ಟ್ವಿಟ್ಟರ್ ನಲ್ಲಿ WeLoveKarnataka ಟ್ರೆಂಡ್ ಆಗಿತ್ತೇಕೆ?

Posted By:
Subscribe to Oneindia Kannada

ಬೆಂಗಳೂರು, ಸೆ. 11: ಸಾಮಾಜಿಕ ಜಾಲ ತಾಣಗಳ ಪೈಕಿ ಟ್ವಿಟ್ಟರ್ ವಿಶೇಷ, ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಕ್ಷಣಾರ್ಧದಲ್ಲಿ ಯಾರೊಬ್ಬರ ಘನತೆ, ಗೌರವವನ್ನು ಬೇಕಾದರೂ ಫೇಮಸ್ ಅಥವಾ ಕೆಳಮಟ್ಟಕ್ಕೆ ಕುಸಿಯುವಂತೆ ಮಾಡಿ ಬಿಡಬಹುದು.

ಆದರೆ, ಎಲ್ಲವೂ ಸಂಘಟಿತ ಕಾರ್ಯದಿಂದ ಮಾತ್ರ ಸಾಧ್ಯ. ನಿನ್ನೆಯಿಂದ ಇದೇ ರೀತಿ ಒಂದು ಪ್ರಸಂಗ ಕಂಡು ಬಂದಿದೆ. WeLove/Hate Karnataka ಎರಡು ಕೂಡಾ ಟ್ರೆಂಡ್ ಆಗಿ ಮರೆಯಾಗಿವೆ.

Why #WeLoveKarnataka trending in Bengaluru

ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ, ಮನರಂಜನೆ ಜೊತೆಗೆ ಇತ್ತೀಚೆಗೆ ಈ ರೀತಿ ವರ್ಚುಯಲ್ ವಾರ್ ಗಳು ಕೂಡಾ ಹೆಚ್ಚಾಗಿವೆ.


ಇತ್ತೀಚೆಗೆ ಮದರ್ ತೆರೆಸಾ ಅವರನ್ನು ಸಂತಪದವಿಗೇರಿಸಿದ ದಿನದಂದು fraud teresa ಟ್ರೆಂಡ್ ಮಾಡಲಾಯಿತು.

ಆ ದಿನ ಹೆಚ್ಚು ಸುದ್ದಿಯಲ್ಲಿರುವವರು ತಾನಾಗೇ ಟ್ರೆಂಡ್ ಆಗುತ್ತಾರೆ. ಕೆಲವೊಮ್ಮೆ ಸಂಘಟಿತ ಬಲದಿಂದ ಟ್ರೆಂಡ್ ಮಾಡಲಾಗುತ್ತದೆ. ಉದಾಹರಣೆಗೆ #venkayyasakayya ಹ್ಯಾಶ್ ಟ್ಯಾಗ್ ಟ್ರೆಂಡ್.

ಬೆಂಗಳೂರಿನಲ್ಲಿರುವ ಅನ್ಯಭಾಷಿಗರು ಕರ್ನಾಟಕದ ವಿರುದ್ಧ ಟ್ಯಾಗ್ ಟ್ರೆಂಡ್ ಮಾಡಿ ಟ್ವೀಟ್ ಮಾಡಿದ್ದರ ಪ್ರತಿಯಾಗಿ WeLoveKarnataka ಟ್ರೆಂಡ್ ಮಾಡಲಾಯಿತು.

ಕರ್ನಾಟಕ ಬಂದ್, ಕಾವೇರಿ ವಿವಾದದ ಮುಂದುವರೆದ ಭಾಗ ಇದು ಎನ್ನಬಹುದು.

ಆದರೆ, ಕನ್ನಡಿಗರು ವಿಶಾಲ ಹೃದಯವುಳ್ಳವರು ನೀರಿಗಾಗಿ ಮಾತ್ರ ನಮ್ಮ ಹೋರಾಟ, ಇದು ಕನ್ನಡ vs ತಮಿಳರ ನಡುವಿನ ಯುದ್ಧವಲ್ಲ ಎಂದು ಕೊನೆಯಲ್ಲಿ ಸಾರಲಾಗಿದೆ.

ಒಟ್ಟಾರೆ, ಸಾಮಾಜಿಕ ಜಾಲ ತಾಣಗಳ ಸದ್ಬಳಕೆ ಹಾಗೂ ದುರ್ಬಳಕೆ ಎಲ್ಲವನ್ನು ಒಟ್ಟೊಟ್ಟಿಗೆ ಕಾಣಲಾಗುತ್ತಿದೆ.

WeLoveKarnataka ಟ್ರೆಂಡ್ ಆದ ಕಾಲದಲ್ಲಿ ಕಂಡು ಬಂದ ಕೆಲ ಟ್ವೀಟ್ ಗಳು ಇಲ್ಲಿವೆ ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Why #WeLoveKarnataka trending in Bengaluru. Kannadigas started tweeting with #WeLoveKarnataka with in intend to show the solidarity against the twitteratis who were trending with hate messages
Please Wait while comments are loading...