ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರಿಗಾಗಿ B.PAC ನಿಂದ ವಿನೂತನ ಕಾರ್ಯಕ್ರಮ

ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಸಲುವಾಗಿ ಏಪ್ರಿಲ್ 24 ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮವೊಂದನ್ನು B.PAC ಸಂಸ್ಥೆ ಹಮ್ಮಿಕೊಂಡಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 21: ಬೆಂಗಳೂರಿಗರಿಗಾಗಿ ಸದಾ ಒಂದಿಲ್ಲೊಂದು ಜಾಗೃತಿ ಕಾರ್ಯಕ್ರಮ ಮಾಡುತ್ತಿರುವ ಬಿ ಪ್ಯಾಕ್ (B.PAC) ಸಂಸ್ಥೆ ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಸಲುವಾಗಿ ಏಪ್ರಿಲ್ 24 ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಏಪ್ರಿಲ್ 24 ಅನ್ನು ಮಹಿಳೆಯರ ರಾಜಕೀಯ ಸಬಲೀಕರಣ ದಿನವನ್ನಾಗಿ ರಾಷ್ಟ್ರ ಮಟ್ಟದಲ್ಲಿ ಆಚರಿಸಲಾಗುತ್ತದೆ. ಈ ಪ್ರಯುಕ್ತ ಹಿರಿಯ ಮತ್ತು ಸಮಕಾಲೀನ ಮುಖಂಡರೊಂದಿಗೆ ರಾಜಕೀಯದಲ್ಲಿ ಮಹಿಳೆಯರ ಹಾದಿಯ ಕುರಿತು ಚರ್ಚೆ ಮತ್ತು ಸಂವಾದ ನಡೆಸುವುದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. [ಬೆಂಗಳೂರು ಮಂಡ್ಯದಲ್ಲಿ ರಾಮಾನುಜ ಸಹಸ್ರ ಸಂಭ್ರಮ]

'Women's Political Empowerment Day' in Bengaluru

ಇಂದು ರಾಜಕೀಯ ಕ್ಷೇತ್ರವೆಂಬುದು ಯಾವ ಮಹಿಳೆಯರಿಗೂ ಹೊಸತಾಗಿಲ್ಲ. ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಶೇ.52 ರಷ್ಟು ಮಹಿಳೆಯರು ಭಾಗವಹಿಸಿದ್ದು, ಮಹಿಳೆಯರಿಗೆ ಈ ಕ್ಷೇತ್ರ ಹೊಸತೇನಲ್ಲ ಎಂಬುದಕ್ಕೆ ಸಾಕ್ಷಿ.
ಆದರೂ ರಾಜಕೀಯದಲ್ಲಿ ಮಹಿಳೆಯ ಹಾದಿ ಅಷ್ಟು ಸುಲಭವೂ ಅಲ್ಲ. ಈ ಹಾದಿಯಲ್ಲಿ ಸಾಕಷ್ಟು ಏರುಪೇರುಗಳನ್ನೂ ಎದುರಿಸಬೇಕಾಗುತ್ತದೆ. ಅದಕ್ಕೆಂದೇ ಮಹಿಳೆಯರಲ್ಲಿ ಮತ್ತಷ್ಟು ರಾಜಕೀಯ ಪ್ರಜ್ಞೆ ಮೂಡಿಸುವ ಸಲುವಾಗಿ ಬಿ ಪ್ಯಾಕ್ ಈ ಕಾರ್ಯಕ್ರಮ ಆಯೋಜಿಸಿದೆ.

ಬಿ ಬ್ಯಾಕ್ ಸಂಸ್ಥೆಯು ಸಿವಿಕ್ ಲೀಡರ್ಶಿಪ್ ಇನ್ಕ್ಯುಬೇಟರ್ ಯೋಜನೆಯಡಿಯಲ್ಲಿ ಹಲವು ಮಹಿಳಾ ರಾಜಕೀಯ ಮುಖಂಡರ ಸಂಪರ್ಕವನ್ನು ಹೊಂದಿದ್ದು, ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಸಲಿದೆ.
ಸಂಜೆ 5 ರಿಂದ 5:30 ರವರೆಗೆ ಮಹಿಳಾ ಮುಖಂಡರ ಹಾದಿ ಮತ್ತು ಸವಾಲನ್ನು ಎದುರಿಸುವ ಬಗೆ( Women Leader's Journey and how to overcome the challenges) ಎಂಬ ವಿಷಯದ ಕುರಿತು ಮುಕ್ತ ಚರ್ಚೆ ನಡೆಯಲಿದೆ.
5:30 ರಿಂದ 6:15 ರವರೆಗೆ ಹಿರಿಯ ನಾಯಕರೊಂದಿಗೆ ಸಂವಾದ ನಡೆಸಬಹುದಾಗಿದೆ.
ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ

English summary
B.PAC is celebrating 'Women's Political Empowerment Day' - a program to celebrate and interact with senior leaders and fellow contemporaries on 24th April, 2017 from 5 p.m. onwards at Bharatiya Vidya Bhavan, Racecourse road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X