ಯಶ್ ಹುಟ್ಟುಹಬ್ಬಕ್ಕೆ ವೆಬ್ ಲೋಕಕ್ಕೆ ಯಶೋಮಾರ್ಗ ಎಂಟ್ರಿ!

Posted By:
Subscribe to Oneindia Kannada

ಬೆಂಗಳೂರು, ಜನವರಿ 08: ಕರುನಾಡ ಕಲಾ ವಿಕ್ರಮ, ರಾಜಾಹುಲಿ, ರಾಕಿಂಗ್ ಸ್ಟಾರ್, ಅಣ್ತಮ್ಮ ನಟ ಯಶ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಮುಂದಾಳತ್ವದ ಎನ್ ಜಿಒ 'ಯಶೋಮಾರ್ಗ' ಇಂದು ವೆಬ್ ಲೋಕಕ್ಕೆ ಎಂಟ್ರಿಕೊಟ್ಟಿದೆ.

ಬೆಂಗಳೂರಿನ ಹೊಸಕೆರೆ ಹಳ್ಳಿ ರಿಂಗ್ ರಸ್ತೆ ಸಮೀಪದ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯಶ್ ಅವರಿಗೆ ಇದು ಮದುವೆ ನಂತರದ ಮೊದಲ ಹುಟ್ಟುಹಬ್ಬವಾಗಿದೆ. 31ನೇ ಹುಟ್ಟುಹಬ್ಬ ಆಚರಿಸಿಕೊಂಡ ಯಶ್ ಅವರ ಜತೆ ತಾರಾ ಪತ್ನಿ ರಾಧಿಕಾ ಪಂಡಿತ್ ಕೂಡಾ ಜತೆಗಿದ್ದು, ಅಭಿಮಾನಿಗಳ ಕೇಕ್, ಶುಭಹಾರೈಕೆ, ಉಡುಗೊರೆಗಳನ್ನು ಸ್ವೀಕರಿಸಿದರು.[ಯಶ್ ಗೆ ಶುಭ ಹಾರೈಕೆ]

ಇದೇ ಸಂದರ್ಭದಲ್ಲಿ ಯಶ್ ಅವರು ತಮ್ಮ ಸರ್ಕಾರೇತರ ಸಂಸ್ಥೆ 'ಯಶೋಮಾರ್ಗ' ಕ್ಕೆ ಪ್ರತ್ಯೇಕ ವೆಬ್ ಸೈಟ್ ಲಾಂಚ್ ಮಾಡಿದರು. ಇಲ್ಲಿ ತನಕ ನಿಮ್ಮ ಯಶ್ ವೆಬ್ ಸೈಟ್ ನ ಭಾಗವಾಗಿ ಯಶೋಮಾರ್ಗದ ಮಾಹಿತಿ ಜನರಿಗೆ ತಲುಪುತ್ತಿತ್ತು. ಏನಿದು ಯಶೋ ಮಾರ್ಗ? ಹೊಸ ವೆಬ್ ಸೈಟ್ ನಲ್ಲಿ ಏನಿದೆ? ಮುಂದೆ ಓದಿ,..[ದಾಹ ತೀರಿಸಿ ಉತ್ತರ ಕರ್ನಾಟಕ ಜನತೆಯ ಹೃದಯ ಗೆದ್ದ ಯಶ್]

ಯಶೋಮಾರ್ಗ ಆರಂಭಿಸಿದ್ದು ಏಕೆ?

ಯಶೋಮಾರ್ಗ ಆರಂಭಿಸಿದ್ದು ಏಕೆ?

ನನ್ನ ಕಣ್ಮುಂದೆಯೇ ಲಕ್ಷಾಂತರ ಮಂದಿ ಹಸಿವೆಯಿಂದ ಬಳಲುವುದನ್ನು, ಜೀವನಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಿಲ್ಲದೇ ಸೊರಗುವುದನ್ನು, ಬಿಸಿಲ ಬೇಗೆಯಲ್ಲಿ ಒಣಗುವುದನ್ನು ನಾನು ನೋಡಿದ್ದೇನೆ. ಅವರ ಕಷ್ಟಗಳನ್ನು ನೀಗಿಸುವುದಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ. ಸಹೃದಯರು ಶ್ರಮಿಸುತ್ತಿದ್ದಾರೆ. ಅದು ಕೇವಲ ಸರ್ಕಾರದ ಕರ್ತವ್ಯ ಅಂತ ಕೈ ಕಟ್ಟಿ ಕೂರುವುದು ಸರಿ ಅಂತ ನನಗೇಕೋ ಅನ್ನಿಸುತ್ತಿಲ್ಲ. ಹೀಗಾಗಿ ನನ್ನ ಕೈಲಾದ್ದನ್ನು ಮಾಡುವುದಕ್ಕೆ ಮುಂದಾಗಿದ್ದೇನೆ ಎಂದು ಯಶ್ ಹೇಳಿಕೊಂಡಿದ್ದಾರೆ

ಯಶೋಮಾರ್ಗ ಫೌಂಡೇಶನ್

ಯಶೋಮಾರ್ಗ ಫೌಂಡೇಶನ್

ವ್ಯವಸ್ಥೆಯನ್ನು ದೂರುವುದು ಸುಲಭ. ಯಾರ ಕಡೆಗೋ ಬೆರಳು ತೋರಿಸಿ, ನೀವೇನು ಮಾಡಿದ್ದೀರಿ ಎಂದು ಕೇಳುವ ಮೊದಲು, ನಾನೇನು ಮಾಡಿದ್ದೇನೆ ಎಂದು ನನ್ನನ್ನು ಕೇಳಿಕೊಳ್ಳುವುದು ಮಾನವೀಯತೆ. ಅದು ನಮ್ಮ ಹಿರಿಯರು ನನಗೆ ಕಲಿಸಿದ ಪಾಠ. ಅವರ ಮಾರ್ಗದರ್ಶನ, ಆಶೀರ್ವಾದ ಮತ್ತು ಹಾರೈಕೆಯೊಂದಿಗೆ ನಾನು ನನ್ನ ಪುಟ್ಟ ಕೈಗಳಿಂದ ಏನನ್ನಾದರೂ ಮಾಡಲೇಬೇಕು ಎಂದು ನಿರ್ಧಾರ ಮಾಡಿದ್ದೇನೆ.
ಅದರ ಫಲವಾಗಿಯೇ ಹುಟ್ಟಿಕೊಂಡದ್ದು ಯಶೋಮಾರ್ಗ ಫೌಂಡೇಶನ್.

ಕುಡಿಯುವ ನೀರಿನ ಯೋಜನೆ ಕೈಗೊಂಡ ಯಶ್

ಕುಡಿಯುವ ನೀರಿನ ಯೋಜನೆ ಕೈಗೊಂಡ ಯಶ್

ಯಶೋಮಾರ್ಗ ಸಂಸ್ಥೆ ಮೂಲಕ ಉತ್ತರ ಕರ್ನಾಟಕದ ಈಗಾಗಲೇ ಒಂದು ಹಂತದ ಯೋಜನೆ ಪೂರೈಸಲಾಗಿದೆ. ಕಲಬುರಗಿ, ರಾಯಚೂರು ಜಿಲ್ಲೆಗಳ 50 ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡನೇ ಹಂತದಲ್ಲಿ ಗದಗ, ಯಾದಗಿರಿ, ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಯ 15 ಗ್ರಾಮಗಳಿಗೆ ನೀರು ಒದಗಿಸಲಾಗಿದೆ.

ಕೆರೆಗಳ ಪುನರುಜ್ಜೀವನ ಕಾರ್ಯ

ಕೆರೆಗಳ ಪುನರುಜ್ಜೀವನ ಕಾರ್ಯ

ಕೊಪ್ಪಳ ಜಿಲ್ಲೆ ಕೆರೆಗಳ ಹೂಳೆತ್ತುವಿಕೆ, ನೀರು ಒದಗಿಸುವುದು, ಬರಡಾದ ನೆಲವನ್ನು ಹಸಿರು ಭೂಮಿಯಾಗಿ ಪರಿವರ್ತಿಸುವ ಕಾರ್ಯ. ಯಲ್ಬುರ್ಗಾದ ಗೋಶಾಲೆಗಳ ಸಂರಕ್ಷಣೆ. ಹೈದರಾಬಾದ್ ಕರ್ನಾಟಕ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನ ನಡೆಸುವುದು ಯಶೋಮಾರ್ಗದ ಮುಂದಿನ ಯೋಜನೆಯಾಗಿದೆ.

ಯಶೋ ಮಾರ್ಗವನ್ನು ಸಂಪರ್ಕಿಸುವುದು ಹೇಗೆ?

ಯಶೋ ಮಾರ್ಗವನ್ನು ಸಂಪರ್ಕಿಸುವುದು ಹೇಗೆ?

ಯಶ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಮುಂದಾಳತ್ವದ ಎನ್ ಜಿಒ 'ಯಶೋಮಾರ್ಗ' ಇಂದು ವೆಬ್ ಲೋಕಕ್ಕೆ ಎಂಟ್ರಿಕೊಟ್ಟಿದೆ. ಯಶೋ ಮಾರ್ಗವನ್ನು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹಿಂಬಾಲಿಸಬಹುದು, ನಿಮ್ಮ ದೇಣಿಗೆ ನೀಡಬಹುದು, ನಿಮ್ಮ ಸಮಸ್ಯೆ ಹೇಳಿಕೊಳ್ಳಬಹುದು, ಇಮೇಲ್ ಬರೆಯಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕ ವಿಳಾಸ ಇಂತಿದೆ
* Fb.com/Yashomarga

* Twitter.com/Yashomarga

* Email : YashoMarga@Gmail.com

ವೆಬ್ ಸೈಟ್: yashomarga.in/

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Yashomarga Foundation goes online- An initiative of Actor Yash. With the blessing and guidance of my elders, I have determined to contribute my bit to the society. It was this determination that has led to the birth of YashoMarga Foundation said Yash on his 31st birthday today(January 08)
Please Wait while comments are loading...