ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರವಿ ಬೆಳಗೆರೆಗೆ ಜಾಮೀನು ವಿಚಾರ: ಕೆಲವೇ ಕ್ಷಣಗಳಲ್ಲಿ ನಿರ್ಧಾರ

|
Google Oneindia Kannada News

ಬೆಂಗಳೂರು, ಡಿಸೆಂಬರ್ 18 : ಪತ್ರಕರ್ತ ರವಿ ಬೆಳಗೆರೆ ಮಧ್ಯಂತರ ಜಾಮೀನು ಸೋಮವಾರ ಕೊನೆಗೊಂಡಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿದೆ.

ಮಾಜಿ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದ ಆರೋಪ ಎದುರಿಸುತ್ತಿದ್ದ ಬೆಳಗೆರೆ, ಕಳೆದ ಆರು ದಿನಗಳಿಂದ ಮಧ್ಯಂತರ ಜಾಮೀನಿನ ಮೇಲೆ ಚಿಕಿತ್ಸೆ ಪಡೆಯುತ್ತಿದ್ದರು. ರವಿ ಬೆಳಗೆರೆ ಅವರನ್ನು ಸೋಮವಾರ ಸೆಷನ್ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಲಾಯಿತು.

ರವಿ ಬೆಳಗೆರೆ ಮಧ್ಯಂತರ ಜಾಮೀನು ಅವಧಿ ಅಂತ್ಯರವಿ ಬೆಳಗೆರೆ ಮಧ್ಯಂತರ ಜಾಮೀನು ಅವಧಿ ಅಂತ್ಯ

ರವಿ ಬೆಳಗೆರೆ ಅವರು ವಿನಾಕಾರಣ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ ಅವರಿಗೆ ಯಾವುದೇ ತೊಂದರೆಯಿಲ್ಲ, ಹಾಗಾಗಿ ಅವರ ಜಾಮೀನನ್ನು ವಿಸ್ತರಿಸಬಾರದು ಎಂದು ಸರ್ಕಾರಿ ಅಭಿಯೋಜನಕರು ನ್ಯಾಯಾಲಯಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಿದ್ದಾರೆ.

ರವಿ ಬೆಳಗೆರೆಗೆ ಮತ್ತೆ ಮೂರು ದಿನ ಮಧ್ಯಂತರ ಜಾಮೀನು ಮುಂದುವರಿಕೆರವಿ ಬೆಳಗೆರೆಗೆ ಮತ್ತೆ ಮೂರು ದಿನ ಮಧ್ಯಂತರ ಜಾಮೀನು ಮುಂದುವರಿಕೆ

Will Ravi Belagere gets bail

ಸರ್ಕಾರಿ ವಕೀಲಲರು ನ್ಯಾಯಾಧೀಶರ ಎದುರು ವಾದ ಮಂಡಿಸುತ್ತಾ ರವಿ ಬೆಳಗೆರೆ ಮುಗ್ಧರಂತೆ ನಾಟಕ ಮಾಡುತ್ತಿದ್ದಾರೆ. ಅವರನ್ನು ನ್ಯಾಯಾಲಯ ನಂಬಬಾರದು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ರವಿಬೆಳಗೆರೆ ಪರ ವಕೀಲ ದಿವಾಕರ್ ರವಿ ಬೆಳಗೆರೆ ಅವರು ವಿನಾಕಾರಣ ಆಸ್ಪತ್ರೆಗೆ ದಾಖಲಾಗಿಲ್ಲ. ಅವರಿಗೆ ಹೃದಯ ಸಂಬಂಧಿ ತೊಂದರೆಯಿದ್ದು ಆಂಜಿಯೋಗ್ರಾಮ್ ಮಾಡಬೇಕು ಎಂದು ಜಯದೇವ ಆಸ್ಪತ್ರೆಯ ಡಾ. ಆಶಾಲತಾ ಅವರು ತಿಳಿಸಿದ್ದಾರೆ. ರವಿ ಬೆಳಗೆರೆ ಯಾವುದೇ ಕೊಲೆ ಪ್ರಯತ್ನ ಮಾಡಿಲ್ಲ ಎಂದು ವಾದ ಮಂಡಿಸಿದರು.

ನಂತರ ರವಿ ಬೆಳಗೆರೆ ಅವರ ಮನೆಯಲ್ಲಿ ಪಿಸ್ತೂಲು, 93 ಗುಂಡುಗಳು ದೊರೆತ ವಿಚಾರ ಮಾತನಾಡಿ, ಕಾನೂನಿನಲ್ಲಿ ಒಂದು ವರ್ಷಕ್ಕೆ 200 ಗುಂಡುಗಳನ್ನು ಬಳಸಬಹುದು ಎಂಬ ನಿಯಮ ವಿದೆ ಎಂದು ವಾದ ಮಂಡನೆ ಮಾಡಿದರು. ಅವರು ಯಾವುದೇ ತಪ್ಪುಗಳನ್ನು ಮಾಡಿಲ್ಲ, ಅವರ ಆರೋಗ್ಯ ಸ್ಥಿತಿಯೂ ಸರಿಯಲ್ಲ ಹಾಗಾಗಿ ಜಾಮೀನನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು.

English summary
The Bengaluru ACMM court will decide on journalist Ravi belagere bail application, who had been arrested in colleague supari case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X