ಬೆಂಗಳೂರು: ಮಹಿಳಾ ದಿನವೇ ಮತ್ತೊಂದು ಗ್ಯಾಂಗ್ ರೇಪ್

Subscribe to Oneindia Kannada

ಬೆಂಗಳೂರು, ಮಾರ್ಚ್ ,08: ಮಹಿಳಾ ದಿನಾಚರಣೆ ದಿನವೇ ಸಾಮೂಹಿಕ ಅತ್ಯಾಚಾರದ ದೂರೊಂದು ದಾಖಲಾಗಿದೆ. 36 ವರ್ಷದ ಮಹಿಳೆ ನನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ದೂರು ದಾಖಲಿಸಿದ್ದಾರೆ.

ಸಂತ್ರಸ್ತ ಮಹಿಳೆ ಮಂಗಳವಾರ ಬೆಳಗ್ಗೆ ಎಚ್ ಎಸ್ ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಸೇರಿ ಮೂವರ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.[ಕೋಲ್ಕತಾ ಯುವತಿ ಮೇಲೆ ಬೆಂಗಳೂರಲ್ಲಿ ಗ್ಯಾಂಗ್ ರೇಪ್]

rape

ತಡವಾಗಿ ಬೆಳಕಿಗೆ ಬಂದಿರುವ ಗ್ಯಾಂಗ್ ರೇಪ್ ಅದರಲ್ಲೂ ಮಹಿಳಾ ದಿನಾಚರಣೆ ದಿನವೇ ದೂರು ದಾಖಲಾಗಿರುವುದು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ.[ಧಮ್ ಹೊಡೆಯೋದ್ರಲ್ಲೂ ಮಹಿಳೆಯರದ್ದೇ ಮೇಲುಗೈ!]

ಪ್ರಮುಖ ಆರೋಪಿ ಗ್ರಾಪಂ ಸದಸ್ಯ ಸಂತೋಷ್ ರೆಡ್ಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಈ ಆರೋಪಕ್ಕೆ ರೆಡ್ಡಿ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದು ಮಹಿಳೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಆರೋಪಿಸಿದ್ದಾರೆ. ಸೋಮವಾರ ಮಹಿಳೆ ಮನೆಗೆ ಮಾತುಕತೆಗೆಂದು ತೆರಳಿದ್ದ ಮೂವರ ಮೇಲೆ ಮಹಿಳೆ ದುರುದ್ದೇಶದಿಂದ ಅತ್ಯಾಚಾರ ದೂರು ದಾಖಲಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: One more gang rape incident came to light after a 36 year women registered complaint against Three people including a Grama Panchayath member. Victim women lodged complaint at HSR Layout Police station.
Please Wait while comments are loading...