ಮಲೇರಿಯಾ ಬಗ್ಗೆ ತಿಳಿಯಲೇಬೇಕಾದ 10 ಸಂಗತಿಗಳು

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 25 : ಫಿಮೇಲ್ ಅನಾಫಿಲಿಸ್! ಚಿಕೂನ್ ಗೂನ್ಯ, ಎಚ್1ಎನ್1, ಡೆಂಗ್ಯೂ ರೋಗಗಳ ದಾಂಗುಡಿಯಲ್ಲಿ 'ಫಿಮೇಲ್ ಅನಾಫಿಲಿಸ್' ಸೊಳ್ಳೆ ಕಡಿತದಿಂದ ಹರಡಿ, ರೋಗಿಗಳ ಮರಣಶಾಸನ ಬರೆಯುವ ರೋಗ ಮಲೇರಿಯಾ ಮರೆತೇಹೋಗಿರಬಹುದು.

ಮಲೇರಿಯಾ ಇನ್ನೂ ಮರೆಯಾಗಿಲ್ಲ. ಜಾಗತಿಕವಾಗಿ ಅತೀಹೆಚ್ಚು ಜನರನ್ನು ಬಲಿತೆಗೆದುಕೊಳ್ಳುತ್ತಿರುವ ರೋಗವೆಂದರೆ ಮಲೇರಿಯಾನೇ ಎಂದು ಅಧ್ಯಯನವೊಂದು ಹೇಳುತ್ತದೆ. ಈ ಮಲೇರಿಯಾ ಬಗ್ಗೆ ಈಗ ಬರೆಯಲು ಕಾರಣವೇನೆಂದರೆ, ಏಪ್ರಿಲ್ 25 'ವಿಶ್ವ ಮಲೇರಿಯಾ ದಿನ'!

ಮಾರಣಾಂತಿಕ ಸೊಳ್ಳೆ ಕಡಿತದಿಂದ ದೂರವಿರುವುದೇ ಸದ್ಯಕ್ಕಿರುವ ಅತ್ಯುತ್ತಮ ಮಾರ್ಗ. ವಿಪರೀತ ಜ್ವರ, ತಲೆನೋವು, ಚಳಿ, ವಾಂತಿಯಾಗುವುದು ಈ ರೋಗದ ಲಕ್ಷಣ. ಸೂಕ್ತ ಪರೀಕ್ಷೆಯ ನಂತರ ಕಂಡುಹಿಡಿಯಬಹುದಾಗಿದೆ. ನಿರ್ಲಕ್ಷಿಸಿದರೆ ಜೀವ ತೆಗೆಯಲೂ ಈ ರೋಗ ಹೇಸುವುದಿಲ್ಲ.

ಎಲ್ಲೆಂದರಲ್ಲಿ ಕಸ ಬಿಸಾಕುವುದು, ಕೊಳಚೆ ನೀರು ನಿಲ್ಲದಂತೆ ಪರಿಸರವನ್ನು ಸ್ವಚ್ಛವಾಗಿಡುವುದು, ಹೂಕುಂಡ ಮುಂತಾದ ವಸ್ತುವಿನಲ್ಲಿ ಕೂಡ ನೀರು ಬಹಳದಿನಗಳ ಕಾಲ ನಿಲ್ಲದಂತೆ ಎಚ್ಚರ ವಹಿಸುವುದು ಸದ್ಯಕ್ಕೆ ನಾವು ಮಾಡಬೇಕಾದ ಕ್ರಮಗಳು. ಎಲ್ಲಕ್ಕಿಂತ ಮಕ್ಕಳಲ್ಲಿ ಈ ಕುರಿತು ಜಾಗ್ರತೆ ಮೂಡಿಸಬೇಕು. [ನಗಬೇಡಿ, ಆಗಸ್ಟ್ 20 ವಿಶ್ವ ಸೊಳ್ಳೆ ದಿನಾಚರಣೆ!]

World Malaria Day: 10 facts you must know about Malaria

ಈ ಖತರ್ನಾಕ್ ರೋಗದ ಬಗ್ಗೆ ಕೆಲ ಆಸಕ್ತಿಕರ ಸಂಗತಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಒದಗಿಸಿದ್ದು, ಅವುಗಳತ್ತ ಒಂದು ನೋಟ ಬೀರೋಣ.

* ಸೊಳ್ಳೆ ಎಲ್ಲಿರಲ್ಲ? ಹೀಗಾಗಿ, ಜಗತ್ತಿನ ಅರ್ಧಕ್ಕರ್ಧ ಜನರಿಗೆ (3.2 ಬಿಲಿಯನ್) ಈ ರೋಗ ಬರುವ ಸಾಧ್ಯತೆಗಳಿರತ್ತೆ.

* 2015ರಲ್ಲಿ ಜಗತ್ತಿನಾದ್ಯಂತ 214 ಮಿಲಿಯನ್ ಹೊಸ ಮಲೇರಿಯಾ ಪ್ರಕರಣಗಳು ದಾಖಲಾಗಿವೆ.

* ಕಳೆದ ವರ್ಷ 4 ಲಕ್ಷ 38 ಸಾವಿರ ಜನರು ಮಲೇರಿಯಾದಿಂದ ಸಾವಿಗೀಡಾಗಿದ್ದಾರೆ. [ಸೊಳ್ಳೆ ದಿನಾಚರಣೆ ಬಗ್ಗೆ ಸೊಲ್ಲೆತ್ತಿದ ಅಮಿತಾಬ್ ಬಚ್ಚನ್!]

* ಶೇ.90ರಷ್ಟು ಸಾವು ಆಫ್ರಿಕಾ ಖಂಡದಲ್ಲಾಗಿದ್ದರೆ, ಶೇ.7ರಷ್ಟು ಆಗ್ನೇಯ ಏಷ್ಯಾದಲ್ಲಿ ಸಂಭವಿಸಿದೆ.

* ಈ ರೋಗಕ್ಕೆ ಹೆಚ್ಚಾಗಿ ಮಕ್ಕಳೇ ಬಲಿಯಾಗುತ್ತಿರುವದು ನಿಜಕ್ಕೂ ದುರದೃಷ್ಟಕರ ಸಂಗತಿ. ಸಾವಿಗೀಡಾದ 5 ವರ್ಷಕ್ಕಿಂತ ಕೆಳಗಿನ ಮಕ್ಕಳ ಸಂಖ್ಯೆ 306,000. ಇದರಲ್ಲಿ ಆಫ್ರಿಕಾದಲ್ಲಿ ಸತ್ತವರ ಸಂಖ್ಯೆ 292,000

* 2000 ಮತ್ತು 2015ರ ನಡುವೆ ಹೊಸ ಮಲೇರಿಯಾ ಪ್ರಕರಣಗಳ ಸಂಖ್ಯೆ ಜಾಗತಿಕವಾಗಿ ಶೇ.37ರಷ್ಟು ಮತ್ತು ಆಫ್ರಿಕಾದಲ್ಲಿ ಶೇ.42ರಷ್ಟು ತಗ್ಗಿದೆ. ಇದರಿಂದಾಗಿ ಶೇ.60ರಷ್ಟು ಸಾವಿನ ಪ್ರಮಾಣವೂ ಕಡಿಮೆಯಾಗಿದೆ.

* ಮೊತ್ತಮೊದಲ ಬಾರಿಗೆ 2015ರಲ್ಲಿ ಯುರೋಪ್ ಪ್ರಾಂತ್ಯದಲ್ಲಿ ಮಲೇರಿಯಾದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

* 2015ರಲ್ಲಿ 97 ರಾಷ್ಟ್ರಗಳಲ್ಲಿ ಹೆಣ್ಣು ಅನಾಫಿಲಿಸ್ ಸೊಳ್ಳೆ ತನ್ನ ಆಟಾಟೋಪ ನಡೆಸಿದೆ.

* ದುರಾದೃಷ್ಟದ ಸಂಗತಿಯೆಂದರೆ, ಇಲ್ಲಿಯವರೆಗೆ ಖಚಿತವಾದ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ.

* ಆರ್‌ಟಿಎಸ್ಎಸ್ ಎಂಬ ಚುಚ್ಚುಮದ್ದನ್ನು ಜಾಗತಿಕವಾಗಿ, ಅದರಲ್ಲೂ ಆಫ್ರಿಕಾ ರಾಷ್ಟ್ರಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಇದು ಪರಿಣಾಮಕಾರಿಯಾಗಿಯೂ ಕೆಲಸ ಮಾಡುತ್ತಿದೆ. ಆದರೆ, ಆಫ್ರಿಕಾದ ಹೊರಗೆ ಹಬ್ಬುತ್ತಿರುವ ಪಿ.ವಿವಾಕ್ಸ್ ಮಲೇರಿಯಾಗೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
April 25 is observed as World Malaria Day all over the globe. Though mortality in many countries has come down, Malaria is still considered as one of the deadliest killer disease. Find here 10 facts you must know about Malaria and the vaccine available.
Please Wait while comments are loading...