ಲೈಂಗಿಕ ಕ್ರಿಯೆಗೆ ಪೀಡಿಸಿದ ಬಾಯ್ ಫ್ರೆಂಡ್ ಗತಿ ಆಗಿದ್ದೇನು?

Posted By:
Subscribe to Oneindia Kannada

ಬೆಂಗಳೂರು. ನವೆಂಬರ್ 04 : ತನ್ನ ಜತೆ ಲೈಂಗಿಕ ಕ್ರಿಯೆ ಮಾಡುವಂತೆ ಒತ್ತಾಯ ಮಾಡುತ್ತಿದ್ದ ಬಾಯ್ ಫ್ರೆಂಡ್ ವರ್ತನೆಯಿಂದ ಬೇಸತ್ತು ಪ್ರಿಯತಮೆ ಪ್ರಿಯಕರನನ್ನು ಕೊಲೆ ಮಾಡಿದ್ದಾಳೆ.

ಈ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಕರ ಮುತ್ತುರಾಜ್ ನನ್ನು ಪ್ರೇಯಸಿ ಸುನಂದಾ ಎಂಬಾಕೆ ಕೊಲೆ ಮಾಡಿದ್ದಾಳೆ.

woman killed her boyfriend who forced for sexual in Bengaluru

ಖಾಸಗಿ ಬಸ್ ನಿರ್ವಾಹಕನಾಗಿರೋ ಮುತ್ತುರಾಜ್ ಸುನಂದಾ ಎಂಬಾಕೆಯನ್ನು ಪ್ರೀತಿಸುತ್ತಿದ್ದನು. ಅಲ್ಲದೇ ಪ್ರತಿನಿತ್ಯ ಕುಡಿದು ತನ್ನೊಂದಿಗೆ ಲೈಂಗಿಕ ಕ್ರಿಯೆ ಮಾಡುವಂತೆ ಒತ್ತಡ ಹೇರುತ್ತಿದ್ದನು. ಇದರಿಂದ ಬೇಸತ್ತ ಸುನಂದಾ ಮತ್ತುರಾಜ್ ನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಮದ್ಯ ಸೇವನೆಯಿಂದ ಆತ ಮೃತಪಟ್ಟಿದ್ದಾನೆ ಎಂದು ಬಿಂಬಿಸಿದ್ದಾಳೆ. ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಯುವತಿಯೇ ಪ್ರಿಯಕರನನ್ನು ಕೊಲೆ ಮಾಡಿರುವುದು ತಿಳಿದು ಬಂದಿದ್ದು, ಆಕೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Woman Sunanda killed her boyfriend Mutturaj for forced sex in Konanakunte, Bengaluru. The Konanakunte police arrest Sunanda.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ