ನೆರೆ-ಹೊರೆಯವರು ಮೂದಲಿಸಿದ್ದಕ್ಕೆ ಮಹಿಳೆ ಆತ್ಮಹತ್ಯೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 8: ನಾಲಗೆ ಕತ್ತಿಗಿಂತಲೂ ಹರಿತವಾದುದು ಎಂಬುದಕ್ಕೆ ಈ ಘಟನೆಗಿಂತಲೂ ಅತ್ಯುತ್ತಮ ಉದಾಹರಣೆ ಇರಲಿಕ್ಕಿಲ್ಲ. ಅಕ್ಕ-ಪಕ್ಕದ ಮನೆಯವರು 'ಕೆಟ್ಟ ಹೆಣ್ಣು' ಎಂದು ಕರೆದಿದ್ದಕ್ಕೆ ಮಹಿಳೆಯೊಬ್ಬರು ನೇಣಿಗೆ ಶರಣಾಗಿಬಿಟ್ಟಿದ್ದಾರೆ.

ನಗರದ ಆರ್.ಎಂ.ಸಿ ವಾರ್ಡ್ ನ ನಿವಾಸಿಯಾಗಿದ್ದ ಪಾರ್ವತಿ(38) ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು, ನಿನ್ನೆ (ಡಿಸೆಂಬರ್ 07) ರಂದು ಅವರು ಕ್ಷುಲ್ಲಕ ಕಾರಣಕ್ಕೆ ನೆರೆಹೊರೆಯವರೊಂದಿಗೆ ಜಗಳವಾಡಿಕೊಂಡಿದ್ದಾರೆ. ಜಗಳದ ಸಮಯ ಮಾತಿಗೆ ಮಾತು ಸೇರಿ ಅಕ್ಕ ಪಕ್ಕದ ಮಹಿಳೆಯರು ಪಾರ್ವತಿ ಅವರನ್ನು ಅವಾಚ್ಯ ಶಬ್ದದಿಂದ ನಿಂದಿಸಿ ವೇಶ್ಯೆ ಎಂದು ಕರೆದು ಬಿಟ್ಟಿದ್ದಾರೆ. ಇದಕ್ಕೆ ಮನನೊಂದ ಪಾರ್ವತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

woman committed suicide for neighbors blames

ಆರ್ ಎಂ ಸಿ ಯಾರ್ಡ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸವೇಶ್ವರನಗರದಲ್ಲಿ ಯುವಕ ಆತ್ಮಹತ್ಯೆ

ನಗರದ ಬಸವೇಶ್ವರನಗರದ ಭೋವಿ ಕಾಲೋನಿಯಲ್ಲಿ ಕಾರ್ತಿಕ್ (29) ಎಂಬುವರು ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎರಡು ವರ್ಷಗಳಿಂದ ತನ್ನ ಪ್ರೇಯಸಿಯೊಂದಿಗೆ ಭೋವಿ ಕಾಲೋನಿಯಲ್ಲಿ ಲಿವಿಂಗ್ ಟುಗೆದರ್ ಜೀವನ ನಡೆಸುತ್ತಿದ್ದರು.

ನಿನ್ನೆ(ಡಿಸೆಂಬರ್ 07) ಕೆಲಸ ಮುಗಿಸಿ ಪ್ರೇಯಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಘಟನೆ ಕುರಿತಂತೆ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
RMC yard resident Parvathi (38) commit suicide just because her neighbors blame her. RMC yard police lodged complaint.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ