ಬಿಎಂಟಿಸಿ ಬಸ್ ಡಿಕ್ಕಿ, ಶಿವಾಜಿನಗರ ನಿಲ್ದಾಣದಲ್ಲಿ ಮಹಿಳೆ ಸಾವು

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 14 : ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಮೃತಪಟ್ಟ ಮಹಿಳೆ ಬಿಎಂಟಿಸಿಯಲ್ಲಿಯೇ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು.

ಮೃತಪಟ್ಟವರನ್ನು ಮದ್ದೂರಮ್ಮನಪಾಳ್ಯದ ನಿವಾಸಿ ಸರೋಜಮ್ಮ (55) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ 9.40ರ ಸುಮಾರಿಗೆ ಸರೋಜಮ್ಮ ಅವರು ಫ್ಲ್ಯಾಟ್‌ ಫಾರಂ ನಂ 5ರಲ್ಲಿ ಸ್ವಚ್ಚತಾ ಕಾರ್ಯ ಮಾಡುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. [ಅಂದ ಹಾಗೆ ಈ ಕಂಡಕ್ಟರ್ ಹೆಸರು ತಾಂಡಚಂದ್!]

sarojamma

ಸರೋಜಮ್ಮ ಅವರು ಕೆಲಸ ಮಾಡುತ್ತಿದ್ದ ವೇಳೆ ಡಿಪೋ ನಂ 16ರ ಬಸ್ ನಿಲ್ದಾಣಕ್ಕೆ ಬಂದಿದೆ. ಬಸ್ ಮುಂದೆ ಹೋಗಿದೆ ಎಂದು ತಿಳಿದ ಸರೋಜಮ್ಮ ಅವರು ಕೆಲಸ ಮುಂದುವರೆಸಿದ್ದರು. ಫ್ಲ್ಯಾಟ್‌ ಫಾರಂನಲ್ಲಿ ಬಸ್ ನಿಲ್ಲಿಸಲು ಚಾಲಕ ಬಸ್ಸನ್ನು ವಾಪಸ್ ತೆಗೆದುಕೊಂಡಾಗ ಅದರಡಿ ಸಿಲುಕಿ ಅವರು ಗಂಭೀರವಾಗಿ ಗಾಯಗೊಂಡರು. [ಚಿತ್ರಗಳು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಪಘಾತ]

ತಕ್ಷಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಶಿವಾಜಿನಗರ ಠಾಣೆ ಪೊಲೀಸರು ಚಾಲಕನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. [ಬಿಎಂಟಿಸಿ ಮಾಸಿಕ ಪಾಸು ಪಡೆಯುವುದು ಹೇಗೆ?]

ಹಿಂದಿನ ಪ್ರಕರಣಗಳು

* 2015ರ ಅಕ್ಟೋಬರ್ 19ರಂದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಮೃತಪಟ್ಟ ವಿದ್ಯಾರ್ಥಿನಿ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.

* 2015ರ ಜುಲೈ 28ರಂದು ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore Metropolitan Transport Corporation (BMTC) contract labourer Sarojamma (55) killed in accident at Shivajinagar bus station on Monday, March 14th, 2016.
Please Wait while comments are loading...