ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ದಶಪಥ ರಸ್ತೆ ವಿಸ್ತರಣೆ, ಎಲ್ಲಿಯವರೆಗೆ?

|
Google Oneindia Kannada News

ಬೆಂಗಳೂರು, ಜನವರಿ 18: ಶೀಘ್ರ ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ಆರಂಭವಾಗಲಿದೆ. ಬೆಂಗಳೂರು ಹಾಗೂ ಮೈಸೂರು ನಡುವೆ ವಾಹನ ಸಂಚಾರ ದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275ನ್ನು 10 ಲೇನ್‌ಗಳಿಗೆ ವಿಸ್ತರಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.

7,400 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಬೆಂಗಳೂರು-ಮೈಸೂರು ನಡುವಿನ ರಸ್ತೆಯನ್ನು ನಾಲ್ಕು ಪಥಗಳ ಹೆದ್ದಾರಿ ರಸ್ತೆಯನ್ನಾಗಿ ಪರಿವರ್ತಿಸಿದರು.

.ಸೆಪ್ಟೆಂಬರ್‌ ಮೊದಲ ವಾರ ಬೆಂಗಳೂರು-ಮೈಸೂರು ಹೈವೇ ಕಾಮಗಾರಿ ಶುರು .ಸೆಪ್ಟೆಂಬರ್‌ ಮೊದಲ ವಾರ ಬೆಂಗಳೂರು-ಮೈಸೂರು ಹೈವೇ ಕಾಮಗಾರಿ ಶುರು

ವಾಹನ ದಟ್ಟಣೆ ಕೂಡ ಗಣನೀಯವಾಗಿ ಏರಿಕೆಯಾಯಿತು. 2014ರಲ್ಲಿ ಕೇಂದ್ರ ಸರ್ಕಾರ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಿ 8 ಪಥಗಳ ರಸ್ತೆಯನ್ನಾಗಿ ಪರಿವರ್ತಿಸಲು ನಿರ್ಧರಿಸಿತು.

ಪ್ಯಾಕೇಜ್ 1ರ ಹಂತದಲ್ಲೇನಿದೆ?

ಪ್ಯಾಕೇಜ್ 1ರ ಹಂತದಲ್ಲೇನಿದೆ?

ಕೆಂಗೇರಿಯಿಂದ ಬಿಡದಿ, ರಾಮನಗರ, ಚನ್ನಪಟ್ಟಣ ಮತ್ತು ಮದ್ದೂರು ತಾಲೂಕು ನಿಡಘಟ್ಟ ವರೆಗೆ 56.20 ಕಿ.ಮೀ ರಸ್ತೆ ವಿಸ್ತರಣೆಗೆ 348.76 ಹೆಕ್ಟೇರ್ ಭೂಮಿ ಬೇಕಾಗಿದೆ. ಈಗಿರುವ ರಸ್ತೆ ಸೇರಿ ಇಲಾಖೆಯ ಬಳಿ 129.19 ಹೆಕ್ಟೇರ್ ಭೂಮಿ ಇಲಾಖೆಯ ವಶದಲ್ಲಿದೆ. ಸರ್ಕಾರದ 14.43 ಹೆಕ್ಟೇರ್ ಭೂಮಿ ಸರ್ಕಾರಿ ಭೂಮಿಯಾಇದೆ.

ಬೈಪಾಸ್ ಎಲ್ಲೆಲ್ಲಿ?

ಬೈಪಾಸ್ ಎಲ್ಲೆಲ್ಲಿ?

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಹಂತ 1ರಲ್ಲಿ ಬಿಡದಿ, ರಾಮನಗರ ಮತ್ತು ಚನ್ನಪಟ್ಟಣ ಎರಡನೇ ಹಂತದಲ್ಲಿ ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ. ಬಿಡದಿಯಲ್ಲಿ 6.994 ಕಿ.ಮೀ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ 22.35 ಕಿ.ಮೀ, ಮದ್ದೂರಿನಲ್ಲಿ 4.459 ಕಿಮೀ, ಮಂಡ್ಯದಲ್ಲಿ 10.4 ಕಿ.ಮೀ ಉದ್ದದ ಬೈಪಾಸ್ ರಸ್ತೆಗಳು ನಿರ್ಮಾಣವಾಗಲಿವೆ.

ರಸ್ತೆ ವಿಸ್ತರಣೆ ಎಲ್ಲಿಂದ ಎಲ್ಲಿಯವರೆಗೆ

ರಸ್ತೆ ವಿಸ್ತರಣೆ ಎಲ್ಲಿಂದ ಎಲ್ಲಿಯವರೆಗೆ

ಬೆಂಗಳೂರು ಬಳಿಯ ಕೆಂಗೇರಿ ಹೊರವಲಯದಲ್ಲಿ ನೈಸ್ ರಸ್ತೆಯ ಬಳಿಯ ಪಂಚಮುಖಿ ದೇವಾಲಯದಿಂದ ಬೆಂಗಳೂರು ದಕ್ಷಿಣ ತಾಲೂಕು ಕುಂಬಳಗೋಡು, ಬಿಡದಿ, ರಾಮನಗರ, ಚನ್ನಪಟ್ಟಣೆ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದವರೆಗೆ 117.30 ಕಿ.ಮೀ ರಸ್ತೆಯನ್ನು 10 ಪಥಗಳ ರಸ್ತೆಯನ್ನಾಗಿ ಪರಿವರ್ತಿಸಲು ಮುಂದಾಗಿದೆ.

ರಾಮನಗರ, ಚನ್ನಪಟ್ಟಣ ಎಷ್ಟು ಕಿ.ಮೀ ರಸ್ತೆ

ರಾಮನಗರ, ಚನ್ನಪಟ್ಟಣ ಎಷ್ಟು ಕಿ.ಮೀ ರಸ್ತೆ

ರಾಮನಗರ ತಾಲೂಕಿನ 22 ಮತ್ತು ಚನ್ನಪಟ್ಟಣದ 12 ಗ್ರಾಮಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿವೆ. ರಾಮನಗರ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಉದ್ದ 30.27 ಕಿ.ಮೀ ಚನ್ನಪಟ್ಟಣ ಮೂಲಕ ಹಾದು ಹೋಗುವ ರಸ್ತೆಯ ಉದ್ದ 18.08ಕಿ.ಮೀ ಆಗಿದೆ.

English summary
Work on the 60-m wide 10-lane Bengaluru-Mysuru expressway project is expected to begin by February. The government has completed acquiring 2,200 acres needed for the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X