ಬಾಯ್ ಫ್ರೆಂಡ್ ಇಲ್ಲದಿದ್ದರೆ ಬರಬೇಡಿ,ನೊಟೀಸ್ ನೀಡಿಲ್ಲ ಆರ್.ವಿ.ಕಾಲೇಜು

Posted By:
Subscribe to Oneindia Kannada

ಬೆಂಗಳೂರು, ಜನವರಿ 13: ಫೆಬ್ರವರಿ 14ರೊಳಗೆ ಬಾಯ್ ಪ್ರೆಂಡ್ ಹೊಂದಿಲ್ಲದಿದ್ದರೆ ಕಾಲೇಜಿಗೆ ಪ್ರವೇಶವಿಲ್ಲ ಎಂದು ಬೆಂಗಳೂರಿನ ಆರ್.ವಿ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ಪ್ರಕರಟಿಸಿದೆ ಎಂಬ ಹುಸಿಸುದ್ದಿ ಹರಿದಾಡುತ್ತಿದ್ದು, ಇದಕ್ಕೆ ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂದು ಕಾಲೇಜು ಸ್ಪಷ್ಟಪಡಿಸಿದೆ.

ಆರ್ ವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಪ್ರತಿ ವಿದ್ಯಾರ್ಥಿನಿಯು ಒಬ್ಬ ಬಾಯ್ ಫ್ರೆಂಡನ್ನು ಹೊಂದರಲೇಬೇಕು ಇಲ್ಲದಿದ್ದರೆ ಫೆಬ್ರವರಿ 14ರಿಂದ ಅಂತಹ ವಿದ್ಯಾರ್ಥಿನಿಯರ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. ಎಂಬ ಸುಳ್ಳು ಪ್ರಕಟಣೆಯನ್ನು ಹೊರಡಿಸಿರುವುದು ಈ ಅವಾಂತಕ್ಕೆ ಕಾರಣವಾಗಿದೆ. [ಪ್ರತ್ಯೂಷಾ ಬಾಯ್ ಫ್ರೆಂಡ್ ಗೆ ಜಾಮೀನು ಮಂಜೂರು!]

without boy friend don't come the college within February 14

ಕಾಲೇಜು ವಿದ್ಯಾರ್ಥಿನಿಯರ ರಕ್ಷಣೆ, ಭದ್ರತೆ ಕಾರಣದಿಂದ ಈ ಕ್ರಮವನ್ನು ಜರುಗಿಸಲಾಗಿದೆ ಎಂದು ಪ್ರಕಟಣೆಯನ್ನು ಯಾರೋ ಕಾಲೇಜಿನ ಹೆಸರಿನಲ್ಲಿ ಬರದು ಎಲ್ಲರಿಗೂ ಹಂಚಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಪ್ರಕಟಣೆಯಿಂದ ವಿದ್ಯಾರ್ಥಿಗಳಿಗೆ ಪೀಕಲಾಟ ಶುರುವಾಗಿದೆ. ಆದರೆ ಯಾರು ಈ ಪ್ರಕಟಣೆ ಹೊರಡಿಸಿದವರು ಎಂದು ಇನ್ನು ತಿಳಿಯಬೇಕಿದೆ.

ನಗರದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳ ಹಿನ್ನೆಲೆ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಈ ರೀತಿ ಕಾಲೇಜಿನ ಹೆಸರನ್ನು ಬಳಸಿಕೊಂಡು ನೊಟೀಸ್ ಜಾರಿ ಮಾಡಿ ಕಾಲೇಜು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಹಾಳು ಮಾಡುತ್ತಿದ್ದಾರೆ ಎಂದು ಕಾಲೇಜು ದೂರಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
without boy friend don't come the college within February 14 say R.V.College of engineering not issued the Notification. it is not true college said.
Please Wait while comments are loading...