ಯಕ್ಷ ಭೀಷ್ಮ ಯಾಜಿಗಳಿಗೆ 60ರ ಸಂಭ್ರಮ, ನೀವು ಪಾಲ್ಗೊಳ್ಳಿ

By: ರಾಘವೇಂದ್ರ ಅಡಿಗ ತೀರ್ಥಹಳ್ಳಿ
Subscribe to Oneindia Kannada

ಬೆಂಗಳೂರು, ಜೂನ್ 23: ಬಳ್ಕೂರು ಕೃಷ್ಣ ಯಾಜಿಯವರ 60ರ ಸಂಭ್ರಮವನ್ನು ಯಕ್ಷಸಮ್ಮಾನದ ಮೂಲಕ ಆಚರಿಸಲು 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ' ನಿರ್ಧರಿಸಿದೆ.

ಈ ಸಂದರ್ಭದಲ್ಲಿ ಶ್ರೀ ಸಾಲಿಗ್ರಾಮ ಮೇಳ ಮತ್ತು ಅತಿಥಿ ಕಲಾವಿದರಿಂದ ಬೆಂಗಳೂರಿನ ಜೆ ಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 25.06.2016ರ ಶನಿವಾರದಂದು ರಾತ್ರಿ 10ರಿಂದ 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ'ವು 'ಚಕ್ರವ್ಯೂಹ-ತ್ರಿಶಂಕು-ರಾಜಾ ಯಯಾತಿ' ಎಂಬ ಪ್ರಸಂಗಗಳನ್ನು ಆಯೋಜಿಸಿದೆ.

ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ' ವು ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿ ಯಕ್ಷರಸಿಕರ ಮನದುಂಬುವಂತೆ ಮಾಡಿದೆ. ಕಲಾವಿದರ ಹಾಗೂ ಪ್ರೇಕ್ಷಕರ ಹಿತಚಿಂತನೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ.

Yakashana: ​Balkur Krishna Yaji Turns 60 Chakravyuha-Trishanku-Raja Yayati Play

ಬಳ್ಕೂರು ಕೃಷ್ಣ ಯಾಜಿ, ತನ್ನದೇ ವಿಶಿಷ್ಠ ಶೈಲಿಯಿಂದ ಯಾವುದೇ ಪಾತ್ರಕ್ಕೆ (ಪೌರಾಣಿಕ/ಸಾಮಾಜಿಕ) ಜೀವ ತುಂಬುತ್ತಾ ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಯಕ್ಷರಸಿಕರ ಮನದಲ್ಲಿ ಅಚ್ಚಳಿಯದ ಅಚ್ಚೊತ್ತಿದವರು.

1956ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವಾಲಗಳ್ಳಿಯಲ್ಲಿ ಜನಿಸಿದ ಯಾಜಿಯವರು 40 ವರ್ಷಗಳ ಕಾಲ ಅಮೃತೇಶ್ವರಿ, ಇಡಗುಂಜಿ, ಸಾಲಿಗ್ರಾಮ ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ ಸೇವೆ ಸಲ್ಲಿಸಿ, ಈಗ ಅತಿಥಿ ಕಲಾವಿದರಾಗಿ ಗೆಜ್ಜೆ ಕಟ್ಟುತ್ತಿದ್ದಾರೆ.

ಯಕ್ಷರಂಗದ ಬಹುತೇಕ ಎಲ್ಲ ತಲೆಮಾರಿನ ಕಲಾವಿದರೊಟ್ಟಿಗೆ ಕಲಾ ಸೇವೆ ಮಾಡಿದ ಕೀರ್ತಿ ಯಾಜಿಯವರದ್ದು. ತಮ್ಮ ವಿದ್ವತ್ ಪೂರ್ಣ ಅರ್ಥಗಾರಿಕೆಯಿಂದ ಹಾಗೂ ಪ್ರಬುದ್ಧ ಸಾಂಪ್ರದಾಯಿಕ ನಟ-ನಾಟ್ಯದಿಂದ ಮನೆ-ಮನಗಳಲ್ಲಿ ಮನೆ ಮಾತಾದವರು ಶ್ರೀ ಬಳ್ಕೂರು ಕೃಷ್ಣ ಯಾಜಿಯವರು.

ಶ್ರೀಮತಿ ಪುಷ್ಪಾ ವಿ ಮಯ್ಯ ಹಾಗೂ ಶ್ರೀ ಮಣೂರು ವಾಸುದೇವ ಮಯ್ಯ ರವರ ಸಾರಥ್ಯದ 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ'ವು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವತ್ತ ಕಾರ್ಯೋನ್ಮುಖವಾಗಿದ್ದು ಈಗಾಗಲೇ ಹಲವಾರು ಕಲಾವಿದರನ್ನು ಗುರುತಿಸಿ ಗೌರವಿಸಿದೆ.

Yakashana: ​Balkur Krishna Yaji Turns 60 Chakravyuha-Trishanku-Raja Yayati Play

Yakashana: ​Balkur Krishna Yaji Turns 60 Chakravyuha-Trishanku-Raja Yayati Play


ಶ್ರೀ ಸಾಲಿಗ್ರಾಮ ಮೇಳದ ಕಲಾವಿದರಾದ ಸರ್ವಶ್ರೀ ರಾಘವೇಂದ್ರ ಮಯ್ಯ ಹಾಲಾಡಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ಶಿವಾನಂದ ಕೋಟ, ತುಂಬ್ರಿ ಭಾಸ್ಕರ, ಗೋವಿಂದ ವಂಡಾರು, ಮಂಕಿ ಈಶ್ವರ ನಾಯಕ್, ಆರ್ಗೋಡು ಮೋಹನದಾಸ ಶೆಣೈ, ರಾಜೇಶ್ ಭಂಡಾರಿ ಗುಣವಂತೆ, ಶಶಿಕಾಂತ ಶೆಟ್ಟಿ, ಮಹಾಬಲೇಶ್ವರ ಭಟ್ ಕ್ಯಾದಗಿ ಮತ್ತಿತರರೊಂದಿಗೆ

ಅತಿಥಿ ಕಲಾವಿದರಾಗಿ ಸರ್ವಶ್ರೀ ಕೇಶವ ಹೆಗಡೆ ಕೊಳಗಿ, ಕೃಷ್ಣ ಭಂಡಾರಿ ಗುಣವಂತೆ, ವಾಸುದೇವ ಸಾಮಗ, ಬಳ್ಕೂರು ಕೃಷ್ಣ ಯಾಜಿ, ಜಲವಳ್ಳಿ ವಿದ್ಯಾಧರ ರಾವ್, ಉಮಾಕಾಂತ ಭಟ್ ಮೇಲುಕೋಟೆ, ಸುಬ್ರಮಣ್ಯ ಹೆಗಡೆ ಯಲಗುಪ್ಪ ಮತ್ತು ಬಳ್ಕೂರು ಕೃಷ್ಣ ಯಾಜಿಯವರ ಮೊಮ್ಮಗ ಅಭಿಷೇಕ್ ಅಡಿಯವರು ಬಣ್ಣ ಹಚ್ಚಲಿದ್ದಾರೆ. (ಟಿಕೆಟ್ ದರ ಇರುತ್ತದೆ).

ಸಂಪರ್ಕ-ಜಗನ್ನಾಥ ಹೆಗಡೆ-99008 08109, ರಮೇಶ್ ಬೇಗಾರ್ - 94481 01708

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chakravyuha-Trishanku-Raja Yayati Yakshagana play will be staged on June 25 to mark the 60th birthday celebration of Senior artist Balkur Krishna Yaji. The event organised by Manur Mayya Yakshakala trust and will be held at Ravindra Kalakshetra, JC road, Bengaluru.
Please Wait while comments are loading...