ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಲಿಂಗಾನುಪಾತ ಪ್ರತಿಶತ 13 ಅಂಶಗಳಷ್ಟು ಸುಧಾರಣೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 19: ಹಿಂದಿನ 2013 ರ ವಿಧಾನಸಭಾ ಚುನಾವಣಾ ಸಂದರ್ಭಕ್ಕೆ ಹೋಲಿಸಿದಲ್ಲಿ ಪ್ರಸ್ತುತ 2018 ಕ್ಕೆ ಮಹಿಳಾ ಲಿಂಗಾನುಪಾತದಲ್ಲಿ ಪ್ರತಿಶತ 13 ಅಂಶಗಳಷ್ಟು ಸುಧಾರಣೆ ಕಂಡುಬಂದಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2017 ರ ನವೆಂಬರ್ 30 ರಿಂದ ಕರಡು ಮತದಾರರ ಪಟ್ಟಿ ಪ್ರಕಟಿಸಿದಾಗ ಲಿಂಗಾನುಪಾತ ಒಂದು ಅಂಶಗಳಷ್ಟು ಸುಧಾರಿಸಿದ್ದು ಹಿಂದಿನ ಅಂತಿಮ ಮತದಾರರ ಪಟ್ಟಿಗೆ 3 ಅಂಶಗಳಷ್ಟು ಮತ್ತು ಕಳೆದ ಚುನಾವಣೆಗೆ ಹೋಲಿಸಿದಲ್ಲಿ 13 ಅಂಶಗಳಷ್ಟು ಸುಧಾರಣೆಯಾಗಿದ್ದು, ಪ್ರತಿ ಸಾವಿರ ಪುರುಷರಿಗೆ 2018 ಕ್ಕೆ 972 ಮಹಿಳಾ ಮತದಾರರಿದ್ದಾರೆ ಎಂದರು.

Women voters increase 13 percent in the state

2018 ರ ಮತದಾರರ ಅಂತಿಮ ಪಟ್ಟಿಯನ್ನು ಫೆ.28 ರಂದು ಪ್ರಕಟಿಸಲಿದ್ದು, ಮತದಾರರ ಪಟ್ಟಿಯು ಮುಖ್ಯ ಚುನಾವಣಾಧಿಕಾರಿಯವರ ವೆಬ್ ಸೈಟ್ ಹಾಗೂ ಇಆರ್ ಓ ಹಾಗೂ ಎಇಆರ್ ಓ ಕಚೇರಿಯಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ. ಚುನಾವಣಾ ಆಯೋಗದ ಸೂಚನೆ ಪ್ರಕಾರ ವಿಶೇಷ ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆಯನ್ನು ನವೆಂಬರ್30 , 2017 ರಿಂದ ಫೆಬ್ರವರಿ 28 2018 ರವರೆಗೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಬಿಎಲ್ ಓಗಳು ಮನೆಯಿಂದ ಮನೆಗೆ ಭೇಟಿ ನೀಡಿ ಹೊಸ ಮತದಾರರ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.

English summary
State chief electoral officer Sanjeev Kumar revealed that comparing the last assembly poll in the state. the number of women voters increased up to 13 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X