ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮೇಲೆ ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ ಬೀಳುತ್ತಾ?!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 25: ಲಕ್ಷಾಂತರ ರೂಪಾಯಿ ತೆತ್ತು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುತ್ತಿರುವ ಪಾಲಕರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ.

ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳ ಶುಲ್ಕಕ್ಕೆ ಕಡಿವಾಣ ಹಾಕುವ ಮತ್ತು ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಭದ್ರತೆ ನೀಡುವ ಸಲುವಾಗಿ ಈ ಶಾಲೆಗಳ ಮೇಲೆ ತನ್ನ ಹಿಡಿತವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.[ಐಸಿಎಸ್ಇ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 200 ತಪ್ಪುಗಳು!]

will Govt of Karnataka decrease fees of Private schools?

ಮಾರ್ಚ್ 24 ಶುಕ್ರವಾರದಂದು ರಾಜ್ಯ ಸಚಿವಾಲಯ ತೆಗೆದುಕೊಂಡ ನಿರ್ಧಾರದ ಪ್ರಕಾರ ಇನ್ನು ಮುಂದೆ ಖಾಸಗಿ ಶಾಲೆಗಳ ಶುಲ್ಕ ಮತ್ತು ಭದ್ರತೆಯ ಕುರಿತು ರಾಜ್ಯ ಸರ್ಕಾರವೂ ಕೆಲವು ನಿಯಮಗಳನ್ನು ಜಾರಿಗೆ ತರಲಿದೆ.

ಇತ್ತೀಚೆಗೆ ಖಾಸಗಿ ಶಾಲೆಗಳಲ್ಲಿ ಕಂಡುಬರುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ ಶಾಲೆಯ ಆಚೆ ಮತ್ತು ಒಳಗಡೆ ವಿದ್ಯಾರ್ಥಿಗಳ ಭದ್ರತೆ ನೀಡುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದೆ. ಈ ಕುರಿತು ಎಲ್ಲಾ ಖಾಸಗಿ ಶಾಲೆಗಳಿಗೂ ಒಂದು ಏಕರೂಪದ ನಿಯಮವನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.['ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಅಡ್ಡೆಗಳಿಗಿಂತ ಕಡೆ']

ಮುಂದಿನ ವಾರ ನಡೆಯಲಿರುವ ನ್ಯಾಯಾಂಗ ಅಧಿವೇಶನದಲ್ಲಿ 1983 ರ ಕರ್ನಾಟಕ ಶಿಕ್ಷಣ ನೀತಿಗೆ ತಿದ್ದುಪಡಿ ತರಲು ನಿರ್ಧರಿಸಿರುವ ಸರ್ಕಾರ, ಶಾಲಾ ವಾಹನಗಳಲ್ಲಿ ಓಡಾಡುವ ಮಕ್ಕಳ ಭದ್ರತೆಯ ವಿಚಾರದ ಬಗ್ಗೆಯೂ ಶಾಲೆಯ ಆಡಳಿತ ಮಂಡಳಿ ಗಂಭೀರವಾಗಿ ಯೋಚಿಸಬೇಕು ಎಂದಿದೆ.

ಈ ಬಗ್ಗೆ ಮಾತನಾಡಿದ ಖಾಸಗಿ ಶಾಲೆಯೊಂದರ ಪ್ರಾಂಶುಪಾಲ, 'ಯಾವುದೋ ಒಂದೆರಡು ಶಾಲೆಗಳು ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಭದ್ರತೆ ನೀಡಿಲ್ಲ, ಹೆಚ್ಚು ಶುಲ್ಕ ಕಿತ್ತುಕೊಳ್ಳುತ್ತವೆಂದು, ಎಲ್ಲಾ ಶಾಲೆಗಳಿಗೂ ಒಂದೇ ರೀತಿಯ ನಿಯಮವನ್ನು ಜಾರಿಗೊಳಿಸುತ್ತಿರುವುದು ಒಪ್ಪತಕ್ಕ ವಿಷಯವಲ್ಲ' ಎಂದಿದ್ದಾರೆ.[ಖಾಸಗಿ ಶಾಲೆಗಳಲ್ಲಿ ಶುಲ್ಕ ಏರಿಕೆಗೆ ಚಿಂತನೆ]

ಒಟ್ಟಿನಲ್ಲಿ ಈಗಾಗಲೇ ಲಕ್ಷಾಂತರ ರೂಪಾಯಿ ಸುರಿದು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುತ್ತಿರುವ ಪಾಲಕರು, ಶುಲ್ಕ ಮತ್ತು ಮಕ್ಕಳ ಭದ್ರತೆ ಎರಡು ವಿಷಯದಲ್ಲೂ ಇನ್ನುಮುಂದೆ ನಿರಾಳತೆ ಅನುಭವಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

English summary
The State Government of Karnataka has decided to take control over exorbitant fees and lack of security in CBSE and ICSE schools in Karnataka. And Government will also try to bring amendment in the 1983 Karnataka Education Act in the legislature session whic will be scheduled next week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X