Bengaluru

11ನೇ ಶತಮಾನದಲ್ಲಿ ಓರ್ವ ದಾರ್ಶನಿಕ, ಸಮಾಜ ಸುಧಾರಕರಾಗಿದ್ದ ಆಚಾರ್ಯ ರಾಮಾನುಜ ಅವರು 11 ಸಮಾಜದ ಕೆಳ ಮಟ್ಟದ ವರ್ಗದವರು ದೇವಾಲಯಗಳಿಗೆ ಪ್ರವೇಶಿಸುವಂತೆ ಮಾಡಿದ ಇತಿಹಾಸ ಸೃಷ್ಟಿಸಿದ ಸಮಾಜ ಸುಧಾರಕರಾಗಿದ್ದರು'' ಎಂದು ರವಿಶಂಕರ್ ಗುರೂಜಿ ಬಣ್ಣಿಸಿದರು.

ಶ್ರೀ ಯದುಗಿರಿ ಯತಿರಾಜ ಮಠದ 41 ನೇ ಪೀಠಾಧಿಪತಿಗಳಾಗಿರುವ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿ ಅವರು ಆಶೀರ್ವಚನ ನೀಡಿ, ಇನ್ನು ಮುಂದೆಯೂ ಸಮಾಜದ ಸುಧಾರಣೆಗಾಗಿ ಶ್ರೀಮಠವು ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಿದೆ. ಇದರ ಅಂಗವಾಗಿ ಕಳೆದ ಹಲವು ವಾರಗಳಿಂದ ಬೆಂಗಳೂರು ಮತ್ತು ಮಂಡ್ಯದ ತೊಂಡನೂರಿನಲ್ಲಿ ಹಲವಾರು ಧಾರ್ಮಿಕಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ'' ಎಂದರು.

Yathiraja deemed university inaugurated in Bengaluru

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ರವರು, ಯತಿರಾಜ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಚಾಲನೆ ನೀಡಿದರು.

ಆರ್ಟ್ ಆಫ್ ಲಿವಿಂಗ್‍ನ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್ ಗುರೂಜಿರವರು ಯತಿರಾಜ ಮಠದ ವಿಶಿಷ್ಟ ಯೋಜನೆಯಾದ "ರಾಮಾನುಜ ಗ್ರಾಮೀಣಾಭಿವೃದ್ಧಿ ಯೋಜನೆಗೆ ಚಾಲನೆ ನೀಡಿದರು.

Yathiraja deemed university inaugurated in Bengaluru

ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ, ಸೇರಿದಂತೆ ಹಲವಾರು ಶಾಸಕರು, ಸಚಿವರು, ಸಂಸದರು, ಸಮಾಜವ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು.

ಶ್ರೀ ಯದುಗರಿ ಯತಿರಾಜ ಮಠದ ಕುರಿತು

1090ರಲ್ಲಿ ಮೇಲುಕೋಟೆಯಲ್ಲಿ(ಬೆಂಗಳೂರಿನಿಂದ 150 ಕಿಲೋಮೀಟರ್ ದೂರದಲ್ಲಿರುವ) ದೂರದೃಷ್ಟಿವುಳ್ಳ ತತ್ತ್ವಜ್ಞಾನಿ ಶ್ರೀ ರಾಮಾನುಜ ಆಚಾರ್ಯ ಅವರು ಯದುಗಿರಿ ಯತಿರಾಜ ಮಠವನ್ನು ಸ್ಥಾಪಿಸಿದ್ದರು. ಯತಿರಾಜ ಮಠ ಒಂದು ಅನಾಥಾಲಯವನ್ನು ದತ್ತು ಪಡೆದಿದ್ದು, ಮಕ್ಕಳಿಗೆ ಊಟ ಮತ್ತು ಹಾಲನ್ನು ಪೂರೈಕೆ ಮಾಡುತ್ತಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಪ್ರತಿದಿನ 500ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ಊಟ ವಿತರಿಸುತ್ತಿದೆ. 30ಕ್ಕೂ ಹೆಚ್ಚು ಜಾನುವಾರುಗಳನ್ನು ಹೊಂದಿದ ಗೋಶಾಲೆಯನ್ನೂ ನಡೆಸುತ್ತಿದೆ.

ಶ್ರೀ ರಾಮಾನುಜಾಚಾರ್ಯರ ಕುರಿತು:

ಶ್ರೀ ರಾಮಾನುಜಾಚಾರ್ಯರು ತಮ್ಮ ತಾತ್ವಿಕ ದೃಷ್ಟಿಯನ್ನು ಕಾರ್ಯರೂಪಕ್ಕೆ ತರಲು ಆಗಾಧವಾದ ಕ್ರಿಯಾಶಕ್ತಿಯನ್ನು ಹೊಂದಿದ್ದರು. ವಿಶಿಷ್ಟಾದ್ವೈತ ಮತ ಪ್ರವರ್ತಕರಾದ ಆಚಾರ್ಯರು ತಮ್ಮ ಕಾಲದಲ್ಲಿಯೇ ಸಮಾಜದ ಹಿಂದುಳಿದ ವರ್ಗಗಳಿಗೆ ದೇವಾಲಯಗಳಿಗೆ ಪ್ರವೇಶ ನೀಡುವ ಪ್ರಗತಿಪರ ಆಲೋಚನೆಯನ್ನು ಹೊಂದಿದ್ದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಅಮಿತ್ ಕಾರ್ಣಿಕ್, 9880432198
ಪ್ರವೀಣ್ ರಾವ್, 9916796559.

English summary
Thousands of devotees from various walks of life participated in the grand valedictory event of the Ramanuja Sahasra Sambrama – 2017 organized by Yadugiri Yathiraja Matt at the Palace Grounds here on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X