ಟ್ರಂಪ್, ದೌರ್ಜನ್ಯದ ವಿರುದ್ಧ ಬೆಂಗಳೂರಿನಲ್ಲಿ ಸಿಡಿದೆದ್ದ ಮಹಿಳಾಮಣಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 22 : ಶನಿವಾರ ಎಲ್ಲೆಲ್ಲೂ ಪ್ರತಿಭಟನೆಗಳ ದಿನವಾಗಿತ್ತು. ಒಂದೆಡೆ ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಪರವಾಗಿ ಪ್ರತಿಭಟನೆ ನಡೆಯುತ್ತಿದ್ದರೆ, ಇಡೀ ದೇಶದಲ್ಲಿ ಮಹಿಳಾಮಣಿಗಳು ಹಲವಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು.

ಬೆಂಗಳೂರಿನಲ್ಲಿ ವರ್ಷಾಂತ್ಯದ ದಿನ ಏನು ನಡೆದಿತ್ತೆಂದು ಖಚಿತವಾಗಿ ಹೇಳುವ ಸಿಸಿಟಿವಿ ವಿಡಿಯೋ ಲಭ್ಯವಿಲ್ಲದಿದ್ದರೂ, ಅಂದು ರಾತ್ರಿ ಮಹಿಳೆಯರ ಮೇಲೆ ನಡೆದಿರುವ ದೈಹಿಕ ಹಲ್ಲೆ, ಲೈಂಗಿಕ ದೌರ್ಜನ್ಯವನ್ನು ಬೆಂಗಳೂರಿನ ಪೊಲೀಸರೂ ಅಲ್ಲಗಳೆಯುವುದಿಲ್ಲ. ಅಂದು ಹೊತ್ತಿಕೊಂಡ ಆಕ್ರೋಶದ ಕಿಡಿ ಇನ್ನೂ ಆರಿಲ್ಲ.

ಹಗಲಲ್ಲಿ ಮಾತ್ರವಲ್ಲ ಇರುಳಿನ ಯಾವುದೇ ಸಮಯದಲ್ಲಿ ಸ್ವಚ್ಛಂದವಾಗಿ ಭಯವಿಲ್ಲದೆ ತಿರುಗಾಡಲು ನಮಗೆ ಸ್ವಾತಂತ್ರ್ಯ ಬೇಕೇಬೇಕು ಎಂದು ದೇಶದಾದ್ಯಂತ ಮಹಿಳೆಯರು ಕಪ್ಪು ಟಿಶರ್ಟ್ ಧರಿಸಿಕೊಂಡು ಶನಿವಾರ ಕೂಗು ಹಾಕಿದರು. #IWillGoOut ಎಂಬ ಹ್ಯಾಶ್ ಟ್ಯಾಗ್ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು.

ಇನ್ನು ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವಿಧಿ ಸ್ವೀಕರಿಸಿದ ಕೂಡಲೆ ವಾಷಿಂಗ್ಟನ್ ಡಿಸಿಯಲ್ಲಿ ಮಾತ್ರವಲ್ಲ, ಅವರ ವಿರುದ್ಧ ಬೆಂಗಳೂರಿನಲ್ಲಿಯೂ ಜನರು ಪ್ರತಿಭಟನೆ ನಡೆಸಿದ್ದಾರೆ. ಅದರಲ್ಲಿಯೂ, ಬೆಂಗಳೂರಿನ ಮಹಿಳೆಯರು ಶನಿವಾರ ಟ್ರಂಪ್ ವಿರುದ್ಧ ಘೋಷಣೆಗಳನ್ನು ಕೂಗಿದರು. [ದಯವಿಟ್ಟು ತಬ್ಕೊತಿಯಾ ಅಂದ ಮಣಿಕಾಂತ ಆದ ಅಂದರ್]

ಡಂಪ್ ದಿ ಟ್ರಂಪ್

ಡಂಪ್ ದಿ ಟ್ರಂಪ್

ಮಹಿಳೆಯರನ್ನು ಡೊನಾಲ್ಡ್ ಟ್ರಂಪ್ ಯಾವ ರೀತಿ ಕಾಣುತ್ತಿದ್ದರು, ಅವರಿಗೆ ಎಂಥ ಮರ್ಯಾದೆ ಕೊಡುತ್ತಿದ್ದರು ಎಂಬುದು ಇಡೀ ಜಗತ್ತಿಗೇ ತಿಳಿದ ವಿಷಯ. ಮಹಿಳೆಯರನ್ನು ಟ್ರಂಪ್ ಅಗೌರವದಿಂದ ಕಾಣುತ್ತಾರೆಂದು ಶನಿವಾರ ಮಹಿಳಾಮಣಿಗಳು ಬೀದಿಗಿಳಿದು, ಭಿತ್ತಿಚಿತ್ರ ಹಿಡಿದು ತಮ್ಮ ಅಸಂತೋಷ ವ್ಯಕ್ತಪಡಿಸಿದರು. [ಟ್ರಂಪ್ ಭವಿ‍ಷ್ಯ: ಮೇಟಿಯಂತಹ ಪ್ರಕರಣ ವೈಟ್ ಹೌಸ್ ಮುತ್ತಿಡಲಿವೆ]

ಮುಸ್ಲಿಂರನ್ನು ಕಂಡರೆ ಟ್ರಂಪ್ ಗೆ ಭಯವೇಕೆ

ಮುಸ್ಲಿಂರನ್ನು ಕಂಡರೆ ಟ್ರಂಪ್ ಗೆ ಭಯವೇಕೆ

ಉಗ್ರವಾದ ಬಿತ್ತುತ್ತಿರುವ ಭಯೋತ್ಪಾದಕರನ್ನು ಇಡೀ ಜಗತ್ತಿನಿಂದಲೇ ಸವರಿ ಹಾಕುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಮಾಣವಚನ ಸ್ವೀಕರಿಸುವಾಗ ಹೂಂಕರಿಸಿದ್ದರು. ಟ್ರಂಪ್ ಅವರಿಗೆ ಮುಸ್ಲಿಂರ ಭಯವೇಕೆ ಎಂದು ಮಹಿಳಾಮಣಿಗಳು ಬೆಂಗಳೂರಿನಲ್ಲಿ ಕೇಳುತ್ತಿದ್ದಾರೆ. ಏನಂತಾರೆ ಟ್ರಂಪ್? [ಟ್ರಂಪ್ ಬದುಕಿನ 10 ಇಂಟರೆಸ್ಟಿಂಗ್ ಅಂಶಗಳು]

ಹೂವಿನಂಥ ಹುಡುಗಿ

ಹೂವಿನಂಥ ಹುಡುಗಿ

ನಾವು ರಾತ್ರಿ ಎಷ್ಟು ಹೊತ್ತಿನಲ್ಲಿ ಬೇಕಾದರೂ, ಎಂಥ ಬಟ್ಟೆ ಧರಿಸಿಯಾದರೂ ತಿರುಗಾಡುತ್ತೇವೆ. ನಮ್ಮ ಮೇಲೆ ದೌರ್ಜನ್ಯ ನಡೆಸುವುದನ್ನು ನಾವು ಸಹಿಸುವುದಿಲ್ಲ ಎಂದು ಬೆಂಗಳೂರಿನಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಮಹಿಳೆಯರು ಕೇಳುತ್ತಿದ್ದಾರೆ. ಇಲ್ಲಿ ನೋಡಿ ಓರ್ವ ಮಹಿಳೆ ತಲೆ ಮೇಲೆ ಹೂವಿನ ಕಿರೀಟ ಧರಿಸಿ, ಸ್ವಲ್ಪ ಪ್ರಚೋದಕ ಬಟ್ಟೆ ಧರಿಸಿ ಪ್ರತಿಭಟಿಸುತ್ತಿರುವುದು. [ಕಮ್ಮನಹಳ್ಳಿ ಪುಂಡರನ್ನು ಪೊಲೀಸರು ಬಂಧಿಸಿದ್ದು ಹೇಗೆ?]

ಡೊನಾಲ್ಡ್ ಅವರೇ ನಮಗೆ ಬದಲಾದ ಜಗತ್ತು ಬೇಕು

ಡೊನಾಲ್ಡ್ ಅವರೇ ನಮಗೆ ಬದಲಾದ ಜಗತ್ತು ಬೇಕು

ನಾವು ಈರೀತಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದಿದ್ದರೆ ದಯವಿಟ್ಟು ಕ್ಷಮಿಸಿ. ನಮಗೆ ಬದಲಾದ ಜಗತ್ತು ಬೇಕು ಎಂದು ಬೆಂಗಳೂರಿನಲ್ಲಿ ಮಹಿಳೆಯರು ಶಾಂತಿಯುತವಾಗಿಯೇ ಟ್ರಂಪ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಈ ಪ್ರತಿಭಟನೆಯಲ್ಲಿ ಪುರುಷರು ಕೂಡ ಭಾಗವಹಿಸಿದ್ದರು.

ಬೇಕೇಬೇಕು ಜಲ್ಲಿಕಟ್ಟು ಬೇಕು

ಬೇಕೇಬೇಕು ಜಲ್ಲಿಕಟ್ಟು ಬೇಕು

ಜಲ್ಲಿಕಟ್ಟು ಕ್ರೀಡೆಯನ್ನು ತಮಿಳುನಾಡಿನಲ್ಲಿ ಆಚರಿಸಲು, ಸುಗ್ರೀವಾಜ್ಞೆ ಹೊರಡಿಸಿ ಅನುಮತಿ ನೀಡಲಾಗಿದ್ದರೆ, ಇಲ್ಲಿ ಬೆಂಗಳೂರಿನಲ್ಲಿಯೂ ನಡೆಸಲು ಅವಕಾಶ ಮಾಡಿಕೊಂಡಿ ಎಂದು ಇಲ್ಲಿನ ತಮಿಳರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಂಬಳಕ್ಕೇ ಅನುಮತಿ ನೀಡಿಲ್ಲ ಕರ್ನಾಟಕದಲ್ಲಿ, ಜಲ್ಲಿಕಟ್ಟಿಗೆ ಅನುಮತಿ ನೀಡಬೇಕಾ? [ಜಲ್ಲಿಕಟ್ಟಿಗೆ ಇಬ್ಬರು ಬಲಿ, 57ಕ್ಕೂ ಹೆಚ್ಚು ಜನರಿಗೆ ಗಾಯ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hundreds of women protested against Americal President Donald Trump in Bengaluru. They flashed the placards alleging him of misoginist, toxically islamophobic. Women also protested in Bengaluru against sexual harassment and in favour of Jallikattu.
Please Wait while comments are loading...