ಬೆಂಗಳೂರು : ಕಾರು ಚಾಲಕನಿಂದ ಮಹಿಳೆ ದರೋಡೆ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 03 : ಕಾರು ಚಾಲಕ ಮಹಿಳೆಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 70 ಗ್ರಾಂ ಚಿನ್ನ, ಹಣ ಮತ್ತು ಕಾರಿನೊಂದಿಗೆ ಚಾಲಕ ಪರಾರಿಯಾಗಿರುವ ಚಾಲಕನಿಗೆ ಹುಡುಕಾಟ ನಡೆಯುತ್ತಿದೆ.

ಹುಳಿಮಾವುವಿನಲ್ಲಿರುವ ಸೌತ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಸುನಂದಾ ಎಂಬುವವರು ವಾಸವಾಗಿದ್ದು, ರಾಜೇಶ್ ಎಂಬಾತ ಅವರ ಕಾರು ಚಾಲಕನಾಗಿ ಕೆಲಸ ಮಾಡತ್ತಿದ್ದ. ಇಂದು ಮುಂಜಾನೆ ಅವರ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ರಾಜೇಶ್ ಮತ್ತು ಇತರ ಇಬ್ಬರು ಹಣ ದೋಚಿ ಪರಾರಿಯಾಗಿದ್ದಾರೆ.[ಪೊಲೀಸನ ವೇಷ ಧರಿಸಿ ಬಂದ ಅಸಲಿ ಕಾರು ಕಳ್ಳ!]

bengaluru police

ಹಣ ಮತ್ತು ಚಿನ್ನ ನೀಡುವಂತೆ ಮೊದಲು ಸುನಂದಾ ಅವರಿಗೆ ಬೆದರಿಕೆ ಹಾಕಿದ ರಾಜೇಶ್ ಮತ್ತು ಇತರ ಇಬ್ಬರು ನಂತರ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.[ಕೋಟಿ ಲೂಟಿ ನಡೆದಾಗ ಭದ್ರತಾ ಸಿಬ್ಬಂದಿಯೇ ಇರಲಿಲ್ಲ]

70 ಗ್ರಾಂ ಚಿನ್ನ, ಹಣ ಮತ್ತು ಟೊಯೋಟಾ ಇನ್ನೋವಾ ಕಾರಿನೊಂದಿಗೆ ರಾಜೇಶ್ ಮತ್ತು ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಹುಳಿಮಾವು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a shocking incident, a woman was stabbed and robbed by her cab driver at her apartments in Hulimavu, Bengaluru. The cab driver has been identified as Rajesh.
Please Wait while comments are loading...