ಬೆಂಗಳೂರಿನ ಸಂಖ್ಯಾಶಾಸ್ತ್ರೀಗೆ ಆಂಧ್ರದ ಮಹಿಳೆಯಿಂದ ಶಾಸ್ತಿ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಡಿಸೆಂಬರ್, 10 : ಎಲ್ಲೆಡೆ ನೋಟ್ ಬ್ಯಾನ್ ನಿಂದ ನಾಗರಿಕರು ಪರದಾಡುತ್ತಿದ್ದಾರೆ. ತಮ್ಮ ಸಮಸ್ಯೆಗೆ ಕಾರಣವೇನು, ಪರಿಹಾರವೇನು ಎಂದು ತಿಳಿದುಕೊಳ್ಳಲು ಹಲವಾರು ಜನರು ಜ್ಯೋತಿಷಿಗಳ ಬಳಿ ತೆರಳುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.

ಇಂಥದೇ ಸಮಸ್ಯೆ ಹಿಡಿದುಕೊಂಡು ಪರಿಹಾರ ಕೇಳಲೆಂದು ಮತ್ತು ಸಂಖ್ಯಾಶಾಸ್ತ್ರ ಕಲಿಯಲೆಂದು ಕುಖ್ಯಾತ ಸಂಖ್ಯಾಶಾಸ್ತ್ರಜ್ಞನ ಬಳಿ ಬಂದಿದ್ದ ಆಂಧ್ರಪ್ರದೇಶದ ಕರ್ನೂಲ್ ಮೂಲದ ಮಹಿಳೆಯೋರ್ವಳು ಅವರ ವಿರುದ್ಧವೇ ಅತ್ಯಾಚಾರದ ದೂರನ್ನು ಸ್ಥಳೀಯ ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Woman alleges rape against Bengaluru numerologist

ದೂರಿನಲ್ಲಿ ಮಹಿಳೆಯ ವಿವರ ಹೀಗಿದೆ : ಪತ್ರಿಕೆಗಳಲ್ಲಿ ಮತ್ತು ಸುದ್ದಿವಾಹಿನಿಗಳಲ್ಲಿ ಸಂಖ್ಯಾಶಾಸ್ತ್ರ ಕಲಿಸುವುದಾಗಿ ಗುರೂಜಿ ಎಂದು ಕರೆಯಿಸಿಕೊಳ್ಳುವ ಮಾಜಿ ಆಟೋ ಚಾಲಕ ಹಾಸನ ಮೂಲದ ಸಂಖ್ಯಾಶಾಸ್ತ್ರಜ್ಞ ಜಾಹೀರಾತು ನೀಡಿದ್ದರು.

ಇದನ್ನು ನೋಡಿಕೊಂಡು ಆಂಧ್ರದ ಮಹಿಳೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಗೆ ಬಂದಿದ್ದರು. ಆಗಸ್ಟ್ 21ರಂದು ಬಂದಿದ್ದಾಗಿ ಹೇಳುವ ಮಹಿಳೆ ಅಂದು ನನ್ನ ಮೇಲೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರವಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ಜೊತೆಗೆ 1.50 ಲಕ್ಷ ರೂ.ಗೂ ಹೆಚ್ಚು ಹಣವನ್ನು ನೀಡಿದ್ದೇನೆ ಎನ್ನುವ ಮಹಿಳೆ ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾಳೆ. ಈಗಾಗಲೇ ಈ ಸಂಖ್ಯಾಶಾಸ್ತ್ರಜ್ಞನ ವಿರುದ್ಧ ನಾಲ್ಕಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A woman of Andhra Pradesh origin has alleged that she has been allegedly raped by a numerologist in Bengaluru when she came to him to learn numerology from the astrologer residing in Rajarajeshwari Nagar. A case has been registered against him.
Please Wait while comments are loading...