• search
For bengaluru Updates
Allow Notification  

  36 ಸಾವಿರ ಕೇಸುಗಳ ಹೋರಾಟಗಾರ ರವೀಂದ್ರ ಶಾನುಭಾಗ್ ಬೆಂಗಳೂರಿನಲ್ಲಿ

  By Prasad
  |

  ಇವರು ರವೀಂದ್ರನಾಥ್ ಶಾನುಭಾಗ್. ಕಳೆದ 40 ವರ್ಷಗಳಿಂದ ಸತತವಾಗಿ ನೊಂದವರ, ಅನ್ಯಾಯಕ್ಕೊಳಗಾದವರ ಪರ ನಿಂತು ವಾದ ಹೂಡಿ, ಕೋರ್ಟು ಕಛೇರಿಗಳನು ಅಲೆದು, ಸಾವಿರಾರು ಜನರ ಬದುಕಿಗೆ ಬೆಳಕಾಗಿದ್ದಾರೆ.

  ಒಂದು ಕೇಸು ಕೋರ್ಟಿನಲ್ಲಿದ್ದರೆ ಅಲೆದು, ಸಾಕಪ್ಪಾ ಸಹವಾಸ ಅನ್ನುವಂತಾಗುತ್ತದೆ. ಅಂತದರಲ್ಲಿ ನೂರಾರು ಕೇಸುಗಳನ್ನು ಹಿಡಿದು, ದೊಡ್ಡ ದೊಡ್ಡ ಶಕ್ತಿಗಳ ಎದುರು, ವಿವಿಧ ಕೋರ್ಟುಗಳಿಗೆ ದಾರಿ ಸವೆಸುವುದೆಂದರೆ ಅದೊಂದು ಸಾರ್ಥಕ ಜೀವನ.

  ರಾಜ್ಯೋತ್ಸವ ಪ್ರಶಸ್ತಿ ತಿರಸ್ಕರಿಸಿದ ಡಾ.ರವೀಂದ್ರನಾಥ್ ಶಾನುಭಾಗ್

  ಒಂದೊಂದು ಕೇಸೂ ಬೆಚ್ಚಿಬೀಳಿಸುವಂಥದ್ದು. ಅವರು ಹೀಗೆ ಗೆದ್ದ ಕೇಸುಗಳ ಸಂಖ್ಯೆಗಳೇ ಬರೋಬ್ಬರಿ 36,000. ಅದರಲಿ, 6 ಸಾವಿರಕ್ಕೂ ಹೆಚ್ಚಿನ ಕೇಸುಗಳನ್ನು ದೇಶದ ಅತ್ಯುನ್ನತ ಲಾ ಕಾಲೇಜುಗಳು ಅಧ್ಯಯನ ಮಾಡುತ್ತಿವೆ. ವಿದೇಶಗಳಲ್ಲೂ ಇವರು ಬಗೆಹರಿಸಿದ ಸಮಸ್ಯೆಗಳ ಕುರಿತು ಅಧ್ಯಯನಗಳಾಗುತ್ತಿವೆ.

  Would you like to listen to Ravindranath Shanbhag

  ಸದ್ಯ ಪುಣೆಯಲ್ಲಿರುವ ಶಾನುಭಾಗರಿಗೆ ಪುಣೆ ಯೂನಿವರ್ಸಿಟಿ, ಇವರ ಕೇಸುಗಳ ಅಧ್ಯಯನಕ್ಕೆ ಒಂದು ವಿಭಾಗವನ್ನೇ ಮಾಡಿದೆ ಎಂಬುದು ಹೊಸದಾಗಿ ಗೊತ್ತಾಯಿತಂತೆ. ನಮ್ಮ ಕರ್ನಾಟಕದವರೇ ಒಬ್ಬರು ಹೀಗಿರುವುದು ನಮಗೆ ತಿಳಿದೇ ಇರಲಿಲ್ಲ ಅನ್ನುವವರು ಬಹಳ.

  ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಿದ ಶಾನಭಾಗ್, ನಂಗೆ ಪ್ರಶಸ್ತಿ ಬೇಡ. ಅದರ ಬದಲು ಈ ಕೆಲಸಗಳನ್ನು ಮಾಡಿಕೊಡಿ ಅಂತ ಆರು ಪ್ರಕರಣಗಳನ್ನು ಪರಿಹರಿಸಿದ್ದಾರೆ.

  ನಮಗೆಲ್ಲ ವ್ಯವಸ್ಥೆಯ ವಿರುದ್ಧ ಅನೇಕ ಸಲ ಕೋಪ ಬರುತ್ತದೆ. ಏನಾದರೂ ಮಾಡೋಣ ಅನಿಸುತ್ತದೆ. ಆದರೆ ನಮ್ಮದೇ ಜಂಜಾಟಗಳಲಿ ಸಿಲುಕಿದ್ದೇವೆ. ಇತ್ತ ಶಾನಭಾಗರ ಸಂಸ್ಥೆಗೆ ಬರುವ ಸಮಸ್ಯೆಗಳು ಮಿತಿಮೀರುತ್ತಿವೆ.

  ನಾವು ನಮ್ಮೆಲ್ಲ ಕೆಲಸಗಳ ನಡುವೆಯೂ, ನಾವಿದ್ದ ಕಡೆಯೇ ಇದ್ದುಕೊಂಡು, ಈ ಕೆಲಸದಲ್ಲಿ ನಮ್ಮ ಕೈಲಾದ ಮಟ್ಟಿಗೆ ಜೊತೆಯಾಗಬಹುದು. ನಮ್ಮ ಕೋಪಕ್ಕೂ ಸಾರ್ಥಕತೆ ಕೊಡಬಹುದು. ಹೇಗೆ? ಏನು? ಹೇಗೆ? ಅಹಿಂಸೆಯಿಂದ, ಖರ್ಚೂ ಇರದೇ, ಕೂಗಾಡದೇ, ಎಲ್ಲವನೂ ಸರಿಮಾಡುವ ವಿಧಾನ ಯಾವುದದು?

  Ravindranath Shanbhag

  ಶಾನಭಾಗರೇ ಹೇಳುತ್ತಾರೆ. ಇದೇ ಜನವರಿ 14 ರ ಭಾನುವಾರ, ಬೆಳಗ್ಗೆ 10ಕ್ಕೆ ನೀವು ಮಲ್ಲೇಶ್ವರಕ್ಕೆ ಬನ್ನಿ. ವಿಳಾಸ : ಸಂಸ್ಕೃತಿ ಕೇಂದ್ರ. 6ನೇ ಅಡ್ಡರಸ್ತೆ. ಈಜುಕೊಳ ಬಡಾವಣೆ. ಮಲ್ಲೇಶ್ವರ. ಬೆಂಗಳೂರು.

  ದೊಡ್ಡ ಸಭೆಯಲ್ಲ. ನಿಜಕ್ಕೂ ಕಾಳಜಿಯುಳ್ಳ ಜನರ ಗುಂಪೊಂದರ ಚರ್ಚೆ. ಬನ್ನಿ ಅಲ್ಲೇ ಮಾತಾಡೋಣ. ಬರುವ ಮುಂಚೆ ತಿಳಿಸಿದರೆ ನಮ್ಮ ವ್ಯವಸ್ಥೆಗೂ ಅನುಕೂಲವಾಗುತ್ತದೆ. ಒಂದು ಮಾತು ತಿಳಿಸಿ ಬನ್ನಿ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ಬೆಂಗಳೂರು ಸುದ್ದಿಗಳುView All

  English summary
  Dr Ravindranath Shanbhag, the Son of Udupi soil, Human Rights activist, a warrior of 36,000 court cases, the Man who rejected Rajyotsava Award 2017, available for an interaction in Malleshwaram, Bengaluru on January 14.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more