ಗಣರಾಜ್ಯೋತ್ಸವದಿಂದ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ!

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 03 : ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಬೇಡಿಕೆ ಕನಸು ನನಸಾಗಲಿದೆ. ಜನವರಿ 26 ರಿಂದ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಜತೆಗೆ ಮೂರು ಬೋಗಿಗಳು ಮೆಟ್ರೋಗೆ ದೊರೆಯಲಿದೆ.

ಜನವರಿಯಲ್ಲಿ ಆರು ಬೋಗಿ ಮೆಟ್ರೋ ರೈಲು ಪ್ರಾಯೋಗಿಕ ಆರಂಭ

ಮೆಟ್ರೋದ ಮೂರು ಬೋಗಿ ರೈಲುಗಳನ್ನು ಆರು ಬೋಗಿಗಳನ್ನಾಗಿ ಪರಿವರ್ತಿಸಲು ಬಿಇಎಂಎಲ್ ಗೆ ಗುತ್ತಿಗೆ ನೀಡಲಾಗಿತ್ತು. ಜನವರಿ ಕೊನೆಯ ವಾರದಲ್ಲಿ ಮೂರು ಬೋಗಿಗಳು ಮೆಟ್ರೋಗೆ ದೊರೆಯಲಿದೆ. ಆದರೆ ಮೊದಲ ಎರಡು ತಿಂಗಳು ಈ ಬೋಗಿಗಳನ್ನು ಪರೀಕ್ಷಿಸಲಾಗುತ್ತದೆ.

Women will get separate coach in Namma Metro from Republic day

ಪರೀಕ್ಷೆಯಲ್ಲಿ ಬೋಗಿ ಉತ್ತಮವಾಗಿದೆ ಎಂದು ದೃಢಪಟ್ಟರೆ ಮಾತ್ರ ರೈಲಿಗೆ ಅಳವಡಿಸಲಾಗುತ್ತದೆ. ಆರು ಬೋಗಿಗಳನ್ನು ಒಳಗೊಂಡ ಮೆಟ್ರೋ ರೈಲುಗಳ ಸಂಚಾರ ಅಧಿಕೃತವಾಗಿ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದೆ. ಆರು ಬೋಗಿಗಳ ಪೈಕಿ ಮುಂಭಾಗದ ಬೋಗಿಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.

ಈ ಹಿಂದೆ ಬಿಎಂಆರ್ ಸಿಎಲ್ ಅಧ್ಯಯನ ನಡೆಸಿದ ಪ್ರಕಾರ ದಿನದ ಒಟ್ಟು ಪ್ರಯಾಣಿಕರು ಒಟ್ಟು ಪ್ರಯಾಣಿಕರಲ್ಲಿ ಮಹೀಲೆಯರು ಶೇ.೪೦ರಷ್ಟಿದ್ದಾರೆ. ಸಂಜೆ 6 ರಿಂದ 8 ಗಂಟೆಯವರೆಗೆ ಹಾಗು ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಮಹಿಳೆಯರಿಗೆ ಪ್ರಯಾಣಿಸಲು ಕಷ್ಟವಾಗುತ್ತಿದೆ.

ನಮ್ಮ ಮೆಟ್ರೋದಲ್ಲಿ ವಿಕಲಚೇತನಿರಿಗೂ ಪ್ರತ್ಯೇಕ ಬೋಗಿ ಸಾಧ್ಯತೆ

ಮೊದಲ ಮೂರು ಬೋಗಿ ನೀಡಿದ ಬಳಿಕ ಮೇ ಅಥವಾ ಜೂನ್ ನಲ್ಲಿ ಎಲ್ಲ ಬೋಗಿಗಳನ್ನು ನೀಡುವ ಪ್ರಕ್ರಿಯೆ ಆರಂಭವಾಗುತ್ತದೆ . ಪ್ರತಿ ತಿಂಗಳು ಎರಡರಿಂದ ಮೂರು ಬೋಗಿಗಳನ್ನು ಪೂರೈಸಲಾಗುತ್ತದೆ. 2019 ರ ಜೂನ್ ಗೆ ಎಲ್ಲಾ 150 ಬೋಗಿಗಳನ್ನು ಸರಬರಾಜು ಮಾಡಲಾಗುವುದು ಎಂದು ಬಿಇಎಂಎಲ್ ಅಧಿಕಾರಿಗಳು ಬಿಎಂಆರ್ ಸಿಎಲ್ ಗೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Women will get an exclusive coach in every metro train from Republic day extra Three news coaches will be added to the BMRCL.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ