ರಾಜಕೀಯದಲ್ಲಿ ಮಹಿಳೆಯರ ಪಾತ್ರ ಏನು? ಸಂವಾದ

Written By:
Subscribe to Oneindia Kannada

ಬೆಂಗಳೂರು, ಮೇ. 17: ಭಾರತೀಯ ವಿದ್ಯಾಭವನದಲ್ಲಿ ಬಿ.ಪ್ಯಾಕ್ ಸಂಸ್ಥೆಯು ಆಶ್ರಯದಲ್ಲಿ ಉತ್ತಮ ಆಡಳಿತ ಮತ್ತು ರಾಜಕೀಯದಲ್ಲಿ ಮಹಿಳೆಯರು ಎಂಬ ವಿಷಯದ ಮೇಲೆ ಮಂಗಳವಾರ ಸಂವಾದ ನಡೆಯಿತು.

ಅಮೆರಿಕ ರಾಜಧೂತ ಕಚೇರಿ , ಚೆನೈ ಹಾಗೂ ಅಮೆಕನ್ ಕರ್ನಾರ್ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗ್ಲೋಬಲ್ ಇನಿಶಿಯೇಟಿವ್ ನ ನಿರ್ದೇಶಕಿ ಮಿಚಲ್ ಬೆಕ್ಕರಿಂಗ್ ಮಾತನಾಡಿದರು. [ಆಕೆ ಅನುಭವಿಸುತ್ತಿದ್ದ ತಾಯ್ತನದ ಆನಂದ ವರ್ಣಿಸಲು ಅಸಾಧ್ಯ]

womem

ಸಂವಾದಕ್ಕೂ ಮೊದಲು ಮಾತನಾಡಿದ ಉಪಮೇಯರ್ ಹೇಮಲತಾ ಗೋಪಾಲಯ್ಯ, ಬಿಬಿಎಂಪಿಯ 198 ಕಾರ್ಪೋರೇಟರ್ ಗಳಲ್ಲಿ 105 ಮಹಿಳಾ ಕಾರ್ಪೋರೇಟರ್ ಳಿದ್ದಾರೆ, ಬೆಂಗಳೂರಿನಲ್ಲಿ ಮಹಿಳೆಯರ ರಾಜಕೀಯ ಸಹಭಾಗಿತ್ವ ಉತ್ತಮವಾಗಿದೆ. ಇನ್ನು ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಬೇಕು ಎಂದು ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರಿನ 60ಕ್ಕೂ ಹೆಚ್ಚು ನಗರಾಡಳಿತ ಹಾಗೂ ಸಾರ್ವಜನಿಕ ಇತಾಸಕ್ತಿಯುಳ್ಳ ವ್ಯಕ್ತಿಗಳು ಮತ್ತು ಬಿ.ಕ್ಲಿಪ್ ಸದಸ್ಯರು ಭಾಗವಹಿಸಿದ್ದರು.

-
-
-
-

ಮಿಚ್ಚಲ್ ಬೆಕ್ಕರಿಂಗ್ ಚರ್ಚೆಯಲ್ಲಿ ಪಾಲ್ಗೊಂಡು ಅಮೇರಿಕಾ ದೇಶದಲ್ಲೂ ರಾಜಕೀಯ ವ್ಯವಸ್ತೆಯಲ್ಲಿ ಬಂಡವಾಳ ಶಾಯಿಗಳ ಪ್ರಾಬಲ್ಯ ಹೆಚ್ಚಾಗಿದೆ. ಹಣದ ಪ್ರಭಾವ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಬಿ.ಪ್ಯಾಕ್ ಸಂಸ್ಥೆಯ ಸದಸ್ಯ ಅನೀಲ್ ಶೆಟ್ಟಿ ಹಾಗೂ ಸುಜಾತ ಪುರಾಣಿಕ್ ಕಾರ್ಯಕ್ರಮ ನಡೆಸಿಕೊಟ್ಟರು.

ಸಂವಾದ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಸಂಚಾಲಕರಾದ ಪೃಥ್ವಿರೆಡ್ಡಿ, ಮಾಹಿತಿ ಹಕ್ಕು ಕಾರ್ಯಕರ್ತ ವಿಕ್ರಮ್ ಸಿಂಹ, ಹಿಂದೂ ಮಹಾಸಭಾದ ರಾಷ್ಟೀಯ ಸಂಚಾಲಕ ವಾಸುದೇವರಾವ್ ಕಷ್ಯಪ್, ಕನ್ನಡ ಚಳವಳಿಗಾರ ಕೊ.ನ.ನಾಗರಾಜು, ಅಮೆರಿಕ ರಾಜಧೂತ ಕಚೇರಿಯ ಮುಖ್ಯಸ್ಥೆ ಉಷಾ ಮುಂತಾದವರು ಭಾಗವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Women should stop waiting and take the plunge into politics, said Michelle Bekkering, director, global initiatives and senior gender adviser at International Republican Institute (IRI). To talk about Good governance and gender in politics, organized by the American Corner and Bangalore Political Action Committee (B.PAC).
Please Wait while comments are loading...