ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ವಿರುದ್ಧ ದೂರು: ಬಂಧನ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 17: ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಮಹಿಳೆಯೊಬ್ಬರಿಗೆ ಸಂಖ್ಯಾಶಾಸ್ತ್ರ ತರಬೇತಿ ಹಿನ್ನೆಲೆ ವಂಚಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇರೆಗೆ ರಾಜರಾಜೇಶ್ವರಿ ನಗರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಶುಕ್ರವಾರ ಗುರೂಜಿಯನ್ನು ಬಂಧಿಸಲಾಗಿದೆ.

ದೂರು ನೀಡಿದವರು ಆಂಧ್ರಪ್ರದೇಶದ ಕರ್ನೂಲು ಮೂಲಕದ ರಾಜರಾಜೇಶ್ವರಿ ನಗರ ನಿವಾಸಿ ಎನ್ನಲಾಗಿದೆ. ಡಿಸೆಂಬರ್ 12 ರಂದು ಅತ್ಯಾಚಾರ ಯತ್ನ, ವಂಚನೆ, ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣದಡಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು.

ದೂರು ದಾಖಲಾಗುವ ವೇಳೆಗೆ ಆರ್ಯವರ್ಧನ್ ತಲೆ ಮರೆಸಿಕೊಂಡಿದ್ದು, ಬೆಂಗಳೂರಿನಲ್ಲಿ ರಾಜರಾಜೇಶ್ವರಿ ನಗರದ ಪೊಲೀಸರು ತನಿಖೆ ನಡೆಸಿದ್ದಾರೆ ಆದರೆ ಅವರಿಗೆ ಸಿಕ್ಕಿಲ್ಲ, ಖಚಿತ ಮಾಹಿತಿ ಆಧಾರದ ಮೇರೆಗೆ ತಮಿಳುನಾಡಿನ ಗೋಪ್ಯ ಸ್ಥಳದಲ್ಲಿದ್ದ ಆರ್ಯವರ್ಧನ್ ಅವರನ್ನು ಡಿಸೆಂಬರ್ 16 ರಂದು ಪೊಲೀಸರು ಬಂಧಿಸಿದ್ದಾರೆ.[ಬೆಂಗಳೂರಿನ ಸಂಖ್ಯಾಶಾಸ್ತ್ರೀಗೆ ಆಂಧ್ರದ ಮಹಿಳೆಯಿಂದ ಶಾಸ್ತಿ]

woman case registered: numerologist arrested

ಬಂಧಿತ ಆರೋಪಿ ಜ್ಯೋತಿಷಿ ಆರ್ಯವರ್ಧನ್ ಅವರನ್ನು ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಅಲ್ಲದೆ ವಿಚಾರಣೆಯನ್ನು ನಡೆಸಲಿದ್ದಾರೆ.[ನಟ ದರ್ಶನ್ ಬಗ್ಗೆ ಆರ್ಯವರ್ಧನ್ ಸಂಖ್ಯಾಶಾಸ್ತ್ರ]

ಹಿನ್ನೆಲೆ ಏನು?
ಜ್ಯೋತಿಷಿ ಆರ್ಯವರ್ಧನ್ ಕೆಲದಿನಗಳ ಹಿಂದೆ ಜ್ಯೋತಿಷ್ಯ ತರಬೇತಿ ನೀಡುವುದಾಗಿ ಜಾಹೀರಾತು ನೀಡಿದ್ದರು. 5 ದಿನಗಳ ತರಗತಿ ಪ್ರವೇಶಾತಿಗೆ 24 ಸಾವಿರ ನಿಗದಿ ಮಾಡಲಾಗಿತ್ತು. ಹೆಚ್ಚಿನ ತರಗತಿಗಾಗಿ 1.5ಲಕ್ಷ ಹಣವನ್ನು ಆಕೆಯಿಂದ ಆರ್ಯವರ್ಧನ್ ಪಡೆದಿದ್ದರು. ತಮ್ಮ ತರಗತಿ ಉಪಯೋಗವಾಗದಿದ್ದರೆ ಹಣ ವಾಪಸ್ ನೀಡುವುದಾಗಿ ಹೇಳಿದ್ದರು.

ಕೆಲವು ದಿನ ತರಬೇತಿ ಭಾಗವಹಿಸಿದ ನಂತರ ಸಂಖ್ಯಾಶಾಸ್ತ್ರ ಪ್ರಯೋಜನವಿಲ್ಲವೆಂದು ತಿಳಿದು ಆಕೆ ಹಣ ವಾಪಸ್ ಕೇಳಿದ್ದರು. ಇದರಿಂದ ಇಬ್ಬರ ನಡುವೆ ವಾಗ್ವಾದಗಳು ನಡೆದಿದ್ದವು. ಆಗಸ್ಟ್ 21ರಂದು ಆರ್ಯವರ್ಧನ್ ಆಕೆಯ ಮನೆಗೆ ತೆರಳಿ ಹಣ ನೀಡುವಂತೆ ಕೇಳಿದ್ದು ಈ ವೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A woman of Andhra Pradesh origin has alleged raped by a numerologist in Bengaluru. A case has been registered in Rajarajeshwari Nagar police station. Police arrested the numerologist in tamilnadu.
Please Wait while comments are loading...