ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಮಗಂದ್, ಯಾಕಾದ್ರೂ ಬರುತ್ತೋ ಈ ಚಳಿಗಾಲ!

|
Google Oneindia Kannada News

ಯಾಕಾದರೂ ಬೆಳಗಾಗುತ್ತೋ ಅನ್ನಿಸಲಿಕ್ಕೆ ಶುರುವಾಗಿಬಿಟ್ಟಿದೆ. ಬೆಳಗ್ಗೆ ಕಸ ತುಂಬಲು ಬರುವ ಗಂಟೆ ಗಾಡಿ ಸದ್ದು, ಮುಂಜಾನೆಯೇ ಎದ್ದು ವೈಟ್ ಫೀಲ್ಡ್ ಕಡೆ ಕ್ಯಾಬ್ ಏರುವ ಸಹೋದರ, ಮನೆ ಎದುರಿನ ಪಾರ್ಕಿಗೆ ಬರುವ ಮಕ್ಕಳು ಎಲ್ಲರೂ ಒಂಥರಾ 'ಉಗ್ರಗಾಮಿಗಳ' ತರಹ ಕಾಣುತ್ತಿದ್ದಾರೆ.(ತಲೆ ಮೇಲೆ ಕುಟ್ಟಲು ಮನೆಯಲ್ಲಿ ಬೇರೆ ಯಾರಿಲ್ಲ) ನಿಮಗೂ ಒಂದೆಲ್ಲಾ ಒಂದು ಸಾರಿ ಹೀಗೆ ಅನ್ನಿಸಿರಬಹದು .. ಹೌದು ಇದಕ್ಕೆಲ್ಲಾ ಕಾರಣ ಚಳಿ.. ಚಳಿ.. ಚಳಿ.

ಆಲಸ್ಯವನ್ನೇ ಹೊದ್ದು ಮಲುಗುವ ನನ್ನಂಥ ಎಷ್ಟೋ ಮಂದಿಗೆ ಬೆಳಗ್ಗೆ ಎದ್ದೇಳಬೇಕು ಎಂದರೆ ಸೂರ್ಯ ಪ್ರಖರವಾಗಿರಬೇಕು. ಬೆಂಗಳೂರಿನ ವಾತಾವರಣ ಥಂಡಿ ಥಂಡಿ ಥಂಢಿ... ಸೋಮವಾರ ಬೆಂಗಳೂರಿನಲ್ಲಿ 12 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಕೇಳಿ ಮತ್ತಷ್ಟು ಚಳಿ ಗುಳ್ಳೆ ಮೈ ಮೇಲೆ ಎದ್ದವು. [ನ್ಯೂ ಇಂಗ್ಲೆಂಡ್ ನಲ್ಲಿ ಮನೆ ಮಾಡಿ ಸ್ನೋಗೆ ಅಂಜಿದೊಡೆಂತಯ್ಯ]

winter

ಮುಖ , ಮೈ ಕೈ ಮೇಲೆ ಚಳಿಯ ಹೊಡೆತ ಶುರುವಾಗಿದೆ. ಹೌದಪ್ಪಾ ನಿನ್ನೆ ತಾನೇ ಅಂಗಡಿಗೆ ಲಗ್ಗೆ ಇಟ್ಟು ವ್ಯಾಸಲಿನ್ ತಗೊಂಡು ಬಂದೆ. ಮಳೆಗಾಲ, ಚಳಿಗಾಲ ನಿಮ್ಮ ಆರೋಗ್ಯಕ್ಕೂ ಕೊಳ್ಳಿ ಇಡುತ್ತದೆ ಹುಷಾರ್.. ನೆಗಡಿ, ಕೆಮ್ಮು, ಗಂಟಲುನೋವು, ಉಸಿರಾಟದ ಸಮಸ್ಯೆ, ಮೂಗು ಕಟ್ಟುವಿಕೆ, ಎದೆಬಿಗಿತ, ಚರ್ಮ ಒಣಗುವಿಕೆ, ಅಲರ್ಜಿ, ಅಸ್ತಮಾ ಸಮಸ್ಯೆಗಳು ಸಾಮಾನ್ಯ. ನಗರದ ಧೂಳಲ್ಲಿ ತಿರುಗುವ ನಮಗೆ ಇವೆಲ್ಲ ವರ್ಷವಿಡೀ ಇರುತ್ತವೆ ಅಲ್ಲವೆ??

ರಾತ್ರಿ ಸೊಳ್ಳೆ ಕಾಟ, ಬೆಳಗ್ಗೆ ಚಳಿ ಕಾಟ, ಗೇಟ್ ಶಬ್ಧ, ಬೈಕ್ ಸೌಂಡ್ ಉಸ್ಸಪ್ಪಾ ನನ್ನ ನಿದ್ರೆಗೂ ಬೆಂಕಿ ಬಿತ್ತು. ಬೆಳಗ್ಗೆ ಹೊದ್ದು ಮಲಗೋಣ ಎಂದರೆ ಅದಾಗಲೇ 9 ಗಂಟೆ. ಚಳಿಗಾಲ ಈಗಷ್ಟೆ ಶುರುವಾಗಿದೆ ಎಂದು ನೆನೆಸಿಕೊಂಡೆರೆ ಮತ್ತಷ್ಟು ಭಯವಾಗುತ್ತೆ.

ಕಳೆದ ವರ್ಷ ಬೆಂಗಳೂರಲ್ಲಿ ಕಡಿಮೆ ಎಂದರೆ 8 ಡಿಗ್ರಿಗೆ ಉಷ್ಣತೆ ಇಳಿದಿತ್ತು. ಇದು ಹವಾಮಾನ ಇಲಾಖೆ ನೀಡುವ ದಾಖಲೆ. ಯಾಕಾದ್ರೂ ಈ ಚಳಿಗಾಲ ಬಂತೋ ನಮ್ಮ ಬಿಸಿನಸ್ ಗೆ ಬೆಂಕಿ ಬಿತ್ತು ಎಂದು ಜ್ಯೂಸ್ ಅಂಗಡಿಯವರು ನನ್ನೆದುರಿಗೆ ಬೈದುಕೊಂಡಿದ್ದು ಇದೆ. 1884 ರ ಜನವರಿಯಲ್ಲಿ 7.8 ಡಿಗ್ರಿ ದಾಖಲಾಗಿದ್ದು ಅತಿ ಕನಿಷ್ಠ ದಾಖಲೆ.[ಸೂರ್ಯದೇವಾ, ನಿಂಗೆ ಹೇಳೋರು ಕೇಳೋರು ಯಾರೂ ಇಲ್ವಾ?]

ಸ್ವೇಟರ್, ಝರ್ಕೀನ್, ಮಫ್ಲರ್ ಅಂಗಡಿಯವರಿಗೆ ಭರ್ಜರಿ ವ್ಯಾಪಾರ. ಜ್ಯೂಸ್ ಸೆಂಟರ್, ಐಸ್ ಕ್ರೀಂ ಮಾಲೀಕರಿಗೆ ಚಳಿಯಿಂದ ತಲೆಬಿಸಿ ಎಂದು ಲೆಕ್ಕ ಹಾಕುತ್ತಿದ್ದರೆ ಎಫ್ಎಂವೊಂದರಲ್ಲಿ ಚಳಿ ಚಳಿ ತಾಳೆನು ಈ ಚಳಿಯಾ... ಎಂಬ ಹಾಡು ಬರ್ತಾ ಇತ್ತು.

ಚಳಿಗಾಲ ಹೊಸದಾಗಿ ಮದುವೆಯಾದವರಿಗೆ ಸುಗ್ಗಿಕಾಲ!, ಉಳಿದವರಿಗೆ? ಸಂಜೆಯ ವಿಕೆಂಡ್ ಸುತ್ತಾಟಗಳಿಗೆ ಬ್ರೇಕ್.. ಮನೆಯಲ್ಲೇ ಎಲ್ಲ,,ಖುಲ್ಲಂ ಖುಲ್ಲ. ಉಳಿದವರು ಬೈದುಕೊಂಡರೆ ಚಳಿಗಾಲ ಇಷ್ಟವಾಗುವುದು ನವ ಜೋಡಿಗಳಿಗೆ ಮಾತ್ರ. ಪಕೃತಿ ನಿಯಮ ಮುರಿಯಲು ಯಾರಿಂದ ತಾನೇ ಸಾಧ್ಯ?

ನಿಸರ್ಗದ ಸಮತೋಲನಕ್ಕೆ ಎಲ್ಲ ಕಾಲವೂ ಬೇಕು, ಕಾಲಕ್ಕೆ ತಕ್ಕಂತೆ ಎಲೆ ಉದುರಲೂ ಬೇಕು, ಹೊಸ ಚಿಗುರು ಹುಟ್ಟಿಕೊಳ್ಳಲು ಬೇಕು. ಮೊಬೈಲ್ ಮೇಲೆ ಬೆರಳಿಟ್ಟು ಮುಸುಕು ಹಾಕಿಕೊಂಡೆ ವಾಟ್ಸಪ್ ಮೆಸೇಜ್ ಕಳಿಸುವ ಹೊಸ ಕ್ರಮವನ್ನು ಮೊನ್ನೆಯಿಂದ ಅಳವಡಿಸಿಕೊಂಡಿದ್ದೇನೆ....

English summary
Now Bengaluru turned cold city. The Indian Meteorological Department (IMD) recorded minimum temperatures of 12 degrees Celsius in the heart of the city and 10.7 degrees Celsius at the Kempegowda International Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X