ಮಾಸ್ಟರ್ ಪ್ಲಾನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ, 10 ಸಾವಿರ ಬಹುಮಾನ ಗೆಲ್ಲಿ!

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 30 : ಸಿಟಿಜನ್ ಮ್ಯಾಟರ್ಸ್ ಬೆಂಗಳೂರು, ಬಿ-ಪ್ಯಾಕ್ ಹಾಗೂ ಊರು.ಇನ್ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ಪರಿಷ್ಕೃತ ಮಾಸ್ಟರ್ ಪ್ಲಾನ್-2031ರ ಕುರಿತಂತೆ ವಿಶ್ಲೇಷಣಾತ್ಮಕ ಲೇಖನ ಬರಹ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರು 10 ಸಾವಿರ ರೂ. ಬಹುಮಾನ ಗೆಲ್ಲಬಹುದಾಗಿದೆ.

ಮಹಿಳೆಯರ ಸುರಕ್ಷತೆ: ಬಿಎಂಟಿಸಿ ಹಾಗೂ ಬಿ-ಪ್ಯಾಕ್ ಜಂಟಿ ಸಮೀಕ್ಷೆ

ಪರಿಷ್ಕೃತ ಮಾಸ್ಟರ್ ಪ್ಲಾನ್ ಅರಿತುಕೊಂಡು, ಅದನ್ನು ವಿಶ್ಲೇಷಿಸಿ, ಅಭಿಪ್ರಾಯಗಳ ಸಹಿತ ನಗರದ ಅಭಿವೃದ್ಧಿಗೆ ಪೂರಕವಾಗಿ ಲೇಖನ ಬರೆಯಬಹುದು. ಅಲ್ಲದೇ ಪರಿಷ್ಕೃತ ಮಾಸ್ಟರ್ ಪ್ಲಾನ್ ಬೆಂಗಳೂರು ನಗರದ ಮೇಲೆ ಬೀರಬಹುದಾದ ಪರಿಣಾಮ, ಉಂಟು ಮಾಡಬಹುದಾದ ಬದಲಾವಣೆ ಎಂಬುದನ್ನು ಸ್ಥೂಲವಾಗಿ, ಸರಳವಾಗಿ ಬರೆಯಬೇಕು.

Write on Revised Master Plan: Win 10k prize

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಲೇಖನಗಳನ್ನು ಬರೆಯಬಹುದಾಗಿದ್ದು, ಆಯಾ ಭಾಷೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಸೇರಿದಂತೆ ಒಟ್ಟು ನಾಲ್ಕು ಬಹುಮಾನ ನೀಡಲಾಗುವುದು. ವಿಜೇತರಿಗೆ 10 ಸಾವಿರ ರೂ ಹಾಗೂ ಎರಡನೇ ಬಹುಮಾನಕ್ಕೆ 5 ಸಾವಿರ ರೂ ನಗದು ನೀಡಲಾಗುವುದು. 2018ರ ಜನವರಿ 21ರ ಮಧ್ಯರಾತ್ರಿ ಒಳಗಾಗಿ ಲೇಖಗಳನ್ನು ಸಲ್ಲಿಸಬಹುದು.

ವಿವರಗಳಿಗೆ ಹಾಗೂ ಲೇಖನ ಕಳಿಸುವ ವಿಳಾಸ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Citizen Matters Bengaluru, B.PAC, ooru.in have jointly presenting a contest of article writing on Revised Master Plan -2031 released by the Bengaluru Development Authority.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ