ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಶಾಲೆಗಳಲ್ಲಿ ವಿಶ್ವದರ್ಜೆಯ ಕಲಿಕಾ ಸೌಲಭ್ಯ

|
Google Oneindia Kannada News

ಬೆಂಗಳೂರು, ಸೆ.25: ವಿಶ್ವದರ್ಜೆಯ ಕಲಿಕಾ ಸೌಲಭ್ಯವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿ 'ಪ್ರಾಜೆಕ್ಟ್ ರೋಶಿನಿ' ಮೂಲಕ ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಮಾನ್ಯ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.

ಈ ಯೋಜನೆಯ ಅನುಷ್ಠಾನವನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಮೈಕ್ರೋಸಾಫ್ಟ್, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಸಂಸ್ಥೆಗಳು ಬೆಂಬಲ ನೀಡುತ್ತಿವೆ. ಇದರ ಜತೆಗೆ ಬಿಬಿಎಂಪಿಯ ಎಲ್ಲಾ ಶಾಲೆಗಳು ಸದ್ಯದಲ್ಲಿಯೇ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಹೊಂದಲಿದ್ದು, ವಿದ್ಯಾರ್ಥಿಗಳು 21 ನೇ ಶತಮಾನದ ಕಲಿಕೆಯನ್ನು ಆರಂಭಿಸುವ ಮೂಲಕ ಜ್ಞಾನದ ಹೊಸ ಯುಗ ಆರಂಭವಾಗಲಿದೆ ಎಂದು ಉಪಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

World class learning aide in BBMP schools

ರಸ್ತೆಗುಂಡಿ ಮುಚ್ಚುವ ಗಂಡಾಗುಂಡಿ ತಡೆಗೆ ಕೋರ್ಟ್ ಕಮಿಷನ್ ನೇಮಕ ರಸ್ತೆಗುಂಡಿ ಮುಚ್ಚುವ ಗಂಡಾಗುಂಡಿ ತಡೆಗೆ ಕೋರ್ಟ್ ಕಮಿಷನ್ ನೇಮಕ

ಈ ತಂತ್ರಜ್ಞಾನದ ಜೊತೆಗೆ ಪರಿಸರ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಮೌಲ್ಯಾಧಾರಿತ ಕಲಿಕಾ ಕ್ರಮವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಜ್ಞಾನ ವೃದ್ಧಿಸಲಾಗುವುದು.

World class learning aide in BBMP schools

ಸಿಎಂ ಟ್ವೀಟ್ ಗೆ ಪ್ರತಿಕ್ರಿಯೆ: ಬಿಬಿಎಂಪಿಗೆ ಛೀ ಥೂ ಎಂದು ಉಗಿದ ಜನತೆ ಸಿಎಂ ಟ್ವೀಟ್ ಗೆ ಪ್ರತಿಕ್ರಿಯೆ: ಬಿಬಿಎಂಪಿಗೆ ಛೀ ಥೂ ಎಂದು ಉಗಿದ ಜನತೆ

ಅತ್ಯುತ್ತಮ ಶಿಕ್ಷಣ ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸುವುದು, ಶಿಕ್ಷಕರಿಗೆ 21 ನೇ ಶತಮಾನದ ಕೌಶಲ್ಯಗಳ ತರಬೇತಿ ನೀಡುವುದು, ಅನುಭವ ಆಧಾರಿತ ಕಲಿಕೆಯಲ್ಲಿ ಸಮುದಾಯವನ್ನು ಭಾಗಿಮಾಡುವುದು ಸೇರಿದಂತೆ ಇನ್ನು ಹಲವಾರು ಪ್ರಮುಖ ಚಟುವಟಿಕೆಗಳನ್ನು ಅಳವಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

English summary
For the first time in the world, a novel method Project Roshini to teach children by actively roping in several Information Technology companies including Microsoft has been launched in all schools coming under the Bruhat Bengaluru Mahanagara Palike limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X