ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮಹಿಳೆಯ ವಾಟ್ಸಪ್ ತಲಾಖ್ ಹೋರಾಟಕ್ಕೆ ಸದಾನಂದಗೌಡ ಸಾಥ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 10: ಬೆಂಗಳೂರು ಮಹಿಳೆಯ ವಾಟ್ಸಪ್ ತಲಾಖ್ ಹೋರಾಟಕ್ಕೆ ಕೇಂದ್ರ ಸಚಿವ ಡಿವಿ ಸದಾನಂದಗೌಡ ಬೆಂಬಲ ನೀಡಿದ್ದಾರೆ.

ಪತಿಯೊಬ್ಬ ವಾಟ್ಸಪ್‌ನಲ್ಲಿಯೇ ತಲಾಖ್ ಹೇಳಿ ವಿದೇಶಕ್ಕೆ ಹಾರಿದ್ದ, ಬಳಿಕ ಮಹಿಳೆ ಕೇಂದ್ರ ಸಚಿವ ಡಿವಿ ಸದಾನಂದಗೌಡ , ಹಾಗೆಯೇ ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರಿಗೂ ದೂರು ನೀಡಿದ್ದಾಳೆ. ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಳು.

3 ತಲಾಖ್ ಅಮಾನುಷ ಕಾನೂನು ಕೊನೆಗೆ ಅಂತ್ಯವಾಗಿದೆ: ಶೋಭಾ 3 ತಲಾಖ್ ಅಮಾನುಷ ಕಾನೂನು ಕೊನೆಗೆ ಅಂತ್ಯವಾಗಿದೆ: ಶೋಭಾ

ಪತಿಯೊಬ್ಬ ತನ್ನ ಪತ್ನಿಗೆ ವಾಟ್ಸ​ಪ್​ನಲ್ಲೇ ತಲಾಖ್ ಹೇಳಿದ್ದಲ್ಲದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲೇ ಹೆಂಡತಿಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು.

Will fight for Whatsapp Talaq case: DVS assures

ಅಮೆರಿಕಾದಲ್ಲಿ ವೈದ್ಯನಾಗಿರುವ ಡಾ. ಜಾವೀದ್ ಖಾನ್ ಪರಾರಿಯಾಗಿರುವ ಪತಿಯಾಗಿದ್ದು ಇವರು ವಾಟ್ಸ​ಪ್​ನ ಮೂಲಕ ತಮ್ಮ ಪತ್ನಿ ರೇಷ್ಮಾ ಅಜೀಜ್ ಎಂಬಾಕೆಗೆ ತಲಾಖ್ (ವಿಚ್ಚೇದನ) ನೀಡಿದ್ದನು.

ಟ್ರಿಪಲ್ ತಲಾಖ್ ರದ್ದು: ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯವೇನು? ಟ್ರಿಪಲ್ ತಲಾಖ್ ರದ್ದು: ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯವೇನು?

ಬಳಿಕ ಆಕೆಯನ್ನು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಜಾವೀದ್ ಹಾಗೂ ರೇಷ್ಮಾ 2003ರಲ್ಲಿ ವಿವಾಹವಾಗಿದ್ದರು.ಕೆಲ ಕಾಲ ಇಂಗ್ಲೆಂಡ್ ನಲ್ಲಿ ನೆಲೆಸಿದ್ದ ದಂಪತಿ ಬಳಿಕ ಕುಟುಂಬ ಸಮೇತವಾಗಿ ಅಮೆರಿಕಾಗೆ ಶಿಫ್ಟ್​ ಆಗಿದ್ದರು.ದಂಪರ್ತಿಗಳಿಗೆ 13 ವರ್ಷದ ಹೆಣ್ಣುಮಗು, 10 ವರ್ಷದ ಗಂಡು ಮಗುವೂ ಇದೆ.

ಸಂಸಾರ ಚೆನ್ನಾಗಿಯೇ ಸಾಗಿಸುತ್ತಿದ್ದ ಇವರಲ್ಲಿ ಇತ್ತೀಚಿನ ವರ್ಷದಲ್ಲಿ ಜಗಳ, ಅಸಮಾಧಾನ ಮೂಡಿತ್ತು. ಈ ಸಂಬಂಧ ಹಿರಿಯರೊಡನೆ ಚರ್ಚಿಸಿ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಮಕ್ಕಳನ್ನು ಅಮೆರಿಕಾದಲ್ಲೇ ಬಿಟ್ಟು ದಂಪತಿಗಳು ಮಾತ್ರ ಬೆಂಗಳೂರಿಗೆ ಆಗಮಿಸಿದ್ದರು.

ತ್ರಿವಳಿ ತಲಾಖ್: 1 ನ್ಯಾಯಪೀಠ, 5 ಜಡ್ಜ್ ಗಳು, 2 ರೀತಿಯ ವಾದ!! ತ್ರಿವಳಿ ತಲಾಖ್: 1 ನ್ಯಾಯಪೀಠ, 5 ಜಡ್ಜ್ ಗಳು, 2 ರೀತಿಯ ವಾದ!!

ಎಮಿರೇಟ್ಸ್ ವಿಮಾನದ ಮೂಲಕ ನವೆಂಬರ್ 30ರಂದು ಬೆಂಗಳೂರಿಗೆ ಇವರು ಆಗಮಿಸಿದ್ದರು. ಈ ನಡುವೆ ಪತಿ ಜಾವೀದ್ ಹೆಂಡತಿ ರೇಷ್ಮಾಳ ಫಾಸ್ ಪೋರ್ಟ್, ಡೆಬಿಟ್, ಕ್ರೆಡಿಟ್ ಕಾರ್ಡ್ ಗಳನ್ನು ತೆಗೆದುಕೊಂಡಿದ್ದಾನೆ.

ಹಾಗೂ ಏರ್​ಪೋರ್ಟ್​ಗೆ ಆಗಮಿಸಿದ ಬೆನ್ನಿಗೇ ಬೌನ್ಸರ್ಗಳ ಭದ್ರತೆಯಲ್ಲಿ ರೇಷ್ಮಾಳನ್ನು ಬಿಟ್ಟು ತಾನೊಬ್ಬನೇ ಅಮೆರಿಕಾಗೆ ಹಿಂತಿರುಗಿದ್ದಾನೆ. ಅಲ್ಲದೆ ಅಮೆರಿಕಾಗೆ ತೆರಳಿದ ಜಾವೀದ್ ವಾಯ್ಸ್ ಮೆಸೇಜ್ ಮತ್ತು ಟೆಕ್ಸ್ಟ್​ ಮೂಲಕ ತಲಾಖ್ ಸಂದೇಶ ರವಾನಿಸಿದ್ದಾನೆ.

ಈ ಕುರಿತು ಸಚಿವರ ಬಳಿ ಅಳಲು ತೋಡಿಕೊಂಡಿದ್ದು ಮಹಿಳೆಯ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಸದಾನಂದಗೌಡ ಭರವಸೆ ನೀಡಿದ್ದಾರೆ.

English summary
Union chemicals & fertilizer minister DV Sadananda Gowda has decided to take up with the external affairs ministry the case of Reshma Aziz, the Bengaluru woman who was issued talaq on WhatsApp by her US-based husband last week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X