10ನೇ ಮಹಡಿಯಿಂದ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 22: ಗೋವಾ ಮೂಲದ ಮಹಿಳಾ ಟೆಕ್ಕಿಯೊಬ್ಬರು ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆಸ್ನಾ ಬಿಸಿನೆಸ್ ಟೆಕ್ನಾಲಜಿ ಪಾರ್ಕಿನಲ್ಲಿ ನಡೆದಿದೆ.

ಮೃತ ಟೆಕ್ಕಿಯನ್ನು ಗೋವಾ ಮೂಲದ 27 ವರ್ಷ ವಯಸ್ಸಿನ ಗೀತಾಂಜಲಿ ಎಂದು ಗುರುತಿಸಲಾಗಿದೆ .ಟೆಕ್ ಪಾರ್ಕಿನಲ್ಲಿದ್ದ ತಮ್ಮ ಕಚೇರಿಯ 10ನೇ ಮಹಡಿ ಮೇಲಿಂದ ಹಾರಿ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮಾರತ್ ಹಳ್ಳಿ ಪೊಲೀಸರು ಆಗಮಿಸಿದ್ದು, ಮಹಜರು ಮಾಡಿ, ಪರಿಶೀಲನೆ ನಡೆಸಿದ್ದಾರೆ.

Woman techie commits suicide Cessna Business Park

ಸೆಸ್ನಾ ಬಿಸಿನೆಸ್ ಟೆಕ್ನಾಲಜಿ ಪಾರ್ಕಿನಲ್ಲಿರುವ ಅಲೋಫ್ ಎಂಬ ಕಂಪನಿಯಲ್ಲಿ ಗೀತಾಂಜಲಿ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ಇಂದು ಬೆಳಗ್ಗೆ ಕಚೇರಿಗೆ ಬಂದಿದ್ದಾರೆ. ಬೆಳಗ್ಗೆ ಚಹಾ ಸಮಯಕ್ಕೆ ತಮ್ಮ ಡೆಸ್ಕ್ ನಿಂದ ಹೊರಟವರು ನೇರ ಕಟ್ಟಡದ ಮೇಲಕ್ಕೆ ಹೋಗಿ ಅಲ್ಲಿಂದ ಹಾರಿದ್ದಾರೆ. ಅವರ ಡೆಸ್ಕ್ ಬಳಿ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ. ಅವರ ಲ್ಯಾಪ್ ಟಾಪ್, ಬ್ಯಾಗ್ ಪರಿಶೀಲಿಸಲಾಗುತ್ತಿದೆ. ಗೀತಾಂಜಲಿ ಅವರ ಸಹದ್ಯೋಗಿಗಳನ್ನು ಈ ಬಗ್ಗೆ ಪ್ರಶ್ನಿಸಲಾಗುತ್ತಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಮಾರತ್ ಹಳ್ಳಿ ಪೊಲೀಸರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A woman techie committed suicide today(November 22) by jumping from tenth floor of office building at Cessna Business Park, Kadubeesanahalli near Marathahalli, Bengaluru

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ