ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮಾತನಾಡೊಲ್ಲ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸೊಲ್ಲ: ದೇವೇಗೌಡ

|
Google Oneindia Kannada News

ಬೆಂಗಳೂರು, ಜನವರಿ 5: ಸಂಸತ್‌ಗೆ ಸುಮ್ಮನೆ ಹೋಗಿ ಬರುವಂತಾಗಿದೆ. ಅಲ್ಲಿ ಜನಗಣಮನ ಬಂದಾಗ ಎದ್ದು ನಿಲ್ಲೋದಷ್ಟೇ ಆಗಿದೆ ಎಂದು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ದೋಸ್ತಿಗೂ ಮುಂಚೆ ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿ ಅಂದರೇಕೆ ಗೌಡರು?ದೋಸ್ತಿಗೂ ಮುಂಚೆ ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿ ಅಂದರೇಕೆ ಗೌಡರು?

ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ನಾಲ್ಕೂ ವರ್ಷ ಪತ್ರಿಕಾಗೋಷ್ಠಿ ಮಾಡಲಿಲ್ಲ. ಆದರೆ ಇತ್ತೀಚೆಗೆ ಖಾಸಗಿ ಸುದ್ದಿಸಂಸ್ಥೆಗೆ ಸಂದರ್ಶನ ಕೊಟ್ಟಿದ್ದಾರೆ. ಲೋಕಸಭೆಯ ಚುನಾವಣಾ ಅಜೆಂಡಾ ಬಗ್ಗೆಯೂ ಹೇಳಿದ್ದಾರೆ. ಇತ್ತೀಚೆಗೆ ಅವರು ಲೋಕಸಭೆಗೂ ಬರುತ್ತಿಲ್ಲ ಎಂದು ದೇವೇಗೌಡ ಅಸಮಾಧಾನ ಹೊರಹಾಕಿದರು.

will not contest in upcoming lok sabha elections former PM HD Devegowda

ಪ್ರಧಾನಿ ನರೇಂದ್ರ ಮೋದಿ ಲೋಕಸಭೆಗೆ ಬಂದು ಮಾತನಾಡುತ್ತಿಲ್ಲ. ಇದೇಕೆ? ಯಾವುದೋ ವಾರ್ತಾ ಸಂಸ್ಥೆಯನ್ನು ಮನೆಗೆ ಕರೆಯಿಸಿಕೊಂಡು ಸುದೀರ್ಘವಾಗಿ ಮಾತನಾಡುತ್ತಾರೆ. ಶುಕ್ರವಾರ ಲೋಕಸಭೆ ಅಧಿವೇಶನದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸರ್ಕಾರವನ್ನು ಚೆನ್ನಾಗಿ ಸಮರ್ಥಿಸಿಕೊಂಡರು. ಆದರೆ, ಮೋದಿ ಚರ್ಚೆಗೆ ಬರುತ್ತಿಲ್ಲ ಎಂದು ಹೇಳಿದರು.

ರೈತರ ಬಗ್ಗೆ ಮೋದಿಯನ್ನು ಪ್ರಶ್ನಿಸಿದ ಎಚ್.ಡಿ.ದೇವೇಗೌಡ ರೈತರ ಬಗ್ಗೆ ಮೋದಿಯನ್ನು ಪ್ರಶ್ನಿಸಿದ ಎಚ್.ಡಿ.ದೇವೇಗೌಡ

ಮೈತ್ರಿ ಸರ್ಕಾರದಲ್ಲಿ ನಮ್ಮನ್ನು ಕೂಡ ನಡೆಸಿಕೊಂಡು ಹೋಗಬೇಕು. ಒಂದೇ ಸೀಟು ಬರಲಿ ಅಥವಾ ಎರಡು ಬರಲಿ, ಆದರೆ, ನಮ್ಮದೂ ಒಂದು ಪಕ್ಷ ಎಂಬುದು ಗಮನದಲ್ಲಿರಬೇಕು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ನಲ್ಲಿ ಭಿನ್ನಮತದ ಜ್ವಾಲೆ ಸ್ಪೋಟ? ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ನಲ್ಲಿ ಭಿನ್ನಮತದ ಜ್ವಾಲೆ ಸ್ಪೋಟ?

ನಮ್ಮ ಪಕ್ಷಕ್ಕೆ ಶಕ್ತಿಯಿದೆ. ಅದನ್ನು ಅರ್ಥಮಾಡಿಕೊಳ್ಳಬೇಕು. ಲೋಕಸಭೆಯಲ್ಲಿ ನಮಗೆಷ್ಟು ಸೀಟು ಎನ್ನುವ ಚರ್ಚೆ ಬೇಡ. ಆದರೆ, ಅಲ್ಲಿ ನಮ್ಮ ಎರಡು ಸೀಟುಗಳು ಇದೆ ತಾನೆ? ನಾನೂ ಚುನಾವಣೆಗಳಲ್ಲಿ ಸೋತಿದ್ದೇನೆ. ನಂತರ ಗೆದ್ದು ಬರಲಿಲ್ಲವೇ? ಎಂದರು.

English summary
Former Prime Minister HD Devegowda said that, He will not contest in the Lok Sabha elections 2019. Prime Minister Narendra Modi is not speaking in Lok Sabha. He is not doing any press meets, Devegowda accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X