ಪಿಎಸ್‌ಐ ರೂಪಾ ಆತ್ಮಹತ್ಯೆ ಯತ್ನ, ವರದಿ ಕೇಳಿದ ಪರಮೇಶ್ವರ

Posted By:
Subscribe to Oneindia Kannada

ಬೆಂಗಳೂರು, ಜುಲೈ 20 : ವಿಜಯನಗರ ಠಾಣೆಯ ಪಿಎಸ್‌ಐ ರೂಪಾ ಅವರ ಆತ್ಮಹತ್ಯೆ ಯತ್ನ ಪ್ರಕರಣದ ಕುರಿತು ವರದಿ ನೀಡುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸೂಚನೆ ನೀಡಿದ್ದಾರೆ. ರೂಪಾ ಅವರ ಆರೋಗ್ಯದ ಬಗ್ಗೆ ಎರಡು ದಿನಗಳ ಕಾಲ ಏನೂ ಹೇಳಲಾಗುವುದಿಲ್ಲ ಎಂದು ವೈದ್ಯರು ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಪರಮೇಶ್ವರ ಅವರು, 'ಪಿಎಸ್‌ಐ ರೂಪಾ ತಂಬದ ಅವರ ಆತ್ಮಹತ್ಯೆ ಯತ್ನಕ್ಕೆ ನಿಖರವಾದ ಕಾರಣವೇನು? ಎಂದು ತಿಳಿದುಬಂದಿಲ್ಲ. ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ' ಎಂದರು.[ಆತ್ಮಹತ್ಯೆಗೆ ಯತ್ನಿಸಿದ ಪಿಎಸ್ ಐ ರೂಪಾ]

Woman PSI attempts suicide : Home minister seeks report

'ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಯಾವುದೇ ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸಮಸ್ಯೆ ಇದ್ದರೆ ಬಂದು ಹೇಳಿ, ನಾವು ಬಗೆಹರಿಸುತ್ತೇವೆ. ಆತ್ಮಹತ್ಯೆಯ ದಾರಿ ತುಳಿಯಬೇಡಿ' ಎಂದು ಪರಮೇಶ್ವರ ಅವರು ಮನವಿ ಮಾಡಿದರು.[ಪೊಲೀಸರ ಆತ್ಮಹತ್ಯೆಗೆ ಪ್ರಮುಖ ಕಾರಣಗಳೇನು?]

ಆರೋಗ್ಯದಲ್ಲಿ ಚೇತರಿಕೆ : ಆತ್ಮಹತ್ಯೆಗೆ ಯತ್ನಿಸಿದ ಪಿಎಸ್‌ಐ ರೂಪಾ ಅವರು ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 'ರೂಪಾ ಅವರ ಆರೋಗ್ಯದ ಬಗ್ಗೆ ಎರಡು ದಿನಗಳ ಕಾಲ ಏನೂ ಹೇಳಲಾಗುವುದಿಲ್ಲ' ಎಂದು ಡಾ.ಶಶಿಕುಮಾರ್ ಹೇಳಿದರು.

Also Read : ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline

ಬುಧವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ರೂಪಾ ಅವರ ಆರೋಗ್ಯ ನಿನ್ನೆಗಿಂತ ಇಂದು ಚೇತರಿಕೆಯಾಗಿದೆ. ಎಲ್ಲರನ್ನು ಗುರುತಿಸುತ್ತಿದ್ದಾರೆ. ಮಾತ್ರೆಗಳನ್ನು ಸೇವಿಸಿರುವ ಕಾರಣ ಲಿವರ್‌ ಡ್ಯಾಮೇಜ್ ಆಗುವ ಸಾಧ್ಯತೆ ಇದೆ' ಎಂದರು.

ಡಿವೈಎಸ್‌ಪಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಅವರು ಪೊಲೀಸರಿಗೆ ಬಹಿರಂಗ ಪತ್ರ ಬರೆದಿದ್ದರು. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಕಿರುಕುಳವಿದ್ದರೆ ರಾಜೀನಾಮೆ ಕೊಟ್ಟು ಹೊರಬರುವಂತೆ ಕರೆ ನೀಡಿದ್ದರು.[ರಾಜೀನಾಮೆ ನೀಡಿದ್ದೇಕೆ? ಅನುಪಮಾ ಶೆಣೈ ಪತ್ರದಿಂದ ಬಹಿರಂಗ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Home minister Dr.G.Parameshwara has sought a report on PSI Roopa Tembad suicide attempt case. Vijayanagar police station PSI Roopa attempted suicide on July 19th evening alleging harassment by seniors.
Please Wait while comments are loading...