ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್ ಅಂತ್ಯದಲ್ಲಿ ಬೆಂಗಳೂರು ರಸ್ತೆಗಿಳಿಯಲಿವೆ ಪಿಂಕ್ ಆಟೋ

|
Google Oneindia Kannada News

Recommended Video

ಸದ್ಯದಲ್ಲೇ ಬೆಂಗಳೂರಿನ ರಸ್ತೆಗೆ ಇಳಿಯಲಿವೆ 500 ಪಿಂಕ್ ಆಟೋಗಳು | Oneindia Kannada

ಬೆಂಗಳೂರು, ಜನವರಿ 30 : ಮಹಿಳಾ ಪ್ರಯಾಣಿಕರ ಸುರಕ್ಷತೆ ನಿಟ್ಟಿನಲ್ಲಿ ಸಿಸಿಟಿವಿ ಕ್ಯಾಮರಾ , ಜಿಪಿಎಸ್ ವ್ಯವಸ್ಥೆ ಹೊಂದಿರುವ ಹಾಗೂ ಮಹಿಳೆಯರಿಗಾಗಿಯೇ ಮೀಸಲಿರುವ ಪಿಂಕ್ ಆಟೋ ರಿಕ್ಷಾಗಳು ಮಾರ್ಚ್ ಅಂತ್ಯದೊಳಗೆ ನಗರದ ರಸ್ತೆಗಿಳಿಯಲಿದೆ.

ಬಿಬಿಎಂಪಿಯ ಕಲ್ಯಾಣ ಕಾರ್ಯಕ್ರಮದಡಿ ಪಿಂಕ್ ಆಟೋ ರಿಕ್ಷಾಗಳನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಲು ತೀರ್ಮಾನಿಸಲಾಗಿದೆ. 500ಪಿಂಕ್ ಆಟೋಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಪಾಲಿಕೆಯಿಂದ ೮೦ ಸಾವಿರ ರೂ. ಸಬ್ಸಿಡಿ ನೀಡಲಾಗುತ್ತದೆ. ಉಳಿದ ಹಣವನ್ನು ಫಲಾನುಭವಿಗಳೇ ಭರಿಸಬೇಕು. ಮಹಿಳೆಯರು ಮತ್ತು ಪುರುಷರಿಬ್ಬರಿಗೂ ಆಟೋಗಳನ್ನು ನೀಡಲಾಗುವುದು.

ಜನವರಿಯಿಂದ ಮಹಿಳೆಯರಿಗಾಗಿಯೇ ಪಿಂಕ್ ಆಟೋ!ಜನವರಿಯಿಂದ ಮಹಿಳೆಯರಿಗಾಗಿಯೇ ಪಿಂಕ್ ಆಟೋ!

ಆದರೆ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಬಿಬಿಎಂಪಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ತಕೀಬ್ ಜಾಕಿರ್ ತಿಳಿಸಿದ್ದಾರೆ.

Women safety enabled 500 pink autos Soon

ಪಿಂಕ್ ಆಟೋ ಪಡೆಯುವ ಪುರುಷರಿಗೆ ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಕುರಿತು ವಿಶೇಷ ತರಬೇತಿ ನೀಡಲಾಗುತ್ತದೆ. ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಆಟೋಗಳನ್ನು ವಿತರಣೆ ಮಾಡಲಾಗುತ್ತದೆ. ಬ್ರಿಗೇಡ್ ರಸ್ತೆ ಸೇರಿದಂತೆ ಕೆಲವೆಡೆ ವಾಹನ ನಿಲುಗಡೆ ತಾಣಗಳಲ್ಲಿ ಈಗಾಗಲೇ ಶೇ.20 ರಷ್ಟು ಜಾಗವನ್ನು ಮಹಿಳೆಯರಿಗೆ ಮೀಸಲಿಡಲು ಪಾಲಿಕೆ ಕ್ರಮ ಕೈಗೊಂಡಿದೆ. ನಗರದಲ್ಲಿ ಪಿಂಕ್ ಹೊಯ್ಸಳಗಳು ರಸ್ತೆಗೆ ಬಂದಿವೆ. ಮೆಟ್ರೋ ರೈಲಿನಲ್ಲಿಯೂ ಮಹಿಳಾ ಚಾಲಕಿಯರಿದ್ದಾರೆ.

English summary
BBMP will distribute 500 pink autorickshaws by end of March. These exclusive women autos have been enabled with CCTV cameras and GPS inside.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X