ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಶವಂತಪುರ ಎಕ್ಸ್‌ಪ್ರೆಸ್ ರೈಲು ಇನ್ನುಮುಂದೆ ವಿದ್ಯುತ್‌ನಲ್ಲೇ ಚಲಿಸಲಿದೆ

|
Google Oneindia Kannada News

ಬೆಂಗಳೂರು, ಮಾರ್ಚ್ 23: ಯಶವಂತಪುರ ಹಾಗೂ ಮಚಲೀಪಟ್ಟಣಂ ನಡುವೆ ರೈಲು ಮಾರ್ಗ ವಿದ್ಯುದೀಕರಣ ಪೂರ್ಣಗೊಂಡಿದೆ. ಇನ್ನುಮುಂದೆ ಯಶವಂತುರ ಎಕ್ಸ್‌ಪ್ರೆಸ್ ವಿದ್ಯುತ್ ನಿಂದ ಚಲಿಸಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಯಶವಂತಪುರ ಎಕ್ಸ್‌ಪ್ರೆಸ್ ವಾರದಲ್ಲಿ ಮೂರು ದಿನ ಯಶವಂತಪುರದಿಂದ ಮೂರು ದಿನ ಯಶವಂತಪುರದಿಂದ ಹೊರಟು ಮಚಲೀಪಟ್ಟಣಂಗೆ ಪ್ರಯಾಣ ಬೆಳೆಸಲಿದೆ. ಅದೇ ರೀತಿ ವಾರದಲ್ಲಿ ಮತ್ತೆ ಮೂರು ದಿನ ಮಚಲೀಪಟ್ಟಣಂನಿಂದ ಹೊರಟು ಯಶವಂತಪುರ ಸೇರಲಿದೆ.

ಪ್ರಯಾಣಿಕರಿಂದ 'ಅನುಭೂತಿ' ಕಾಣದ ಶತಾಬ್ಧಿ ರೈಲುಪ್ರಯಾಣಿಕರಿಂದ 'ಅನುಭೂತಿ' ಕಾಣದ ಶತಾಬ್ಧಿ ರೈಲು

ಯಶವಂತಪುರದಿಂದ ಹೊರಡುವ ರೈಲು ಯಲಹಂಕ, ಧರ್ಮಾವರಂ, ಗೂಟಿ, ಕರ್ನೂಲ್, ನಿಜಾಮಾಬಾದ್, ನಾಂದೇಡ್, ಉಜ್ಜಯಿನಿ ಜಂಕ್ಷನ್, ವಿಜಯವಾಡ ಸೇರಿದಂತೆ ವಿವಿಧ ನಿಲ್ದಾಣಗಳನ್ನು ದಾಟಿ ಮಚಲಿಪಟ್ಟಣಂ ಸೇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Yashwantpur-Machalipattanam lane converted to electrification

2015-16ರಲ್ಲಿ ಈ ಯೋಜನೆಗೆ ಪ್ರಾರಂಭಗೊಂಡಿತ್ತು.ಯಲಹಂಕ-ಧರ್ಮಾವರಂ ಮಾರ್ಗದಲ್ಲಿ ಏಕಪಥ ವಿದ್ಯುದೀಕರಣ ನಡೆದಿದೆ. ಇದು ಬೆಂಗಳೂರು ವಿಭಾಗದಲ್ಲಿ ಮೇಲ್ ಎಕ್ಸ್‌ಪ್ರೆಸ್ ಹಾಗೂ ಸರಕು ಸಾಗಣೆ ರೈಲುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಮುಖ್ಯವಾದ ಭಾಗಗಳಲ್ಲೊಂದಾಗಿದೆ.

ಇದರಿಂದ ರೈಲಿನ ವೇಗವು ಸುಧಾರಣೆಯಾಗಲಿದೆ. ಪ್ರಯಾಣಿಕರಿಗೆ ಅನುಕೂಲವಾಗಲಿದೆ.ಸಮಯ ಪಾಲನೆ ಕಾಪಾಡುವಲ್ಲಿ ಸಹಕಾರಿಯಾಗಲಿದೆ.

ವಿದ್ಯುತ್ ರೈಲು ಇಂಧನ ದಕ್ಷತೆಯನ್ನು ಹೊಂದಿದ್ದು ಹೆಚ್ಚು ಭಾರದ ಸರಕುಗಳನ್ನು ಮತ್ತು ಹೆಚ್ಚು ಬೋಗಿಗಳನ್ನು ಹೊಂದಿರುವ ಪ್ರಯಾಣಿಕ ರೈಲುಗಳನ್ನು ಸಾಗಿಸಬಲ್ಲದು. ಇದು ಭಾರತೀಯ ರೈಲ್ವೆಯ ಪರಿಸರ ಸ್ನೇಹಿ ಉಪಕ್ರಮದ ಒಂದು ಭಾಗವಾಗಿದೆ.

English summary
Most awaited Yashwantpur and Machalipattanam railway lane has been converted to electrification and Yashwantpur express which runs thrice in a week will run in this route now onwards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X