ಮಹಿಳೆ ಮೇಲೆ ದೌರ್ಜನ್ಯ: ಬೆಂಗಳೂರಿನಲ್ಲಿ ಯೆಮೆನ್ ಪ್ರಜೆಯ ಬಂಧನ

By: ಅನುಶಾ ರವಿ
Subscribe to Oneindia Kannada

ಬೆಂಗಳೂರು, ಜನವರಿ 18: ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಯೆಮೆನ್ ದೇಶದ ಪ್ರಜೆಯೂ ಸೇರಿದ್ದಾರೆ. ಮಹಿಳೆ ನೀಡಿದ ದೂರಿನ ಹಿನ್ನಲೆಯಲ್ಲಿ ಪೊಲೀಸರು ಈ ಬಂಧನ ನಡೆಸಿದ್ದಾರೆ.

ಈ ಹಿಂದೆ ಹೊಸ ವರ್ಷದ ದಿನ ಬೆಂಗಳೂರಿನ ಬ್ರಿಗೇಡ್ ಮತ್ತು ಎಂ.ಜಿ ರಸ್ತೆಯಲ್ಲಿ ಸಮೂಹಿಕ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು.[ಒಂದು ಹಗ್, ಕಿಸ್ ಗಾಗಿ ನಡೆದಿತ್ತಾ ಕಮ್ಮನಹಳ್ಳಿ ಕಿರುಕುಳ?]

ಬಾಣಸವಾಡಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಮಹಿಳೆಯೊಬ್ಬರು ಜನವರಿ 15 ರಂದು ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ನೀಡಿದ ಮಾಹಿತಿಯನ್ನು ಆಧರಿಸಿ ಪೊಲೀಸರು ಇದೀಗ ಇಬ್ಬರನ್ನು ಬಂಧಿಸಿದ್ದಾರೆ.

Woman alleges molestation in Bengaluru, 2 arrested

ಮಹಿಳೆಯು ತನ್ನ ದೂರಿನಲ್ಲಿ, "ತಾನು ಜನವರಿ 13ರಂದು ರಾತ್ರಿ ಪಬ್ಬಿಗೆ ಹೋಗಿದ್ದೆ. ಅಲ್ಲಿ ನಾನು ಕುಡಿದಿದ್ದರಿಂದ ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ನಾನು ಮರುದಿನ ಬೆಳಿಗ್ಗೆ ಏಳುವಾಗ ಮಹಿಳೆಯೊಬ್ಬರಿದ್ದ ಅಪಾರ್ಟ್ಮೆಂಟಿನಲ್ಲಿದ್ದೆ. ಆಕೆ ನನಗೆ, ನಿನ್ನನ್ನು ಇಬ್ಬರು ವ್ಯಕ್ತಿಗಳು ಮಧ್ಯರಾತ್ರಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾಗಿ ತಿಳಿಸಿದರು," ಎಂಬುದಾಗಿ ಬರೆದಿದ್ದಾರೆ.[ಕಮ್ಮನಹಳ್ಳಿ ಕಾಮುಕರ ವಿರುದ್ಧ ಸಂತ್ರಸ್ತೆ ನುಡಿದಿದ್ದೇನು?]

ಘಟನೆ ನಡೆದ ಒಂದು ದಿನದ ಬಳಿಕ ತನ್ನ ದೇಹದಲ್ಲಿ ಗಾಯವಾಗಿರುವುದು ಮತ್ತು ನೋವಾಗುತ್ತಿರುವುದನ್ನು ಗಮನಿಸಿದ ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಮಹಿಳೆಯನ್ನು ರಕ್ಷಿಸಿದಾಕೆ ನೀಡಿದ ಮಾಹಿತಿ ಮೇರೆಗೆ ಇಬ್ಬರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಮಹಿಳೆ ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದರು.

ದೂರುದಾರ ಮಹಿಳೆಯ ಹೇಳಿಕೆ ಮತ್ತು ಸ್ಥಳೀಯ ಗುಪ್ತಚರ ಮಾಹಿತಿಯ ಮೇರೆಗೆ ಇಬ್ಬರನ್ನು ಪೊಲೀಸರು ಬೆನ್ನತ್ತಿ ಬಂಧಿಸಿದ್ದಾರೆ. ಬಂಧಿತರನ್ನು ರಿಕ್ಕಿ ಮತ್ತು ಅಯುಬ್ ಎಂದು ಗುರುತಿಸಲಾಗಿದೆ.[ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ ಮೈದುನ ನಾದಿನಿ ಜೋಡಿ]

ಬಂಧಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ತಾವು ಮಹಿಳೆಯನ್ನು ಕರೆದುಕೊಂಡು ಬಂದುದಾಗಿಯೂ, ಮಹಿಳೆ ಕಿರುಚಿಕೊಂಡ ಹಿನ್ನಲೆಯಲ್ಲಿ ಆಕೆಯನ್ನು ಕಮ್ಮನಹಳ್ಳಿಯಲ್ಲಿ ಕಾರಿನಿಂದ ಕೆಳಕ್ಕೆ ತಳ್ಳಿರುವುದಾಗಿಯೂ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳು ಮಹಿಳೆಯನ್ನು ವಾಪಸ್ ಮನೆಗೆ ಬಿಡುವುದಾಗಿ ಹೇಳಿ ಕಾರಿಗೆ ಹತ್ತಿಸಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.[ಎಸಿ ಪತ್ನಿ ಜೊತೆ 15 ಜನರ ದುರ್ವರ್ತನೆ, ಒಬ್ಬ ಬಂಧನ]

ಇಬ್ಬರೂ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 354 ಮತ್ತು 273ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯನ್ನು ಕರೆದೊಯ್ಯಲು ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bengaluru police arrested two men, including one Yemen national, over a complaint of sexual harassment by a woman.
Please Wait while comments are loading...