24 ವರ್ಷದ ಗೃಹಿಣಿಗೆ 17ರ ಯುವಕನೊಂದಿಗೆ ಲವ್, ಓಡಿಹೋದವರ ಮೇಲೆ ಕೇಸ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 18: ಕೆಜಿಎಫ್ ಮೂಲದ ಇಪ್ಪತ್ನಾಲ್ಕು ವರ್ಷದ ಗೃಹಿಣಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಮೇಲಿನ ಆರೋಪ ಏನು ಗೊತ್ತಾ? ಹದಿನೇಳು ವರ್ಷದ ಅಪ್ರಾಪ್ತ ಯುವಕನ ಅಪಹರಣ ಹಾಗೂ ಅತ್ಯಾಚಾರ ಆರೋಪ ಹೊರಿಸಲಾಗಿದೆ. ಆ ಮಹಿಳೆ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.

ಪೊಲೀಸರ ರಕ್ಷಣೆ ಕೋರಿದ ಬಾಗಲಕೋಟೆಯ ಪ್ರೇಮಿಗಳು

ಮಹಿಳೆ ಹಾಗೂ ಯುವಕ ಇಬ್ಬರೂ ಕೆಜಿಎಫ್ ನಿವಾಸಿಗಳು. ಇಬ್ಬರೂ ಒಂದೇ ಪ್ರದೇಶದಲ್ಲಿ ವಾಸವಿದ್ದವರು. ಇಬ್ಬರ ಮಧ್ಯೆ ದೈಹಿಕ ಸಂಪರ್ಕ ಏರ್ಪಟ್ಟಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ಪೊಲೀಸರು ಖಾತ್ರಿ ತಿಳಿಸಿದ್ದಾರೆ. ಮಹಿಳೆಯ ಪತಿ ಕುಡಿಯುವ ನೀರು ಸರಬರಾಜು ಮಾಡುವ ವ್ಯಾಪಾರ ಮಾಡುತ್ತಾರೆ.

Woman elopes with minor boy, held for rape

ಈ ದಂಪತಿಗೆ ಎರಡು ವರ್ಷದ ಹಿಂದೆ ಮದುವೆಯಾಗಿದ್ದು, ಮಕ್ಕಳಿಲ್ಲ. ಇನ್ನು ಯುವಕನು ಅರ್ಧಕ್ಕೆ ಶಾಲೆ ಬಿಟ್ಟಿದ್ದಾನೆ. ಕಳೆದ ತಿಂಗಳು ಮಹಿಳೆ ಹಾಗೂ ಯುವಕ ನಾಪತ್ತೆಯಾಗಿದ್ದಾರೆ. ಕೆಜಿಎಫ್ ನ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಪತಿ ನಾಪತ್ತೆ ದೂರು ದಾಖಲಿಸಿದ್ದರು. ಮರು ದಿನ ಯುವಕನ ತಂದೆ ಕೂಡ, ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದರು.

ಅವರು ದೂರು ನೀಡಲು ಬಂದ ವೇಳೆ ಮಹಿಳೆಯ ಫೋಟೋ ಗಮನಕ್ಕೆ ಬಂದಿದೆ. ಏಕೆ ಈ ಫೋಟೋ ಇಲ್ಲಿದೆ ಎಂದು ಕೇಳಿದ್ದಾರೆ. ಆಕೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಕೂಡಲೇ, ನನ್ನ ಮಗನಿಗೂ ಆ ಮಹಿಳೆಗೂ ಪರಿಚಯವಿತ್ತು. ಆಕೆಯೇ ಕರೆದೊಯ್ದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರೀತಿಸಿದ ಯುವಕನಿಗಾಗಿ ಅರಸೊತ್ತಿಗೆಯನ್ನೇ ಬಿಟ್ಟ ಜಪಾನ್ ರಾಜಕುಮಾರಿ

ಮೊದಲಿಗೆ ಪೊಲೀಸರು ಇದನ್ನು ನಂಬಿಲ್ಲ. ಆ ನಂತರ ನೆರೆಹೊರೆಯವರು ಮಹಿಳೆಗೆ ಆ ಯುವಕನ ಜತೆಗೆ ಸಂಬಂಧ ಇತ್ತು ಎಂದಿದ್ದಾರೆ. ಅಂತಿಮವಾಗಿ ಕೆಜಿಎಫ್ ಬಸ್ ನಿಲ್ದಾಣದಲ್ಲಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಆಂಧ್ರಪ್ರದೇಶದ ಬಸ್ಸೊಂದರಲ್ಲಿ ಮಹಿಳೆ ಹಾಗೂ ಯುವಕ ಹತ್ತುತ್ತಿರುವುದು ಕಂಡುಬಂದಿದೆ.

ತನ್ನ ಜತೆಗೆ ಒಂದೂವರೆ ಲಕ್ಷ ರುಪಾಯಿಯನ್ನು ಹೆಂಡತಿ ತೆಗೆದುಕೊಂಡು ಹೋಗಿದ್ದಾಳೆ ಎಂದು ಪತಿ ದೂರು ನೀಡಿದ್ದಾರೆ. ಆ ನಂತರ ಮಹಿಳೆಯ ಮೊಬೈಲ್ ಫೋನ್ ಕರೆಗಳ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಇಬ್ಬರೂ ಎರಡು ದಿನಕ್ಕೊಮ್ಮೆ ಸ್ಥಲ ಬದಲಾಯಿಸುತ್ತಿರುವುದು ಗೊತ್ತಾಗಿದೆ. ವಿಶಾಖಪಟ್ಟಣ, ವಿಜಯವಾಡ, ನೆಲ್ಲೂರು, ತಮಿಳುನಾಡಿನ ಮಹಾಬಲಿಪುರಂ ಹೀಗೆ ವಿವಿಧೆಡೆ ಲಾಡ್ಜ್ ಗಳಲ್ಲಿ ಉಳಿದುಕೊಂಡಿರುವುದು ಗೊತ್ತಾಗಿದೆ.

ಹುಡುಗಿ ನಿನ್ನ ನೆನಪಲ್ಲಿ ಇಷ್ಟಿಷ್ಟೇ ಸವೆಯುತ್ತಿರುವ...

ಅಂತಿಮವಾಗಿ ಇಬ್ಬರನ್ನೂ ವೇಲಾಂಕಣಿಯಲ್ಲಿ ಬಂಧಿಸಲಾಗಿದೆ. ಆದರೆ ಪೊಲೀಸರು ಮಹಿಳೆಗೆ ಎಷ್ಟೇ ತಿಳಿಹೇಳಿದರೂ ಕೇಳುವ ಸ್ಥಿತಿಯಲ್ಲಿಲ್ಲ. ನಾವಿಬ್ಬರೂ ಪ್ರೀತಿಸುತ್ತಿದ್ದೀವಿ, ಸದ್ಯದಲ್ಲೇ ಮದುವೆ ಆಗ್ತೀವಿ ಎಂದು ಪಟ್ಟು ಹಿಡಿದು, ವಾದ ಮಾಡುತ್ತಿದ್ದಾಳಂತೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 24-year-old homemaker from KGF has been arrested for allegedly kidnapping and raping a 17-year-old boy. The woman has been booked under POCSO Act. Both of them are residents of KGF, knew each other for a long time as they lived in the same locality.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ