ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಸರ ದಿನ : ಓಲಾ ಜತೆ ಕೈಜೋಡಿಸಿದ ಬೆಂಗಳೂರು ಪೊಲೀಸರು

ಪರಿಸರ ದಿನಾಚರಣೆ ಅಂಗವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ನಗರದ ಪ್ರಮುಖ ಟ್ರಾಫಿಕ್ ಜಂಕ್ಷನ್‍ ಗಳಲ್ಲಿ ಸಾವಿರಾರು ವಾಹನ ಸವಾರರಿಗೆ ಗಿಡಗಳನ್ನು ವಿವತರಿಸಿದರು.

By Mahesh
|
Google Oneindia Kannada News

ಬೆಂಗಳೂರು, ಜೂನ್ 05: ಪರಿಸರ ದಿನಾಚರಣೆ ಅಂಗವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ನಗರದ ಪ್ರಮುಖ ಟ್ರಾಫಿಕ್ ಜಂಕ್ಷನ್‍ ಗಳಲ್ಲಿ ಸಾವಿರಾರು ವಾಹನ ಸವಾರರಿಗೆ ಗಿಡಗಳನ್ನು ವಿತರಿಸಿದರು.

ಭಾರತದ ಜನಪ್ರಿಯ ಪ್ರಯಾಣಿಕ ಸೇವೆಯ ಮೊಬೈಲ್ App ಓಲಾ, ಬೆಂಗಳೂರು ಸಂಚಾರಿ ಪೊಲೀಸರ ಸಹಯೋಗದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಹಾಗೂ ಮಾಲಿನ್ಯ ನಿಯಂತ್ರಣ ಕುರಿತು ಜಾಗೃತಿಗಾಗಿ ರೈಡ್ ಶೇರಿಂಗ್ ವ್ಯವಸ್ಥೆಗೆ ಮುಂದಾಗಿದೆ.

ಬೆಂಗಳೂರು ನಗರದಲ್ಲಿ ಒಟ್ಟು 67 ಲಕ್ಷ ನೊಂದಣಿಯಾದ ವಾಹನಗಳಿದ್ದು, ವಾಹನಗಳ ಸಂಖ್ಯೆ ಹೆಚ್ಚಾದಂತೆ ರಸ್ತೆ ಮೂಲ ಸೌಕರ್ಯದ ಸಂಘರ್ಷವೂ ಹೆಚ್ಚುತ್ತಿದೆ. ಇದರಿಂದಾಗಿ ಮಾಲಿನ್ಯದ ಏರಿಕೆ ಜತೆಗೆ ನಗರದಲ್ಲಿ ಸಂಚಾರ ದಟ್ಟಣೆಯು ಹೆಚ್ಚಾಗುತ್ತಿದೆ. ಶಿಸ್ತಿನ ಮತ್ತು ಸಾರಿಗೆ ಹಂಚಿಕೆ ಕ್ರಮದ ಮೂಲಕ ಸಂಚಾರ ದಟ್ಟಣೆ ಕಡಿಮೆಗೊಳಿಸುವುದೊಂದಿಗೆ ಮಾಲಿನ್ಯವೂ ನಿಯಂತ್ರಣಗೊಳ್ಳಲಿದೆ.

World Environment Day : Ola partners with Bangalore Traffic Police

'ವಿಶ್ವ ಪರಿಸರ' ದಿನಾಚರಣೆ ಅಂಗವಾಗಿ ಓಲಾ ವಿನೂತನವಾದ 'ಫರಕ್ ಪಡ್ತಾ ಹೈ' ಅಭಿಯಾನ ಹಮ್ಮಿಕೊಂಡಿದ್ದು, ಇದರ ಉದ್ದೇಶ ಸಂಚಾರ ದಟ್ಟಣೆ ಕಡಿಮೆಗೊಳಿಸಲು ದೇಶದ ಜನರು ತಮ್ಮ ರೈಡ್‍ಗಳನ್ನು ಹಂಚಿಕೊಳ್ಳಲಿ ಎಂಬುದಾಗಿದೆ.

ಬೆಂಗಳೂರು ಸೇರಿದಂತೆ ಪುಣೆ, ನೊಯಿಡಾ, ಗುರುಗ್ರಾಮ, ದೆಹಲಿ ಹಾಗೂ ಮುಂಬೈ ನಗರಗಳಲ್ಲೂ ಅಲ್ಲಿನ ಸಂಚಾರ ಪೊಲೀಸರು ಇದೇ ಬಗೆಯ ಕ್ರಮಗಳನ್ನು ಕೈಗೊಂಡರು.

ಕಾರ್ಬನ್ ಉಗುಳುವಿಕೆ, ಇಂಧನ ಬಳಕೆ ಹಾಗೂ ಏರುಗತಿಯಲ್ಲಿರುವ ಸಂಚಾರ ದಟ್ಟಣೆ ಹಾಗೂ ಕ್ರಮ ಕೈಗೊಳ್ಳಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಓಲಾ ಸಂಸ್ಥೆಯು ಹಮ್ಮಿಕೊಂಡಿರುವ ಅಭಿಯಾನ, ಆವಿಷ್ಕಾರಿ ಕ್ರಮಗಳು ಹಾಗೂ ಕಾರ್ಯಚಟುವಟಿಕೆಗಳು ಸಾರಿಗೆ ಹಂಚಿಕೆಯ ಈ ಉಪಕ್ರಮಕ್ಕೆ ಸಾಥ್ ನೀಡಿವೆ ಎಂದು ಓಲಾದ ಸಿಓಓ ವಿಶಾಲ್ ಕೌಲ್ ಹೇಳಿದರು.

ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಈ ಅಭಿಯಾನಕ್ಕೆ ತಮ್ಮ ಸಹಕಾರ ನೀಡಿದ್ದು, ಸಾಮಾಜಿಕ ಮಾಧ್ಯಮದ ಮೂಲಕ ಜನರು ಹೆಚ್ಚು ಪರಿಸರ ಸ್ನೇಹಿಯಾಗುವಂತೆ ಉತ್ತೇಜನಕಾರಿ ಮಾತುಗಳನ್ನು ಹಂಚಿಕೊಂಡಿದ್ದಾರೆ.

World Environment Day : Ola partners with Bangalore Traffic Police

ಓಲಾ ಕುರಿತು: ಜನವರಿ 2011ರಲ್ಲಿ ಬಾಂಬೆ ಐಐಟಿ ಹಿರಿಯ ವಿದ್ಯಾರ್ಥಿಗಳಾದ ಭವಿಷ್ ಅಗರವಾಲ್ ಮತ್ತು ಅಂಕಿತ್ ಭಾಟಿ ಅವರು ಓಲಾ (ಈ ಮೊದಲು ಓಲಾ ಕ್ಯಾಬ್ಸ್) ಅನ್ನು ಸ್ಥಾಪಿಸಿದರು. ಇದು, ವೈಯಕ್ತಿಕ ಪ್ರಯಾಣಕ್ಕಾಗಿ ಭಾರತದ ಬಹು ಜನಪ್ರಿಯ ಮೊಬೈಲ್ ಆ್ಯಪ್ ಆಗಿದೆ.

ಓಲಾ ಮೊಬೈಲ್ ಆ್ಯಪ್ ಬಳಕೆ ಮಾಡುವ ಮೂಲಕ 102 ನಗರಗಳಲ್ಲಿ 500,000 ಕ್ಯಾಬ್‍ಗಳು, ಆಟೊರಿಕ್ಷಾ, ಟ್ಯಾಕ್ಸಿಗಳನ್ನು ಬಳಕೆ ಮಾಡುವ ಮೂಲಕ ಪ್ರಯಾಣಿಕ ಸೇವೆ ಒದಗಿಸಲು ಒತ್ತು ನೀಡುತ್ತಿದೆ. ಓಲಾ ಶಟ್ಲ್, ಓಲಾ ಶೇರ್ ಮೂಲಕ ಪ್ರಯಾಣಿಕರು ಹಂಚಿಕೆ ಆಧಾರದಲ್ಲಿ ಪ್ರಯಾಣಿಕ ಸೇವೆ ಒದಗಿಸಲು ನೆರವಾಗದೆ. ಮೊಬೈಲ್ ಆ್ಯಪ್ ವಿಂಡೋಸ್, ಅಂಡ್ರಾಯ್ಡ್, ಐಒಎಸ್ ವೇದಿಕೆಯಲ್ಲಿಯೂ ಲಭ್ಯವಿದೆ.

English summary
India’s most popular mobile app for transportation, partners with Bangalore Traffic Police to create awareness around reducing traffic and pollution by opting for shared rides. As part of the awareness drive, senior traffic police officials handed out tree saplings to thousands of commuters across key traffic junctions in the city, reminding them to share their rides, and help in decongesting roads and reduce overall pollution level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X